ದಿನ ಭವಿಷ್ಯ: ಈ ರಾಶಿಯವರಿಗೆ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ
Published 15 ಏಪ್ರಿಲ್ 2026, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕರ್ತವ್ಯದಂತಿರುವ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿ ಸುವುದರಿಂದ ಧರ್ಮ ಕಾರ್ಯದಲ್ಲಿ ಆಸಕ್ತಿ ಮೂಡುವುದು. ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನ.
15 ಏಪ್ರಿಲ್ 2026, 21:30 IST
ವೃಷಭ
ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶವಾಗಲಿದ್ದು, ಅವರಿಂದ ಸಿಗುವ ಸಲಹೆ, ಸಹಕಾರ ಮರೆಯಲಾಗದಂತೆ ಇರುವುದು. ವೃತ್ತಿಪರ ಕಾರ್ಯದಲ್ಲಿ ನಿರ್ದಾಕ್ಷಿಣ್ಯವಾಗಿ ವ್ಯವಹರಿಸಿ.
15 ಏಪ್ರಿಲ್ 2026, 21:30 IST
ಮಿಥುನ
ಸ್ನೇಹಿತರ ಸಲಹೆ ಅಥವಾ ಸ್ವಾರ್ಥದ ಮನೋಭಾವದಿಂದ ಬರುವ ಆಲೋಚನೆಗಳು ದಾರಿತಪ್ಪಿಸಲಿವೆ. ರಾಜಕೀಯ ವ್ಯಕ್ತಿಗಳು ಪರಿಸ್ಥಿತಿಯ ಲಾಭ ಪಡೆದುಕೊಳ್ಳುವರು.
15 ಏಪ್ರಿಲ್ 2026, 21:30 IST
ಕರ್ಕಾಟಕ
ಭೂ ಸಂಬಂಧದ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ. ನಿಯಮಿತ ಕೆಲಸಕ್ಕೆ ಸೂಕ್ತ ಪ್ರಶಂಸೆ ಸಿಗಲಿದೆ. ಆರೋಗ್ಯದ ಕಡೆಗೆ ಗಮನವಿರಲಿ.
15 ಏಪ್ರಿಲ್ 2026, 21:30 IST
ಸಿಂಹ
ವಿಶೇಷ ವ್ಯಕ್ತಿಗಳ ಭೇಟಿ ಸಂತೋಷ ತರುವುದಲ್ಲದೆ, ನಿಮ್ಮ ಹೊಸ ಯೋಜನೆಗಳಿಗೆ ಚೈತನ್ಯ ತುಂಬುವುದು. ಕಾರ್ಯಸಾಧಕರ ಮನೋಕಾಮನೆಗಳು ಪೂರ್ಣಗೊಳ್ಳಲಿವೆ.
15 ಏಪ್ರಿಲ್ 2026, 21:30 IST
ಕನ್ಯಾ
ನವದಂಪತಿಗೆ ಹರ್ಷದ ಸಮಾಚಾರ ಕೇಳಿ ಬರುವುದರಿಂದ ಮನಸ್ಸಿಗೆ ನೆಮ್ಮದಿ. ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಂಧಾನದ ಅಥವಾ ಷರತ್ತುಗಳ ಮೂಲಕ ಬಗೆಹರಿಸಿಕೊಳ್ಳಿ.
15 ಏಪ್ರಿಲ್ 2026, 21:30 IST
ತುಲಾ
ಅಹಂಕಾರಭಾವದ ನಡವಳಿಕೆಯಿಂದ ಸೋಲು ಸಂಭವಿಸುವುದು. ಕುಟುಂಬ ಸದಸ್ಯರ ಆರೋಗ್ಯ ವಿಷಯದಲ್ಲಿನ ಚಿಂತೆ ತಪ್ಪಿದ್ದಲ್ಲ. ಆಡಳಿತ ವರ್ಗದವರಿಗೆ ಸಿಬ್ಬಂದಿಗಳಿಂದ ಪ್ರಶಂಸೆ ದೊರೆಯುತ್ತದೆ.
15 ಏಪ್ರಿಲ್ 2026, 21:30 IST
ವೃಶ್ಚಿಕ
ವೈಯಕ್ತಿಕ ವಿಚಾರಗಳಲ್ಲಿ ಸೃಷ್ಟಿಯಾದ ಸಣ್ಣ ಪುಟ್ಟ ಬದಲಾವಣೆಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ. ವಸ್ತ್ರ ವಿನ್ಯಾಸಗಾರರಿಗೆ ವಿಶೇಷ ಪರಿಣತಿಯ ಅಗತ್ಯವಿದೆ. ಸಾಮಗ್ರಿ ಖರೀದಿಯಿಂದ ಖರ್ಚು ಬರಲಿದೆ.
15 ಏಪ್ರಿಲ್ 2026, 21:30 IST
ಧನು
ಗೃಹೋಪಕರಣ ಖರೀದಿ ಅಥವಾ ಕೆಲವಾರು ಯೋಜನೆಗಳಲ್ಲಿ ಎಡವಿದ ಅನುಭವ ಆಗಲಿದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹವಿರುತ್ತದೆ. ಇದರಿಂದ ವಿದ್ಯಾಪ್ರಗತಿಗೆ ತೊಂದರೆಯಾಗಬಹುದು.
15 ಏಪ್ರಿಲ್ 2026, 21:30 IST
ಮಕರ
ಇಂದಿನವರೆಗೂ ಲೌಕಿಕ ಜೀವನವನ್ನು ಯಾವುದೇ ಯೋಚನೆ ಇಲ್ಲದೆ ಮಾಡುತ್ತಿದ್ದ ನಿಮಗೆ ಇಂದಿನಿಂದ ಮುಕ್ತಿ ಹಾಗೂ ಅದಕ್ಕೆ ಸಂಬಂಧ ಪಟ್ಟಂತಹ ವಿಚಾರದಲ್ಲಿ ಆಸಕ್ತಿ ಬರಲಿದೆ.
15 ಏಪ್ರಿಲ್ 2026, 21:30 IST
ಕುಂಭ
ಹಣಕಾಸಿನ ವ್ಯವಹಾರಗಳೆಲ್ಲ ಸುಗಮವಾಗಿ ಸಾಗುತ್ತಿರುವುದರಿಂದ ಮನಸ್ಸು ನಿರಾಳವಾಗಿರುವುದು. ಹೂಗಳ ರಫ್ತು ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಪಡೆಯಬಹುದು. ಕೃಷಿಕರಿಗೆ ಕೆಲಸಗಳು ಪ್ರಾರಂಭವಾಗಲಿವೆ.
15 ಏಪ್ರಿಲ್ 2026, 21:30 IST
ಮೀನ
ವ್ಯವಹಾರದಲ್ಲಿ ಮಂದಗತಿಯ ನಡೆ ಕಂಡರೂ ಅಭಿವೃದ್ಧಿಯಂತೂ ಖಚಿತ. ಆಸೆಗಳು ಬಹುಮಟ್ಟಿಗೆ ಈಡೇರುವುದರಿಂದ ಹೊಸ ಹುರುಪು ಮೂಡಲಿದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು.
15 ಏಪ್ರಿಲ್ 2026, 21:30 IST