ಶನಿವಾರ, 17 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಕುಟುಂಬದ ಆರ್ಥಿಕ ಆದಾಯವು ಸುಧಾರಿಸುವುದು
Published 4 ಜನವರಿ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವ್ಯವಹಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿಗೆ ಒಳಗಾಗದಂತೆ ನಿಸ್ಸಂಕೋಚತೆಯಿಂದ ಇರಬೇಕಾಗುತ್ತದೆ. ಬಂಧುಗಳ ಮನೆಯ ಔತಣಕೂಟಗಳಲ್ಲಿ ಭಾಗವಹಿಸುವಿರಿ. ಲಕ್ಷ್ಮಿನರಸಿಂಹನನ್ನು ಆರಾಧಿಸಿ ಶುಭವಾಗುವುದು.
ವೃಷಭ
ಹಳೆಯ ವಾಹನಗಳ ಕೊಡು–ಕೊಳ್ಳುವಿಕೆಯಲ್ಲಿ ದಾಖಲೆಗಳ ಬಗ್ಗೆ ಹೆಚ್ಚಿನ ಗಮನವಿರಲಿ. ಕುಟುಂಬದ ಆರ್ಥಿಕ ಆದಾಯವು ಸುಧಾರಿಸುವುದು. ಅಪೇಕ್ಷಿಸುತ್ತಿರುವ ವಸ್ತು ಕೈ ಸೇರುವುದು.
ಮಿಥುನ
ನಿರುದ್ಯೋಗಿಗಳಿಗೆ ಲೆಕ್ಕಪತ್ರಗಳ ಪರಿಶೀಲನೆಯ ಉದ್ಯೋಗ ಲಭಿಸುವ ಸಾಧ್ಯತೆ ಇದೆ. ಇಂದಿನ ಕೆಲ ಘಟನೆಗಳಿಂದಾಗಿ, ಯಾರನ್ನೂ ನಂಬಲಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅದೃಷ್ಟದ ಪರೀಕ್ಷೆ ನಡೆಯಲಿದೆ.
ಕರ್ಕಾಟಕ
ವ್ಯವಹಾರಗಳನ್ನು ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತ್ರವೇ ಮುಂದುವರೆಸಿಕೊಂಡು ಹೋಗುವುದು ಉತ್ತಮ. ಗಿಡಮೂಲಿಕೆಗಳ ಬಳಕೆಯಿಂದ ಉದರ ಸಂಬಂಧಿ ವ್ಯಾಧಿಗಳು ಗುಣವಾಗುವುದು.
ಸಿಂಹ
ಧಾರ್ಮಿಕ ಕಾರ್ಯಕ್ರಮಗಳ ಮುಂದಾಳತ್ವ ವಹಿಸಿ, ದೇವರ ಕೃಪೆಗೆ ಪಾತ್ರರಾದಂತಹ ಧನ್ಯತೆಯ ಮನೋಭಾವ ನಿಮ್ಮದಾಗುವುದು. ರಜೆಯ ದಿನವಾದರೂ, ಅನಿವಾರ್ಯವಾಗಿ ಕಾರ್ಯನಿರ್ವಹಿಸಬೇಕಾಗುವುದು.
ಕನ್ಯಾ
ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಹಾಗೂ ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕೃಷಿ ಭೂಮಿಯನ್ನು ವ್ಯವಸ್ಥಿತ ರೀತಿಯಲ್ಲಿ ಇಟ್ಟುಕೊಳ್ಳುವ ಬಗ್ಗೆ ಕಾರ್ಯಪ್ರವೃತ್ತರಾಗುವುದು ಉತ್ತಮ.
ತುಲಾ
ದೇವತಾ ಕಾರ್ಯಗಳಲ್ಲಿ ಭಾಗಿಯಾಗಲು ದೂರ ಪ್ರಯಾಣ ಮಾಡಬೇಕಾಗಬಹುದು. ಕೆಲಸಗಳು ನೆರವೇರಲು ಹೆಚ್ಚಿನ ಶ್ರಮ ವಹಿಸಬೇಕಾದೀತು. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ.
ವೃಶ್ಚಿಕ
ವ್ಯವಹಾರದಲ್ಲಿನ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಕೆಲಸಗಾರರ ಅಸಹಕಾರದಿಂದ ನಷ್ಟ ಉಂಟಾಗಬಹುದು. ಪಾಲುದಾರಿಕೆ ವ್ಯವಹಾರವು ಪ್ರಗತಿ ಕಾಣಲಿದೆ.
ಧನು
ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿ. ಕುಟುಂಬದ ಸದಸ್ಯರೊಂದಿಗೆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುವಿರಿ. ಇಂಧನ ವ್ಯಾಪಾರಿಗಳಿಗೆ ಅಧಿಕ ಲಾಭ ಪ್ರಾಪ್ತಿಯಾಗುತ್ತದೆ.
ಮಕರ
ದೀರ್ಘಕಾಲದ ಕನಸುಗಳು ಈಡೇರುವುದರಿಂದ ಮನಸ್ಸಿಗೆ ಸಂತಸವಾಗುವುದು. ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುವಿರಿ.
ಕುಂಭ
ಪೊಲೀಸ್ ಅಧಿಕಾರಿಗಳಿಗೆ ಸರಿ–ತಪ್ಪು ನಿರ್ಧರಿಸುವುದು ಕಷ್ಟವಾಗಲಿದೆ ಹಾಗೂ ವೃತ್ತಿಯಲ್ಲಿ ಒತ್ತಡ ಹೆಚ್ಚಲಿದೆ. ನೀಲಿವಸ್ತ್ರ ಅಥವಾ ಹರಳು ಕಾರ್ಯಸಾಧನೆಗೆ ಸಹಾಯಕವಾಗಲಿದೆ. ಸಾಲ ತೆಗೆದುಕೊಳ್ಳಬೇಡಿ.
ಮೀನ
ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದ ನಿರ್ಧಾರ. ಆಟಿಕೆ ಸಾಮಾನುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭವಾಗಲಿದೆ. ಸಂದಿಗ್ಧ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿ.
ADVERTISEMENT
ADVERTISEMENT