ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಕೆಲಸಗಳೆಲ್ಲವೂ ನಿರಾತಂಕವಾಗಿ ಸಾಗಲಿವೆ
Published 27 ಸೆಪ್ಟೆಂಬರ್ 2024, 19:57 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಉತ್ಸಾಹ ತೋರುವಿರಿ. ವಿಳಂಬವಾಗಿದ್ದ ಕಾರ್ಯ ಕಲಾಪಗಳು ಚುರುಕುಗೊಂಡು ಹೆಚ್ಚಿನ ಅನುಕೂಲ ಒದಗಿ ಬರಲಿದೆ. ಹಸಿರು ಬಣ್ಣ ಅದೃಷ್ಟ ತರುತ್ತದೆ.
ವೃಷಭ
ಅಭಿಪ್ರಾಯಗಳು ಬೇರೆಯವರ ಆಲೋಚನೆಗೆ ಹೊಂದಿಕೊಳ್ಳುವುದು ಬಹಳ ಕಷ್ಟಕರ ಎಂದು ಅನಿಸಲಿದೆ. ಹಿರಿಯರೊಡನೆ ವಾಗ್ವಾದ ಬರದಂತೆ ಜಾಗ್ರತೆ ವಹಿಸಿರಿ. ವಾಹನ ಚಾಲಕರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ.
ಮಿಥುನ
ಸಿದ್ಧ ಉಡುಪು ಮಾರಾಟಗಾರರಿಗೆ ದೊಡ್ಡ ಪ್ರಮಾಣದ ಸಂಗ್ರಹಣೆಗೆ ಉತ್ತಮ ದಿನ. ಕಚೇರಿಯಲ್ಲಿದ್ದ ಭಿನ್ನಾಭಿಪ್ರಾಯಗಳು ಬಗೆಹರಿಯುವುದು. ಸಂಪರ್ಕ ಕಲ್ಪಿಸುವ ಕೆಲಸಗಾರರಿಗೆ ಹೆಚ್ಚಿನ ಕೆಲಸ ಇರುವುದು.
ಕರ್ಕಾಟಕ
ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುವ ಅಭ್ಯಾಸದಲ್ಲಿ ವ್ಯತ್ಯಾಸ ಆಗುವುದು. ಮಗನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಆಪ್ತರೊಬ್ಬರ ನೆರವು ದೊರೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಅಲೆದಾಟ ತಪ್ಪದು.
ಸಿಂಹ
ಸ್ವಲ್ಪ ಕಾಲದ ನಂತರ ಮಾಡುತ್ತೇನೆ ಎಂದು ನೀವು ಅಂದುಕೊಳ್ಳುವ ವಿಷಯಗಳು ಬಿಟ್ಟ ಹಂತದಲ್ಲೇ ನಿಂತು ಹೋಗುವ ಸಾಧ್ಯತೆ ಇರುವುದರಿಂದ ಅದನ್ನು ಈ ಕೂಡಲೇ ಪೂರೈಸುವ ಯೋಚನೆ ಮಾಡಿ.
ಕನ್ಯಾ
ರೈತರು ಬೆಳೆಗಳ ಅಭಿವೃದ್ಧಿ, ರಕ್ಷಣೆಯ ಬಗ್ಗೆ ಗಮನಹರಿಸುವುದು ಒಳ್ಳೆಯದು. ಸೇವಾ ಮನೋಭಾವಕ್ಕೆ ಕುಟುಂಬ ವರ್ಗದವರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಸಹವರ್ತಿಗಳೊಡನೆ ಸಂಯಮದಿಂದ ವರ್ತಿಸಿ.
ತುಲಾ
ಮಕ್ಕಳ ವಿಷಯದಲ್ಲಿ ಸಂಯಮದಿಂದ ವರ್ತಿಸುವುದು ಉತ್ತಮ. ದಿನಸಿ ವ್ಯಾಪಾರ ವಹಿವಾಟುಗಳು ಹೆಚ್ಚಿನ ಲಾಭ ತರಲಿದೆ. ಕೆಲಸಗಳೆಲ್ಲವೂ ನಿರಾತಂಕವಾಗಿ ಸಾಗಲಿದೆ.
ವೃಶ್ಚಿಕ
ಪ್ರತಿ ವರ್ಷದಲ್ಲಿ ಮಾಡಿಕೊಂಡುಬಂದ ಧಾರ್ಮಿಕ ಕೆಲಸವನ್ನು ಮುಂದುವರಿಸುವ ಬಗ್ಗೆ ತೀರ್ಮಾನಿಸಿ. ಕೆಲವು ವಿಚಾರದಲ್ಲಾದರೂ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿರಿ, ಅದರ ಫಲ ದೇವರು ಕೊಡುತ್ತಾನೆ.
ಧನು
ಉದ್ವೇಗ ಹಾಗೂ ಕೆಲ ವೈಮನಸ್ಯಗಳು ತಂದೆಯ ಮಾರ್ಗದರ್ಶನದಿಂದ ದೂರಾವಾಗುವುದು. ಉನ್ನತ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ಕೃಷಿ ಕಾರ್ಯವು ಬರದಿಂದ ಸಾಗುವುದು.
ಮಕರ
ಸ್ವಂತ ಕೆಲಸಕ್ಕಾಗಿ ಅಧಿಕಾರವನ್ನು ಬಳಸಿಕೊಳ್ಳಬೇಡಿ. ದುಬಾರಿ ವಸ್ತುಗಳ ಖರೀದಿಯಂಥ ಅನಾವಶ್ಯಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ತೋರಲಿದೆ.
ಕುಂಭ
ಸಾಮಾಜಿಕ ರಂಗದಲ್ಲಿ ಮುಜುಗರದ ಸನ್ನಿವೇಶಗಳು ಸೃಷ್ಟಿಯಾದೀತು ಜಾಗ್ರತೆವಹಿಸಿ. ಬೇಸರ ಕಳೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಸಂಜೆಯ ಸಮಯದಲ್ಲಿ ದೇಹಾಯಾಸ ಕಾಣುವುದು.
ಮೀನ
ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೆ ಆತಂಕಕ್ಕೆ ಪಡಬೇಕಿಲ್ಲ. ಈ ದಿನದ ನಿಮ್ಮ ಈ ಪರಿಶ್ರಮವು ಮುಂದಿನ ದಿನಕ್ಕೆ ಅಡಿಪಾಯವಾಗಲಿದೆ. ಸಂಜೆಯ ವೇಳೆ ಶುಭವಾಗಲಿದೆ.
ADVERTISEMENT
ADVERTISEMENT