ಭಾನುವಾರ, 10 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸಹೋದ್ಯೋಗಿಗಳ ಮನ ಗೆಲ್ಲಲು ಪ್ರಯತ್ನಿಸಿ
Published 11 ಮಾರ್ಚ್ 2026, 0:10 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮುಂಜಾನೆಯಿಂದಲೇ ಉತ್ಸಾಹಿಗಳಾಗಿರುತ್ತೀರಿ. ರಕ್ಷಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು ಈ ದಿನ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಉತ್ತಮ.
ವೃಷಭ
ಹೊಸ ಕೆಲಸಕ್ಕೆ ಕೈ ಹಾಕಲಿಚ್ಛಿಸಿರುವ ನೀವು ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಬೇಕಾಗುವ ಎಲ್ಲಾ ಕಾರ್ಯಗಳನ್ನು ಪ್ರಾರಂಭಿಸಿ. ನಿಜವಾದ ಗೆಳೆಯ ಯಾರೆಂದು ಈ ದಿನ ಅರಿತು ಕೊಳ್ಳುವಿರಿ.
ಮಿಥುನ
ಹಿರಿಯರ ಸಲಹೆಗಳನ್ನು ಪಡೆದುಕೊಂಡು ಕಾರ್ಯಪ್ರವೃತ್ತರಾಗುವುದು ಉತ್ತಮ. ಮಕ್ಕಳೊಂದಿಗೆ ಸುಖ ಭೋಜನ ನಡೆಯುವುದು. ಆಪಾದನೆಗಳು ಬರುವ ಸಾಧ್ಯತೆಗಳಿದೆ.
ಕರ್ಕಾಟಕ
ಮೇಲಾಧಿಕಾರಿಗಳ ಒತ್ತಾಯದ ಕೆಲಸಗಳಿಗೆ ಸಮರ್ಪಕ ಉತ್ತರ ನೀಡುವಿರಿ. ಸ್ವಂತ ಉದ್ಯೋಗ ನಡೆಸುವವರು ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಗಮನಹರಿಸಿ.
ಸಿಂಹ
ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭ ಬರಲಿದೆ. ವಿದೇಶದಲ್ಲಿ ಉದ್ಯೋಗ ಪಡೆಯುವ ನಿಮ್ಮ ಪ್ರಯತ್ನಕ್ಕೆ ಜಯ ಸಿಗಲಿದೆ.
ಕನ್ಯಾ
ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಿದರೂ ದಿನಾಂತ್ಯದಲ್ಲಿ ಪೂರ್ಣಗೊಳ್ಳಲಿವೆ. ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಮ್ಮ ಪರಿಪೂರ್ಣ ಪ್ರಯತ್ನವನ್ನು ಹಾಕುವುದು ಅಗತ್ಯ.
ತುಲಾ
ಮದುವೆಯ ವಿಷಯದಲ್ಲಿ ಹಿರಿಯರಿಗೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ. ದುಷ್ಕೃತ್ಯಗಳ ದುಷ್ಫಲವನ್ನು ಅನುಭವಿಸುತ್ತಿರುವ ನೀವು ಈ ದಿನ ಪಶ್ಚಾತಾಪದಿಂದ ಸ್ವಲ್ಪಮಟ್ಟಿನ ಚೇತರಿಕೆ ಕಾಣುವಿರಿ.
ವೃಶ್ಚಿಕ
ಅಡೆತಡೆಯಿಲ್ಲದೆ ಮನೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿ ಸುವಿರಿ. ರಾಜಕೀಯ ವರ್ಗದವರಿಗೆ ಹೆಚ್ಚಿನ ಸ್ಥಾನಮಾನ ಸಿಗಲಿದೆ. ನಿಮ್ಮ ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ನಿಮಗೆ ಈ ದಿನ ತಿಳಿಯುವುದು.
ಧನು
ಸರ್ವರಂಗದಲ್ಲೂ ಜಯಶಾಲಿಯ ಪಟ್ಟ ಹೊಂದುವ ಯೋಗವಿದೆ. ಅಂತರ್ಜಾಲ ಕುರಿತಾಗಿ ಕೆಲಸವನ್ನು ಮಾಡುವವರಿಗೆ ಪದೇ ಪದೇ ತಪ್ಪುಗಳು ಸಂಭವಿಸಬಹುದು. ಸಹಕಾರ ಸಂಘದ ಸಹಾಯವನ್ನು ಪಡೆಯಬಹುದು.
ಮಕರ
ವ್ಯಾಪಾರದ ಅಭಿವೃದ್ಧಿಗೆ ಬೇಕಾದ ಆರ್ಥಿಕ ಬಲದ ಜೊತೆಯಲ್ಲಿ ಕೆಲವು ವ್ಯಾಪಾರದ ಉಪಾಯಗಳನ್ನು ಬಳಸುವುದು ಉತ್ತಮ. ಮಕ್ಕಳ ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಿ ನೆಮ್ಮದಿ ಇರಲಿದೆ. ಹಣದ ಹರಿವು ಸರಾಗವಾಗಿರಲಿದೆ.
ಕುಂಭ
ಸ್ಥಗಿತಗೊಂಡ ಕಾರ್ಯಕ್ಕೆ ಪುನಃ ಚಾಲನೆ ದೊರೆತು ಸಂತಸ ಹೊಂದುವಿರಿ. ಕಠಿಣ ಪರಿಶ್ರಮದ ಮೂಲಕ ಸಹೋದ್ಯೋಗಿಗಳ ಮನ ಗೆಲ್ಲಲು ಪ್ರಯತ್ನಿಸಿ. ಸಂಶೋಧಕರರಿಗೆ ಈ ದಿನ ಒದಗುವ ಮಾಹಿತಿಯಿಂದ ಅನುಕೂಲ.
ಮೀನ
ಆರಕ್ಷಕ ವರ್ಗದವರಿಗೆ ಅಥವಾ ಕಾವಲು ಪಡೆಯವರಿಗೆ ಕಾರ್ಯ ದೊತ್ತಡ ಹೆಚ್ಚಲಿದೆ ಹಾಗೂ ವೃತ್ತಿಯಲ್ಲಿ ನಿಮ್ಮಿಂದ ತಪ್ಪುಗಳೂ ಸಂಭವಿಸಬಹುದು ಜಾಗರೂಕರಾಗಿರಿ. ದಂತ ವೈದ್ಯರಿಗೆ ಅನುಕೂಲವಾಗುವುದು.
ADVERTISEMENT
ADVERTISEMENT