ದಿನ ಭವಿಷ್ಯ: ಈ ರಾಶಿಯವರಿಗೆ ಅಚಾನಕ್ ಆಗಿ ಧನಲಾಭವಾಗುವ ಸಾಧ್ಯತೆ
Published 30 ಜುಲೈ 2023, 18:30 IST
ಪ್ರಜಾವಾಣಿ ವಿಶೇಷ
ಮೇಷ
ಹಣ ಬೆಳವಣಿಗೆಗಾಗಿ ಹೂಡಿಕೆ ಮಾಡುವುದಿದ್ದರೆ ನಂಬಿಕಸ್ಥರಿಂದ ಕೇಳಿ ತಿಳಿದು ನಂತರವಷ್ಟೇ ಮಾಡಿ. ವೃತ್ತಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗಲು ಸಹಾಯವಾಗುವ ತರಹದ ಬದಲಾವಣೆಗಳು ಬರುವವು.
ವೃಷಭ
ಕ್ಷೇತ್ರದಲ್ಲಿ ಶ್ರೇಯಸ್ಸನ್ನು ಪಡೆಯಲು ಈ ಹಿಂದೆ ಉಪಯೋಗಿಸಿದ ತಂತ್ರಗಳು ಈ ಬಾರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಯಾವುದೇ ಸಮಸ್ಯೆಗಳಿದ್ದರೂ ಸಹ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಿರಿ.
ಮಿಥುನ
ಅಜಾನಕ್ ಆಗಿ ಧನಲಾಭವಾಗುವ ಸಾಧ್ಯತೆಗಳಿವೆ. ಗೃಹ ವಸ್ತುಗಳ ಖರೀದಿ ಮಾಡಿ ಬಂದ ನಂತರ ಕೊಟ್ಟ ಹಣದುಬಾರಿಯಾಯಿತೆಂಬ ಪಶ್ಚಾತಾಪವಾಗಬಹುದು. ಹುಸಿ ಭರವಸೆಯ ಮಾತುಗಳು ಸಿಗಬಹುದು.
ಕರ್ಕಾಟಕ
ಜೀವನವು ಮೇಲ್ನೋಟಕ್ಕೆ ಎಲ್ಲರ ಕಣ್ಣಿಗೂ ಉತ್ತಮ ಕಂಡು ಬಂದರೂ ಒಳಗಿನ ಸತ್ಯಾಂಶ ನಿಮಗೆ ಮಾತ್ರ ತೋರುವುದು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಾದವರು ನಿರ್ಲಕ್ಷಿಸಬೇಡಿ.
ಸಿಂಹ
ದೂರದ ಪ್ರಯಾಣವನ್ನು ಮಾಡಿ ಬಂದ ನಂತರ ಹವ ಬದಲಾವಣೆಯಾದ ಕಾರಣದಿಂದಾಗಿ ಉಂಟಾಗುವ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸುವಿರಿ. ದಿನದ ಅಂತ್ಯದಲ್ಲಿ ಯಾರಿಂದಲಾದರು ಶುಭಸುದ್ದಿ ಕೇಳುವಿರಿ.
ಕನ್ಯಾ
ಕುಟುಂಬದಲ್ಲಾಗಲಿ ಅಥವಾ ಕಾರ್ಯಕ್ಷೇತ್ರದಲ್ಲಾಗಲಿ ಅಭಿಪ್ರಾಯವನ್ನು ಬಹಿರಂಗವಾಗಿ ತಿಳಿಸಲು ಸಂಕೋಚಿಸಿಕೊಂಡರೆ ನಷ್ಟವಾಗುತ್ತದೆ. ಮನಸ್ಸಿನಲ್ಲಿ ವಿಷಯದ ದ್ವಂದ್ವಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಿ.ತುಲಾ: ವ್ಯವಹಾರದಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಲಾಭ ಮಾಡಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಿರಿ. ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯವರಿಗೆ ತರಬೇತಿಯ ಕರೆಯೋಲೆ ಬರಬಹುದು.
ತುಲಾ
ವ್ಯವಹಾರದಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಲಾಭ ಮಾಡಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಿರಿ. ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯವರಿಗೆ ತರಬೇತಿಯ ಕರೆಯೋಲೆ ಬರಬಹುದು.
ವೃಶ್ಚಿಕ
ಉದಯೋನ್ಮುಖ ಸಾಹಿತಿಗಳಿಗೆ ನಿಮ್ಮ ಚಿಂತನಾಶೀಲತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕೆಂಬ ಹಿತ ಸಲಹೆಗಳು ಅಭಿಮಾನಿಗಳ ಕಡೆಯಿಂದ ಬರಬಹುದು. ವಿವಾದ ವಿಚಾರಗಳ ಬಗ್ಗೆ ಈ ದಿನದಲ್ಲಿ ಮಾತನಾಡುವುದು ಬೇಡ.
ಧನು
ಕಠಿಣ ಪರಿಶ್ರಮದಿಂದಾಗಿ ಬೆಳೆಸಿದ ಸಂಸ್ಥೆ ಜನಮಾನಸವನ್ನು ಗೆಲ್ಲುವುದು. ವಿಷಯಗಳನ್ನು ಸೋರಿಕೆ ಮಾಡುತ್ತಿರುವವರು ಕುಟುಂಬದರೇ ಇರಬಹುದು ಎಂಬ ಅನುಮಾನದಿಂದ ಎಲ್ಲರನ್ನೂ ಪರೀಕ್ಷಿಸುವಿರಿ.
ಮಕರ
ಬೇರೆಯವರ ತಪ್ಪುಗಳನ್ನು ಎತ್ತಿ ಹಿಡಿಯುವ ವ್ಯಕ್ತಿತ್ವ ಎಲ್ಲರ ದೂಷಣೆಗೆ ಒಳಗಾಗುವುದು. ಅನುಕೂಲಕರವಾದಂಥ ವಾತಾವರಣವಿದ್ದಲ್ಲಿ ವಿಶೇಷ ದಿನಗಳಿಗೆ ಬೇಕಾದ ವಸ್ತು ಖರೀದಿ ಮಾಡಿ.
ಕುಂಭ
ಜೀವನದಲ್ಲಿ ನಿರೀಕ್ಷಿಸಿದ ಫಲಿತಾಂಶದ ಬದಲು ಬಂದಂಥ ಫಲಿತಾಂಶವು ಅಪೇಕ್ಷಿತಕ್ಕಿಂತ ಹೆಚ್ಚಿನ ಸಂತೋಷವನ್ನು ನೀಡುವುದು. ದಂಪತಿಗಳಲ್ಲಿ ಹಲವು ದಿನಗಳ ಜಗಳವು ಇತ್ಯರ್ಥಗೊಳ್ಳಲಿದೆ.
ಮೀನ
ವಿಶೇಷ ಖಾದ್ಯಗಳ ತಯಾರಕರಿಗೆ ಬೇಡಿಕೆ ಬರುವುದು. ವೃತ್ತಿಯಲ್ಲಿ ಸ್ಥಾನಪಲ್ಲಟ ಬಯಸಿದ ನಿಮಗೆ ಹೊಸ ಕಾರ್ಯಸ್ಥಾನವು ಹಳೆಯದರಕ್ಕಿಂತ ಕಳಪೆಮಟ್ಟದಲ್ಲಿ ತೋರಬಹುದು. ಅಣ್ಣ ತಮ್ಮಂದಿರ ಸಮಾಗಮವಾಗುವುದು.