ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸದಲ್ಲಿ ಮತ್ತಷ್ಟು ಒತ್ತಡ ಹೆಚ್ಚಾಗಲಿದೆ
Published 28 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕುಲದೇವರ ದರ್ಶನದಿಂದ ಎಲ್ಲಾ ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸಬಲ್ಲಿರಿ. ಸಗಟು ವ್ಯಾಪಾರಿಗಳಿಗೆ ಹೇರಳ ವ್ಯಾಪಾರ ಇರುವುದು. ಹಣದ ಪರಿಸ್ಥಿತಿ ಸುಧಾರಿಸಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು.
ವೃಷಭ
ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ. ಸಾಕುಪ್ರಾಣಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಸಂಶೋಧನೆಯ ಕೆಲಸಗಳು ಉತ್ತಮ ಫಲಿತಾಂಶವನ್ನು ಕಾಣಲಿದೆ.
ಮಿಥುನ
ಇತರರೊಂದಿಗೆ ಜತೆಗೂಡಿ ಕೆಲಸ ಮಾಡುವುದು, ನಾಲ್ಕಾರು ಜನರ ಜತೆಯಲ್ಲಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಶರೀರದಲ್ಲಿ ಆಯಾಸ ಕಡಿಮೆಯಾಗಿ ಉಲ್ಲಾಸವಿರುವುದು. ಕೆಲಸದ ಒತ್ತಡ , ಜವಾಬ್ದಾರಿ ಹೆಚ್ಚಲಿವೆ.
ಕರ್ಕಾಟಕ
ಯಾರೊಂದಿಗೆ ಸಮಸೆಗಳಿದ್ದರೂ ಸ್ವತಃ ನೀವೇ ಪರಿಹರಿಸಿಕೊಳ್ಳುವುದು ಉತ್ತಮ ಮಾರ್ಗ. ಆರೋಗ್ಯದ ವಿಚಾರದಲ್ಲಿ ಖರ್ಚು ವೆಚ್ಚದ ಲೆಕ್ಕಾಚಾರವನ್ನು ಮಾಡುವುದು ಸಮಂಜಸವಲ್ಲ.‌
ಸಿಂಹ
ದೈಹಿಕ ಮತ್ತು ಆರ್ಥಿಕ ಶಕ್ತಿಯನ್ನು ವ್ಯಯಿಸದೇ ಸಮಯಕ್ಕಾಗಿ ಕಾದು ಸಿಕ್ಕ ಸಮಯದಲ್ಲಿ ಕಾರ್ಯವೆಸಗುವ ಚಾಣಾಕ್ಷತನ ಇರುವುದು. ಅದನ್ನು ನೀವೇ ಕಂಡುಕೊಳ್ಳಿರಿ. ನಿರ್ಧಾರದಲ್ಲಿ ಅಸ್ಥಿರತೆ ಬೇಡ.
ಕನ್ಯಾ
ಹಲವು ದಿನಗಳಿಂದ ಉಳಿಸಿಕೊಂಡ ಕೆಲಸಗಳನ್ನು ಮುಂದೂಡುವುದು ಒಳ್ಳೆಯದಲ್ಲ. ಇಂದು ಶ್ರೀ ಲಕ್ಷ್ಮಿ ಸಮೇತನಾದ ವೇಂಕಟರಮಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಶುಭವಾಗುತ್ತದೆ. ಧೈರ್ಯ ನಿಮ್ಮ ಜೊತೆಯಾಗುವುದು.
ತುಲಾ
ನೂತನ ಸ್ಥಳದಲ್ಲಿ ಗೆಳೆಯರನ್ನು ಸಂಪಾದಿಸುವಂಥ ಕೆಲಸವನ್ನು ಮಾಡುವಿರಿ. ಕಾರಣವು ನಿಮಗೆ ತಿಳಿಯದೇ ಹೋದರೂ ತಂದೆ ತಾಯಿಯರ ಮುನಿಸು ಸಮಂಜಸವಾಗಿಯೇ ಇರುತ್ತದೆ. ಪತಿಯಲ್ಲಿ ವಿಶೇಷ ಗಮನ ಇರಿಸಿ.
ವೃಶ್ಚಿಕ
ಸರ್ಕಾರಿ ಕೆಲಸಗಳು ಗುತ್ತಿಗೆಯಾಗಿ ಲಭಿಸುವುದರ ಜತೆಗೆ ಲಾಭದಾ ಯಕವಾಗಿ ಇರುತ್ತವೆ. ಕೃಷಿ ಉತ್ಪನ್ನದ ವ್ಯಾಪಾರಿಗಳಿಗೆ ಇಂದು ಶುಭ ದಿನ. ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆ ಇದೆ.
ಧನು
ಮನೆಯಲ್ಲಿ ಹಲವು ಜನಗಳ ಅಕಾಂಕ್ಷೆಗಳನ್ನು ಪೂರೈಸಬೇಕಾದರೂ ನೆಮ್ಮದಿಯ ವಿಷಯವೇನೆಂದರೆ ಖರ್ಚಿಗೆ ತಕ್ಕಂತೆ ಧನಾಗಮನ ಇರುವು ದರಿಂದ ಚಿಂತೆ ಇರದು. ಮೇಧಾವಿಗಳಿಂದ ಧನ ಸಂಪಾದನೆ ಹೊಂದುವಿರಿ.
ಮಕರ
ಮನೆಯಲ್ಲಿ ನೆಮ್ಮದಿಯನ್ನು ಕಾಪಾಡುವ ಕಾರಣಕ್ಕಾಗಿ ಹಿರಿಯರನ್ನು ಸುಮ್ಮನಿರಿಸುವಂಥ ಕೆಲಸ ಮಾಡುವಿರಿ. ಕಾರ್ಯಕ್ಷೇತ್ರದಲ್ಲಿನ ಕೆಲಸಗಳನ್ನು ಎಲ್ಲರೂ ಶ್ಲಾಘಿಸುವಂತೆ ಮಾಡಿ ಮುಗಿಸುವಿರಿ. ನೀಲಿ ಶುಭವನ್ನು ತರುವುದು.
ಕುಂಭ
ಜೀವನವನ್ನು ಇನ್ನೊಬ್ಬರೊಂದಿಗೆ ಹೊಲಿಸಿಕೊಂಡು ಜೀವನ ನಡೆಸುವುದು ಸರಿಯಲ್ಲ. ನವದಂಪತಿ ದೀರ್ಘ ಪ್ರಯಾಣದ ನಂತರ ಮನೆಗೆ ಮರಳುವಿರಿ. ಸಾಗರದಾಚೆಗಿನ ವ್ಯವಹಾರಗಳಲ್ಲಿ ಲಾಭವಿರುತ್ತದೆ.
ಮೀನ
ಮುಂಬರುವ ಕಾರ್ಯಕ್ರಮದಲ್ಲಿನ ಆರ್ಥಿಕ ನಿರ್ವಹಣೆಗೆ ಖರ್ಚು ಗಳನ್ನು ನಿಲ್ಲಿಸುವಿರಿ. ಪರಿಚಯಸ್ಥರ ಮಗಳಿಗೆ ಯೋಗ್ಯ ವರನನ್ನು ಹುಡುಕಿ ಕೊಡುವಿರಿ. ಮೊಬೈಲ್ ಮಾರಾಟಗಾರರಿಗೆ ವಿಶೇಷ ದಿನವಾಗಬಹುದು.
ADVERTISEMENT
ADVERTISEMENT