ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಅವಮಾನಿಸಿದ ವ್ಯಕ್ತಿಗಳಿಂದ ಗೌರವ ನಿರೀಕ್ಷಿಸಬಹುದು
Published 24 ಸೆಪ್ಟೆಂಬರ್ 2024, 20:49 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪರಿಶ್ರಮದ ಫಲವಾಗಿ ಅವಮಾನಿಸಿದ ವ್ಯಕ್ತಿಗಳಿಂದ ಗೌರವ ಪಡೆಯುವಂಥ ಕಾಲವನ್ನು ನಿರೀಕ್ಷಿಸಬಹುದು. ವ್ಯಾಪಾರ ನಿಮಿತ್ತ ಜನಗಳ ವಿಶ್ವಾಸವನ್ನು ಸಂಪಾದಿಸುವಲ್ಲಿ ಯಶಸ್ವಿಯಾಗುವಿರಿ.
ವೃಷಭ
ರಾಜಕಾರಣಿಗಳು ಸುತ್ತಲಿನ ಜನರ ಸಹಾಯವನ್ನು ಪಡೆಯುವಲ್ಲಿ ಸೋಲನ್ನು ಕಾಣುವ ಸ್ಥಿತಿ ಬರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅನೇಕ ತರಹದ ಅವಕಾಶಗಳು ಒದಗಿಬರುತ್ತವೆ. ಯಾತ್ರಿಗಳಿಗೆ ಶುಭ.
ಮಿಥುನ
ತಪ್ಪು ಮಾಡುವುದು ಮಕ್ಕಳ ಸ್ವಾಭಾವಿಕ ಗುಣವೆಂಬುವುದು ಮರೆತು ಮಕ್ಕಳನ್ನು ಅತಿಯಾಗಿ ಶಿಕ್ಷಿಸಬೇಡಿ. ಅನಿವಾರ್ಯದ ಮಾತುಗಳನ್ನು ಎರಡು ಬಾರಿ ಯೋಚಿಸಿ ಮಾತನಾಡಿ. ಪ್ರೀತಿಪಾತ್ರರೊಡನೆ ಸಮಯ ಕಳೆಯುವಿರಿ.
ಕರ್ಕಾಟಕ
ನಿಯೋಜಿತವಾದ ಕಾರ್ಯಕಲಾಪಕ್ಕೆ ಅಡ್ಡಿ ಆತಂಕಗಳು ಎದುರಾಗಬಹುದು. ಆಹಾರ ಪದ್ಧತಿಯು ಅನಾರೋಗ್ಯಕ್ಕೆ ಮೂಲ ಕಾರಣವಾಗುತ್ತದೆ. ಆದಾಯದ ಬಗ್ಗೆಯೂ ಗಮನವಿರಲಿ.
ಸಿಂಹ
ಕಾರ್ಖಾನೆಯೊಂದನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಅವಕಾಶಗಳು ನಂಬಿಕಸ್ಥ ಸ್ನೇಹಿತನ ಸಹಾಯದಿಂದ ಪಡೆಯಬಹುದು. ವ್ಯವಹಾರಿಕ ಸಂಬಂಧಗಳು ವಿಸ್ತಾರಗೊಳ್ಳುವ ಸಮಯ ಇದಾಗಿದೆ.
ಕನ್ಯಾ
ಕೆಲವೊಂದು ಜವಾಬ್ದಾರಿಯುತ ಕಾರ್ಯಗಳು ಮುಂದಾಳತ್ವದಲ್ಲಿ ನಡೆಯಲಿದೆ. ಆಹಾರದಲ್ಲಿ ಎಣ್ಣೆ ಮತ್ತು ಖಾರದ ಪದಾರ್ಥಗಳನ್ನು ಸಾಧ್ಯವಾದಷ್ಟು ಮಿತವಾಗಿ ಬಳಸಿ.
ತುಲಾ
ಸರ್ಕಾರಿ ಸಂಬಂಧ ವ್ಯವಹಾರಗಳಿಂದ ನಿರೀಕ್ಷೆಗೂ ಮೀರಿದ ಲಾಭ ಅನುಭವಿಸುತ್ತೀರಿ. ಹಣಕಾಸು ಸಂಸ್ಥೆಗಳ ನೆರವಿನಿಂದ ಬಹು ದಿನದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು.
ವೃಶ್ಚಿಕ
ಮನರಂಜನೆಗೂ ಸಾಕಷ್ಟು ಸಮಯವನ್ನು ಮೀಸಲಿಡುವುದರಿಂದ ನೆಮ್ಮದಿ ಇರಲಿದೆ. ಸಂಶೋಧಕರು ಸಾಧನೆಯ ಕುರಿತು ಹೆಮ್ಮೆ ಪಡಲು ಸುಸಮಯವಾಗಿದೆ. ಮಹಾಲಕ್ಷ್ಮಿಯ ಅನುಗ್ರಹ ಸಿಗಲಿದೆ.
ಧನು
ಮನೆ ಕಟ್ಟಲು ಅಥವಾ ಮನೆಯನ್ನು ನವೀಕರಿಸಲು ಹಣದ ವ್ಯವಸ್ಥೆ ಸಹೋದರರಿಂದ ಆಗಲಿದೆ. ನೈತಿಕವಾಗಿ ಪರಸ್ಪರ ಬೆಂಬಲವಾಗಿರುವ ಸ್ನೇಹ ಸಂಬಂಧವನ್ನು ಮುಂದುವರಿಸಿ.
ಮಕರ
ಸಂಸ್ಥೆಯಿಂದ ತರಬೇತಿ ಪಡೆದುಕೊಳ್ಳುವ ಅವಕಾಶಗಳು ಎದುರಾದಲ್ಲಿ ಸದುಪಯೋಗ ಪಡಿಸಿಕೊಳ್ಳಿ. ತಿಂಡಿ-ತಿನಿಸುಗಳ ವ್ಯಾಪಾರದಲ್ಲಿನ ಲಾಭ ಇನ್ನೊಂದು ವ್ಯವಹಾರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಕುಂಭ
ಮಗಳ ಆರೋಗ್ಯದಲ್ಲಿನ ವ್ಯತ್ಯಾಸಗಳು ನಿಮ್ಮನ್ನು ದುರ್ಬಲಗೊಳಿಸುವುದು. ನಿಮ್ಮ ಧೈರ್ಯದಿಂದ ಮಾತ್ರವೇ ಆಕೆ ಚೇತರಿಕೊಳ್ಳಲು ಸಾಧ್ಯ. ಸ್ಫೂರ್ತಿಯಿಂದ ಜೀವನ ನಡೆಸಿ.
ಮೀನ
ಅಭಿವೃದ್ಧಿಯ ವಿಚಾರದಲ್ಲಿ ಸ್ವಪ್ರಯತ್ನದೊಂದಿಗೆ ದೈವ ಬಲವೂ ಇರುತ್ತದೆ. ವೈದ್ಯ ವೃತ್ತಿಯವರಿಗೆ ತೃಪ್ತಿಕರ ವರಮಾನ ಪ್ರಾಪ್ತಿಯಾಗುತ್ತದೆ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ ಸಿಗಲಿದೆ.
ADVERTISEMENT
ADVERTISEMENT