ದಿನ ಭವಿಷ್ಯ: ಈ ರಾಶಿಯವರ ಬಾಳಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವ ಘಟನೆ ನಡೆಯಲಿದೆ
Published 15 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬಹುಕಾಲ ನೆನಪಿನಲ್ಲಿ ಉಳಿಯುವಂಥ ಸುಮಧುರ ಘಟನೆ ಬಾಳಲ್ಲಿ ನಡೆಯಲಿದೆ. ವಿನೋದ ಸ್ವಭಾವ ಹಾಗೂ ಬುದ್ಧಿವಂತಿಕೆ ಇತರರನ್ನು ಆಕರ್ಷಿಸುವುದು.
15 ಮಾರ್ಚ್ 2026, 23:30 IST
ವೃಷಭ
ಒಂದೇ ವಿಷಯದಲ್ಲಿ ಹಲವರ ಸಲಹೆ ಕೇಳಿದರೆ, ಹಲವು ಗೊಂದಲಗಳು ಉಂಟಾಗಬಹುದು. ಸಂಜೆ ಶಿರೋವೇದನೆಯಿಂದ ಬಳಲುವ ಸಾಧ್ಯತೆ ಇದೆ.
15 ಮಾರ್ಚ್ 2026, 23:30 IST
ಮಿಥುನ
ರಕ್ತ ಸಂಬಂಧ ಕಾಯಿಲೆ ಬಗ್ಗೆ ಅನುಮಾನ ಇರುವವರು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಅಂದುಕೊಂಡ ಕೆಲಸಗಳು ನಿರಾತಂಕವಾಗಿ ಸಾಗಲಿವೆ.
15 ಮಾರ್ಚ್ 2026, 23:30 IST
ಕರ್ಕಾಟಕ
ಸೇವಕ ವರ್ಗದವರಲ್ಲಿ ಪ್ರೀತಿ ವಿಶ್ವಾಸದಿಂದ ವ್ಯವಹರಿಸುವುದರಿಂದ ಅನುಕೂಲ. ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಹೆಚ್ಚಿನ ಸಂತಸವಿರುವುದು.
15 ಮಾರ್ಚ್ 2026, 23:30 IST
ಸಿಂಹ
ನಿವೃತ್ತಿಯ ಹಣದಲ್ಲಿ ಮಕ್ಕಳ ಹೆಸರಿಗೆ ಮನೆ ಕೊಳ್ಳುವ ಯೋಗವಿದೆ. ಮೇಲಧಿಕಾರಿಗಳಿಂದ ಕುತೂಹಲಕಾರಿ ವಿಷಯ ತಿಳಿದು ಅಚ್ಚರಿ ಗೊಳ್ಳುವಿರಿ. ಸುಖ ಭೋಜನ ಪ್ರಾಪ್ತಿ.
15 ಮಾರ್ಚ್ 2026, 23:30 IST
ಕನ್ಯಾ
ಸಂಬಂಧದಲ್ಲಿ ವ್ಯವಹಾರ ಮಾಡುವುದರಿಂದ ಮೋಸ ಉಂಟಾಗಬಹುದು. ಆಹಾರ ಪದಾರ್ಥದ ಉದ್ದಿಮೆದಾರರಿಗೆ ಹೊಸ ಯೋಜನೆ ಫಲ ಕೊಡಲಿದೆ. ಪಿತ್ರಾರ್ಜಿತ ಆಸ್ತಿ ಲಭ್ಯ.
15 ಮಾರ್ಚ್ 2026, 23:30 IST
ತುಲಾ
ವಿದೇಶ ವ್ಯವಹಾರದಿಂದ ಈ ದಿನ ಅಧಿಕ ಸಮಯವನ್ನು ವೃತ್ತಿ ಜೀವನಕ್ಕೆ ಮೀಸಲಿಡಬೇಕಾಗುತ್ತದೆ. ಸ್ನೇಹಿತರಿಂದ ಸಹಾಯ ಸಕಾಲದಲ್ಲಿ ದೊರೆಯಲಿದೆ.
15 ಮಾರ್ಚ್ 2026, 23:30 IST
ವೃಶ್ಚಿಕ
ರಾಜಕೀಯ ವ್ಯಕ್ತಿಗಳಿಗೆ ವಿರೋಧ ಪಕ್ಷದವರಿಂದ ತೊಂದರೆಗಳಾಗಬಹುದು. ಅನಿರೀಕ್ಷಿತ ದುರ್ಘಟನೆಗಳಿಗೆ ವಿಚಲಿತರಾಗದೆ ಸಂಯಮದಿಂದ ಕಾರ್ಯನಿರ್ವಹಿಸಿ. ಆರ್ಥಿಕ ಕಷ್ಟ ನಿವಾರಣೆಯಾಗಲಿದೆ.
15 ಮಾರ್ಚ್ 2026, 23:30 IST
ಧನು
ಆಸ್ತಿ ವಿಷಯಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಶುಭ ಸಮಾರಂಭಕ್ಕಾಗಿ ವಸ್ತ್ರಾಭರಣಗಳನ್ನು ಖರೀದಿಸುವ ಯೋಗವಿದೆ. ಆಧ್ಯಾತ್ಮಿಕ ಪುಸ್ತಕಗಳನ್ನು ಕೊಳ್ಳುವಿರಿ.
15 ಮಾರ್ಚ್ 2026, 23:30 IST
ಮಕರ
ದೀರ್ಘಕಾಲೀನ ಅನಾರೋಗ್ಯಗಳನ್ನು ಬಗೆಹರಿಸಿಕೊಳ್ಳುವಿರಿ. ನಂಬಿಕಸ್ಥರಿಂದ ವ್ಯಾಪಾರದಲ್ಲಿ ಮೋಸಹೋಗುವ ಸಾಧ್ಯತೆ ಇರುವುದರಿಂದ ಎಚ್ಚರವಿರಲಿ.
15 ಮಾರ್ಚ್ 2026, 23:30 IST
ಕುಂಭ
ನಿವೇಶನದ ಅಥವಾ ಜಮೀನಿನ ಖರೀದಿ ವಿಷಯದಲ್ಲಿ ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಪೌಷ್ಟಿಕಾಂಶ ಆಹಾರದ ಕೊರತೆ ಕಾಣುತ್ತದೆ.
15 ಮಾರ್ಚ್ 2026, 23:30 IST
ಮೀನ
ವೈಯುಕ್ತಿಕವಾಗಿ ಎಷ್ಟು ಹಣ ಗಳಿಸಬಹುದೆಂದು ಲೆಕ್ಕಾಚಾರ ಹಾಕುವುದಕ್ಕಿಂತ ಬಂಡವಾಳ ಕಾಯ್ದುಕೊಳ್ಳುವುದರತ್ತ ಗಮನ ಹರಿಸಿ. ಆತಿಥ್ಯಕ್ಕಾಗಿ ಖರ್ಚು ಮಾಡುವಲ್ಲಿ ಧಾರಾಳತನ ಮೆರೆಯುವಿರಿ.
15 ಮಾರ್ಚ್ 2026, 23:30 IST