ದಿನ ಭವಿಷ್ಯ: ಈ ರಾಶಿಯವರಿಗೆ ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ
Published 20 ಏಪ್ರಿಲ್ 2026, 23:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಹೋದರರಲ್ಲಿ ಅನರ್ಥಗಳು ನಡೆಯುವ ಸಂಭವವಿದೆ. ಅದರ ಪರಿಣಾಮ ಭಿನ್ನಾಭಿಪ್ರಾಯ ಮೂಡುವುದು. ಹೊಸ ವಾಹನ ಖರೀದಿಸುವ ಅವಶ್ಯಕತೆ ಹೆಚ್ಚಾಗಲಿದೆ.
20 ಏಪ್ರಿಲ್ 2026, 23:00 IST
ವೃಷಭ
ಹಿರಿಯರಿಂದ ಪಡೆದ ಸಲಹೆಯು ಜೀವನಕ್ಕೆ ಹೊಸ ಬುನಾದಿಯಾಗಲಿದೆ. ಗುರಿಯನ್ನು ತಲುಪಲು ನೆರವಾಗುವುದು. ಧನಾಗಮನ ಹೆಚ್ಚಿದ್ದರೂ ಸಂಪಾದನೆಯ ಬಹುಪಾಲು ವೆಚ್ಚವಾಗಲಿದೆ.
20 ಏಪ್ರಿಲ್ 2026, 23:00 IST
ಮಿಥುನ
ಉದ್ಯೋಗದಲ್ಲಿ ನಿಧಾನಗತಿಯ ಕೆಲಸ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ಮನೆಯವರೊಂದಿಗೆ ಸುಖ ಭೋಜನ ಮಾಡುವ ಅವಕಾಶ ಸಿಗಲಿದೆ. ತಂದೆ ಮಕ್ಕಳ ಸಂಬಂಧ ಗಾಢವಾಗಿರುವುದು.
20 ಏಪ್ರಿಲ್ 2026, 23:00 IST
ಕರ್ಕಾಟಕ
ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ನೆಮ್ಮದಿ ಸಿಗಲಿದೆ. ಮೂರ್ಖತನದಿಂದಾಗಿ ಬಂಧು-ಬಾಂಧವರು ದೂರವಾಗುವ ಸಂಭವವಿದೆ. ತೆಂಗಿನಕಾಯಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.
20 ಏಪ್ರಿಲ್ 2026, 23:00 IST
ಸಿಂಹ
ಕಾರ್ಯಗಳಿಗೆ ಅಡ್ಡಿ ಉಂಟಾದಲ್ಲಿ ಸರಿಯಾಗಿ ವಿಮರ್ಶಕರಲ್ಲಿ ವಿಮರ್ಶಿಸಿ ಮುಂದುವರಿಯಿರಿ. ಹೊಸ ಜಾಗದಲ್ಲಿ ಅಥವಾ ಹೊರರಾಜ್ಯವೊಂದರಲ್ಲಿ ಕೆಲಸ ನಿರ್ವಹಿಸಬೇಕಾಗುವುದು. ತಂದೆಯಲ್ಲಿಟ್ಟ ಬೇಡಿಕೆಗಳು ಈಡೇರಲಿವೆ.
20 ಏಪ್ರಿಲ್ 2026, 23:00 IST
ಕನ್ಯಾ
ತಾಂತ್ರಿಕ ವೃತ್ತಿಯವರಿಗೆ ಕಾರ್ಯರಂಗದಲ್ಲಿ ಮತ್ತು ಕಾರ್ಯಸ್ಥಳದಲ್ಲಿ ಹಿತ ಎನಿಸುವ ಘಟನೆ ನಡೆಯಲಿದೆ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.
20 ಏಪ್ರಿಲ್ 2026, 23:00 IST
ತುಲಾ
ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಕುಟುಂಬಕ್ಕೆ ಮಾತ್ರವಲ್ಲದೆ, ನಿಮ್ಮ ಸುತ್ತಲಿನ ಬೇರೆ ಜನರ ಜೀವನಕ್ಕೆ ಕೂಡ ಮಾರ್ಗದರ್ಶಿಯಾಗಲಿದೆ. ಪ್ರಭಾವಿ ವ್ಯಕ್ತಿಗಳ ನಿಕಟ ಸಂಪರ್ಕವು ಕಾರ್ಯಾನುಕೂಲ ಮಾಡಿಕೊಡುವುದು.
20 ಏಪ್ರಿಲ್ 2026, 23:00 IST
ವೃಶ್ಚಿಕ
ಆರಂಭ ಸ್ವಲ್ಪ ಗೊಂದಲಮಯವಾದರೂ, ತಪ್ಪಿದ ಪ್ರಯಾಣದಿಂದ ವಿರಾಮಕ್ಕೆ ಅವಕಾಶವಿರುವುದು. ಸಮಯ ಕಳೆದಂತೆ ಅನಗತ್ಯ ಚಿಂತೆ, ಭಯಗಳು ದೂರಾಗಲಿವೆ.
20 ಏಪ್ರಿಲ್ 2026, 23:00 IST
ಧನು
ಹತ್ತಾರು ವಿಷಯಗಳಲ್ಲಿ ಗಮನ ಹರಿಸುವುದಕ್ಕಿಂತ ನಿರ್ದಿಷ್ಟವಾದ ಒಂದು ಗುರಿಯ ಕಡೆಗೆ ತಲುಪುವ ಪ್ರಯತ್ನ ಮಾಡಿ. ಪಾಲುದಾರಿಕೆ ವ್ಯವಹಾರದವರಿಗೆ ಬಂಡವಾಳದ ಅವಶ್ಯಕತೆ ಇಂದು ಬರುವುದು.
20 ಏಪ್ರಿಲ್ 2026, 23:00 IST
ಮಕರ
ವೃತ್ತಿ ಬದುಕಿನಲ್ಲಿ ಜವಾಬ್ದಾರಿ ಕಡಿಮೆಯಾದ ಕಾರಣ ನಿಂದನೆಗೆ ಒಳಗಾಗುವ ಸನ್ನಿವೇಶ ಎದುರಾಗಬಹುದು. ಕಾರ್ಯಾಗಾರದಲ್ಲಿ ಗುಂಪಿನ ಮುಂದಾಳತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕಾಗುವುದು.
20 ಏಪ್ರಿಲ್ 2026, 23:00 IST
ಕುಂಭ
ಸಂಬಂಧವಿರದ ಕೆಲಸಕ್ಕಾಗಿ ತಿರುಗಾಟವಾದರೂ ಹೊಸ ಜನರ ಪರಿಚಯ, ಹೊಸ ಅನುಭವ ನೆಮ್ಮದಿಯನ್ನು ತರುತ್ತದೆ. ಮನಃಕ್ಲೇಶವು ಸಾಮರಸ್ಯದಿಂದ ದೂರಾಗುತ್ತದೆ.
20 ಏಪ್ರಿಲ್ 2026, 23:00 IST
ಮೀನ
ಕೌಟುಂಬಿಕ ವಿಚಾರದಲ್ಲಿ ಇನ್ನೊಬ್ಬರ ಮಾತನ್ನು ಕೇಳಿ ಪರಾಮರ್ಶಿಸದೇ ವಿವೇಚನೆಯನ್ನು ಕಳೆದುಕೊಳ್ಳಬೇಡಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ತೋರಿಬಂದು ವಿದ್ಯಾರ್ಥಿಗಳಿಗೆ ನಿರಾಸೆ ಹಾಗು ಕೋಪ ಕಾಡಲಿದೆ.
20 ಏಪ್ರಿಲ್ 2026, 23:00 IST