ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಸರ್ಕಾರಿ ಕೆಲಸಗಳು ಕೈಗೂಡುವುದು
Published 27 ಆಗಸ್ಟ್ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮಲ್ಲಿರುವ ಕಲೆಗೆ ಒಂದು ನೆಲೆ ಕಲ್ಪಿಸುವ  ಹೋರಾಟವು ಅಕ್ಷರಶಃ ಸಫಲವಾಗಲಿದೆ. ಉದ್ಯೋಗ ಬದಲಾವಣೆ ವಿಚಾರದಲ್ಲಿದ್ದ ಗೊಂದಲವನ್ನು ಮಾರ್ಗದರ್ಶಕರ ಸೂಚನೆಯಂತೆ ನಿವಾರಿಸಿಕೊಳ್ಳಿರಿ.
ವೃಷಭ
ಸಂಘ-ಸಂಸ್ಥೆಯಲ್ಲಿ ಅಥವಾ ಗ್ರಾಮೀಣ ಬದುಕಿನಲ್ಲಿ ಅಧಿಕಾರ ಸಿಗಲಿದೆ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ. ನೆನಪಿನಶಕ್ತಿ ವೃದ್ಧಿಯಾಗಲು ಶಾರದಾಪರಮೇಶ್ವರಿಯನ್ನು ಆರಾಧಿಸಿ.
ಮಿಥುನ
ಸಣ್ಣ ಕಾರಣವನ್ನೇ ಹಿಡಿದು ಕೆಲಸದಿಂದ ಅಮಾನತುಗೊಳಿಸುವಂಥ ಸಾಧ್ಯತೆಗಳು ಬರಬಹುದು. ಸಂಬಂಧಿಗಳಿಂದ ಸಂತಸದ ಸುದ್ದಿ ಕೇಳುವಿರಿ. ಪೂರ್ಣ ಪ್ರಯತ್ನದಿಂದ ಕುಟುಂಬದ ಸಮಸ್ಯೆಗಳನ್ನು ಪರಿಹರಿಸುವಿರಿ.
ಕರ್ಕಾಟಕ
ಬರೆಯುತ್ತಿರುವ ಪುಸ್ತಕಕ್ಕೆ  ಕಣ್ಣೆದುರು ನಡೆದ ಒಂದು ಘಟನೆ ಮುಖ್ಯವಸ್ತುವನ್ನೇ ಬದಲು ಮಾಡುತ್ತದೆ. ಹಲವು ಕಾರಣಗಳಿಂದ ಅದೃಷ್ಟವಂತರೆಂದು ಅನ್ನಿಸಬಹುದು. ತರಕಾರಿ ಮಾರಾಟಗಾರರಿಗೆ ಉತ್ತಮ ದಿನ.
ಸಿಂಹ
ನಂದಾದೀಪವಾಗಿ  ಮನೆಗೆ ಮಗಳಾಗಿ ಬಂದವಳನ್ನು ಮತ್ತೊಂದು ಮನೆಯ ನಂದಾದೀಪವಾಗಿ ಕಳುಹಿಸಿಕೊಡುವ ಸನ್ನಿವೇಶ ಪದೇ ಪದೇ ನಿಮ್ಮ ಕಣ್ಣೆದುರು ಬರುವುದು. ವಿವಿಧ ಮೂಲಗಳಿಂದ ದ್ರವ್ಯಲಾಭ ಇರುವುದು.
ಕನ್ಯಾ
ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ, ಏಕಾಗ್ರತೆಯನ್ನು ಕಾಯ್ದುಕೊಳ್ಳಿ. ಹಲವು ದುಃಖಗಳು ಮಧುರ ಸಂಗೀತವನ್ನು ಕೇಳುವ ಮೂಲಕ ಪರಿಹರಿಸಿಕೊಳ್ಳುವಿರಿ. ಲೇವಾದೇವಿಯ ಹಣ ಕೈ ಸೇರುವುದು.
ತುಲಾ
ಮದುವೆಯ ಮುಂದುವರಿದ ಮಾತುಕತೆಗಳು ಗಮನಕ್ಕೆ ಬಾರದೇ ಹೋಗಬಹುದು. ವೃದ್ಧರ ಹಾಗು ಅನಾಥ ಮಕ್ಕಳ ಸೇವೆಯಿಂದಾಗಿ ಸಂತೋಷ ಹೊಂದುವ ಸಾಧ್ಯತೆ ಇದೆ. ಸರ್ಕಾರಿ ಕೆಲಸಗಳು ಕೈಗೂಡುವುದು.
ವೃಶ್ಚಿಕ
ವಿದೇಶಕ್ಕೆ ಹೋಗುವ ಅವಕಾಶಗಳನ್ನು ತಂದೆ ತಾಯಿಯರ ಹಿತಕ್ಕಾಗಿ ಹೋಗುವುದನ್ನು ನಿಲ್ಲಿಸುವಂತಾಗುವುದು. ಎಣಿಕೆಯಂತೆ ಜವಾಬ್ದಾರಿಯ ಕಾರ್ಯಗಳು ಸಿದ್ಧಿಸುವವು. ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ.
ಧನು
ರಾಜಕೀಯ ವ್ಯಕ್ತಿಗಳು ಜನರಲ್ಲಿ ತಾಳ್ಮೆಯಿಂದ ವರ್ತಿಸಿ. ಹೊಸ ಕೆಲಸಗಳನ್ನು ಪ್ರಾರಂಭ ಮಾಡಬೇಕಾದಾಗ ಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳುವುದು ಉತ್ತಮ. ಬಲ ಕಣ್ಣಿಗೆ ಅಪಾಯವಾಗುವ ಸಾಧ್ಯತೆಗಳಿವೆ.
ಮಕರ
ವಿಭಿನ್ನವಾಗಿ ಯೋಚಿಸುವ ನಿಮ್ಮಿಂದ ಕೆಲವು ಸವಾಲುಗಳಿಗೆ ಪರಿಹಾರ ಸಿಗುತ್ತದೆ. ನಿಮ್ಮ ಕೆಲಸದ ಮೇಲೆ ನಿಮ್ಮ ಗಮನ ಕಡಿಮೆಯಾದ ಕಾರಣ ಸಿಗಬೇಕಾದ ಅವಕಾಶಗಳು ಬೇರೆಯವರ ಪಾಲಾಗಲಿದೆ.
ಕುಂಭ
ಎಷ್ಟು ಜಾಗರೂಕರಾಗಿದ್ದರೂ ಸಾಲದೆಂಬಂತೆ ಆಗುತ್ತದೆ. ಮಗಳ ಗಂಡನ ಮನೆಯಲ್ಲಿನ ವಿಶೇಷ ಕಾರ್ಯಕ್ರಮಗಳಿಗೆ   ಭೇಟಿ ನೀಡುವಂತಾಗಿ ಸಂತೋಷ ಹೊಂದುವಿರಿ.
ಮೀನ
ಕಳೆದು ಹೋದ ಜಾನುವಾರೊಂದು ಹಲವಾರು ದಿನಗಳ ನಂತರ ಮನೆಯ ಜಾಡು ಹಿಡಿದು ಬರುವಂಥ ಸಾಧ್ಯತೆ ಇದೆ.  ನೆಚ್ಚಿನ ಕಲಾಕಾರರನ್ನು ಭೇಟಿಯಾಗಲು ಸ್ನೇಹಿತರು ಸಹಾಯ ಮಾಡಲಿದ್ದಾರೆ.