ಶುಕ್ರವಾರ, 15 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಆಲಂಕಾರಿಕ ವಸ್ತುಗಳಿಗೆ ಖರ್ಚು ಮಾಡುವಿರಿ
Published 5 ಮೇ 2026, 22:50 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿಯಲ್ಲಿ ಅಧಿಕಾರಿಗಳು ಕಾರ್ಯಸಾಧನೆ ಗುರುತಿಸಿ ಸೌಲಭ್ಯ ಒದಗಿಸಿಕೊಡುವರು. ಮಗನಿಗಾಗಿ ವೈದ್ಯಕೀಯ ಖರ್ಚು ಸಂಭವಿಸಬಹುದು. ಬಂಧುಗಳಲ್ಲಿ ನಿಷ್ಠುರ ವರ್ತನೆಗೆ ಆಸ್ಪದ ನೀಡುವುದು ಸರಿಯಲ್ಲ.
ವೃಷಭ
ಗೃಹನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ಆರ್ಥಿಕತೆ ತೊಂದರೆ ಸೃಷ್ಟಿ ಮಾಡಬಹುದು. ತೀಕ್ಷ್ಣ ಮಾತುಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುವ ಸಂದರ್ಭ ಬರಲಿದೆ. ತೈಲ ಉತ್ಪನ್ನಗಳ ಮಾರಾಟದಿಂದ ಲಾಭ.
ಮಿಥುನ
ಬೇರೆಯವರ ಸಹಾಯ ಅಪೇಕ್ಷಿಸದೆ ವಿಶ್ವಾಸದಿಂದ ಕಾರ್ಯೋನ್ಮುಖರಾಗಿ. ಜಯ ದೊರೆಯುತ್ತದೆ. ಮಿತ್ರರ ಉಪಾಯವೊಂದರಿಂದ ಸಂಕಟದಿಂದ ಪಾರಾಗುವಂತಾಗಲಿದೆ. ಆಲಂಕಾರಿಕ ವಸ್ತುಗಳಿಗೆ ಖರ್ಚು ಮಾಡುವಿರಿ.
ಕರ್ಕಾಟಕ
ಕನಸುಗಳಿಗೆ ಹಿರಿಯರ ಬೆಂಬಲ ಒದಗಿ ಬರಲಿದೆ. ಸಂಗಾತಿಯ ಅಭಿಪ್ರಾಯಗಳಿಗೂ ಗಮನಹರಿಸಿ. ಮೋಜು ಮಸ್ತಿಯ ಆಲೋಚನೆಯಿಂದ ದೂರವಿರುವ ಪ್ರಯತ್ನ ಒಳ್ಳೆಯದು.
ಸಿಂಹ
ಸಮಸ್ಯೆಗಳಿಗೆ ಕಾರಣವಾಗಿರುವ ಜನ, ಪರಿಸ್ಥಿತಿ ಬಗ್ಗೆ  ಮಾಹಿತಿ ಇಲ್ಲದಿದ್ದರೆ ತೊಂದರೆ ಉಲ್ಬಣಿಸುವ ಸಾಧ್ಯತೆ. ಸೂಕ್ಷ್ಮ ಮನಸ್ಸಿನ ನಿಮಗೆ ಹೆಚ್ಚಿನ ಜವಾಬ್ದಾರಿ ಜತೆಗೆ ರಹಸ್ಯ ಭೇದಿಸುವ ಹುದ್ದೆಗೆ ವರ್ಗವಾಗಲಿದೆ.
ಕನ್ಯಾ
ಜಲೋತ್ಪನ್ನ ವಸ್ತುಗಳ ಮಾರಾಟಗಾರರಿಗೆ ಅಥವಾ ನೀರಿಗೆ ಸಂಬಂಧಿಸಿದ ವ್ಯವಹಾರ ನಡೆಸುವವರಿಗೆ ಅಧಿಕ ಆದಾಯ ಇರಲಿದೆ. ಮಕ್ಕಳ ಆಸೆಗೆ ಅಡ್ಡಗಾಲು ಹಾಕಿ ಮನಸ್ಸನ್ನು ನೋವಿಸುವ ಕೆಲಸವನ್ನು ಮಾಡದಿರಿ.
ತುಲಾ
ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳದೇ ಇರುವುದರಿಂದ ವೈಯಕ್ತಿಕ ಜೀವನದಲ್ಲಿ ವಿಷಾದ, ದುಃಖ ಆವರಿಸುವ ಲಕ್ಷಣಗಳಿವೆ. ಆದಾಯಕ್ಕೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗಲಾರದು.
ವೃಶ್ಚಿಕ
ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಕುಶಲಮತಿಯಾಗಿರುವ ನೀವು ಅವಸರದಲ್ಲಿ ಸಣ್ಣ ತಪ್ಪು  ಮಾಡುವ ಲಕ್ಷಣಗಳಿದೆ.  ಬಿಡುವಿನ ಸಮಯವನ್ನು ಅತ್ಯಂತ ಪ್ರಯೋಜನಕರವಾಗಿ ಬಳಸುವಿರಿ.
ಧನು
ಸಾಕಷ್ಟು ಸಮಸ್ಯೆಗಳು ಆತ್ಮವಿಶ್ವಾಸಕ್ಕೆ ಅಡ್ಡಿ ಉಂಟುಮಾಡಲಿದೆ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇ ಬೇಕಾದ ಪರಿಸ್ಥಿತಿ ತೋರಲಿದೆ. ರಾಸಾಯನಿಕ ವಸ್ತುಗಳ ರಫ್ತು ವ್ಯವಹಾರ ನಡೆಸುವವರು ನಿಯಮಕ್ಕೆ ಬದ್ಧರಾಗಿರಿ.
ಮಕರ
ಕೆಲಸದ ನಿಮಿತ್ತ ದೂರ ಪ್ರಯಾಣ ಬೆಳೆಸುವುದು ಸರಿಯಲ್ಲ. ಅನಿವಾರ್ಯ ಎನಿಸಿದರೆ ಸ್ನೇಹಿತರೊಂದಿಗೆ ಪ‍್ರಯಾಣ ಮಾಡಿ. ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಲು ಸೂಕ್ತವಾದ ಸಮಯ.
ಕುಂಭ
ಅನಿಸಿಕೆಗಳನ್ನು ಉತ್ತಮ ರೀತಿಯಲ್ಲಿ ಅಭಿವ್ಯಕ್ತಗೊಳಿಸಲು ಸಾಧ್ಯ ವಾಗುವುದು ಕಷ್ಟವೆನಿಸುತ್ತದೆ. ದುರಭ್ಯಾಸಗಳು ಹೊಂದಿದ ಸ್ನೇಹಿತರಿಂದ ಆಪತ್ತಿಗೆ ಸಿಲುಕಬಹುದು. ಧಾರ್ಮಿಕ ಕಾರ್ಯದಿಂದ ಸಂತೋಷ ಸಿಗುವುದು.
ಮೀನ
ತಪ್ಪುಗಳನ್ನು ತಿದ್ದಿಹೇಳುವಲ್ಲಿ ಹಿರಿಯ ಅಧಿಕಾರಿಗಳು ನೆರವಿಗೆ ನಿಲ್ಲುವರು. ಬಟ್ಟೆ ವ್ಯಾಪಾರಿಗಳಿಗೆ ರೇಷ್ಮೆ ಮತ್ತು ಹತ್ತಿ ಬಟ್ಟೆಯ ಮೇಲೆ ಅಧಿಕ ಬಂಡವಾಳ ಹೂಡುವ ಬಗ್ಗೆ ಯೋಚನೆ ಬರಲಿದೆ.
ADVERTISEMENT
ADVERTISEMENT