ಬುಧವಾರ, 22 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ
Published 16 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪತ್ರಿಕೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅಸ್ಥಿರತೆ ಕಾಡಲಿದೆ. ಶ್ರಮಕ್ಕೆ ಫಲ ದೊರೆಯುತ್ತದೆ. ಮಕ್ಕಳಿಗೆ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಲು ತಿಳಿಸಿ.
ವೃಷಭ
ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ ಒದಗಿ ಬಂದರೂ ಆಲಸ್ಯ ಗುರಿ ಸಾಧನೆಗೆ ಅಡ್ಡಿ ಮಾಡಲಿದೆ. ಏಕಾಗ್ರತೆಯಿಂದ ಶಿವನ ಸ್ಮರಣೆ ಅಥವಾ ಧ್ಯಾನ ಮಾಡಿ.
ಮಿಥುನ
ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ. ದ್ರವರೂಪದ ವಸ್ತುವಿನ ಅದರಲ್ಲೂ ತೈಲಗಳ ಮಾರಾಟದಲ್ಲಿ ಅಧಿಕ ಲಾಭ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ.
ಕರ್ಕಾಟಕ
ಕೈಗಾರಿಕೋದ್ಯಮಿಗಳು ಕಂಪನಿಯ ತಯಾರಿಕಾ ಘಟಕದ ಅಭಿವೃದ್ಧಿ ಮಾಡುವ ಬಗ್ಗೆ ಗಮನಹರಿಸಬಹುದು. ಆತ್ಮವಿಶ್ವಾಸದಿಂದ ಮುಂದು ವರಿಯಿರಿ. ಎದುರಾಳಿಗಳೊಂದಿಗೆ ಸಂಧಾನ ಮಾಡಿಕೊಳ್ಳುವುದು ಸರಿಯಲ್ಲ.
ಸಿಂಹ
ಧನಾಗಮನಕ್ಕೆ ಹಲವು ದಾರಿಗಳು ಕಂಡರೂ ಸರಿಯಾದ ದಾರಿಯನ್ನು ಆರಿಸಿಕೊಳ್ಳುವುದು ವಿವೇಚನೆಗೆ ಬಿಟ್ಟಂತಹ ವಿಚಾರ. ತಂತ್ರಜ್ಞಾನಿಗಳಿಗೆ ಉದ್ಯೋಗದಲ್ಲಿ ಬಗೆಹರಿಸಲಾಗದ ಸಮಸ್ಯೆ ಎದುರಾಗಬಹುದು.
ಕನ್ಯಾ
ಪಿತ್ರಾರ್ಜಿತ ಆಸ್ತಿಗಳ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ. ಹಿರಿಯರ ಮಾತಿನಂತೆ ನಡೆದುಕೊಳ್ಳುವ ನಿರ್ಧಾರ ಶುಭಪ್ರದ. ಆಹಾರ ಬೆಳೆಗಳು ರೈತರಿಗೆ ನಿರೀಕ್ಷೆಗೂ ಮೀರಿದ ಆದಾಯ ತರಲಿವೆ.
ತುಲಾ
ನಯವಾದ ಮಾತುಗಳು ಎದುರಿನ ವ್ಯಕ್ತಿಯ ಮನವನ್ನು ಗೆಲ್ಲುವ ಮೂಲಕ ಕಾರ್ಯ ಸಾಧನೆ ಆಗುತ್ತದೆ. ಹಲವು ವರ್ಷಗಳಿಂದ ಯೋಚಿಸುತ್ತಿದ್ದ ಕಾರ್ಯವು ದೇವತಾ ಅನುಗ್ರಹದಿಂದ ನಡೆಯಲಿದೆ.
ವೃಶ್ಚಿಕ
ವ್ಯವಹಾರದ ಜೀವನದಲ್ಲಿ ಕೆಲವು ವಿಚಾರಕ್ಕೆ ಆತಂಕ ಮೂಡಿ ಮನೋಧೈರ್ಯ ಕಟ್ಟಿಹಾಕಿಕೊಳ್ಳುತ್ತದೆ. ಕೌಟುಂಬಿಕವಾಗಿ ಕೆಟ್ಟು ಹೋದ ಸಂಬಂಧ ಸತ್ಯದ ಅರಿವಿನಿಂದ ಮರಳಿ ಬರಲಿದೆ.
ಧನು
ಅವಸರ ಮತ್ತು ಉದ್ವೇಗ ಇವೆರಡೂ ತಲೆ ತಗ್ಗಿಸುವಂತೆ ಮಾಡುತ್ತದೆ. ಸಂಘ–ಸಂಸ್ಥೆಗಳ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಉದ್ಯೋಗದಲ್ಲಿ ಕ್ರಿಯಾಶೀಲತೆಯಿಂದ ಮೆರೆಯುವಿರಿ.
ಮಕರ
ಪ್ರೀತಿಸುವವರ ಮಾರ್ಗದರ್ಶನ ದೊರೆಯಲಿದ್ದು ಹೊಸ ಚೈತನ್ಯ ತುಂಬಿಬರಲಿದೆ. ನಿರ್ದಿಷ್ಟವಾದ ಕೆಲಸಗಳಿಗೆ ಮಾತ್ರ ಗಮನ ಕೊಡುವುದು ಒಳ್ಳೆಯದು. ಕಲಾವಿದರ ಆಸಕ್ತಿಯಿಂದ ಅವಕಾಶಗಳು ಲಭ್ಯವಾಗಲಿವೆ.
ಕುಂಭ
ಮನೆಯಲ್ಲಿನ ಆಗು ಹೋಗುಗಳ ಬಗೆಗೆ ಗಮನ ನೀಡಬೇಕಾಗುವುದು. ಹೂವು, ಹಣ್ಣು, ತರಕಾರಿ, ಹಾಲಿನ ವ್ಯಾಪಾರಿಗಳಿಗೆ ಲಾಭವಾಗಲಿದೆ. ದುಂದುವೆಚ್ಚದಿಂದ ದಿನಾಂತ್ಯದಲ್ಲಿ ಹಣದ ಅಭಾವ ಕಾಡುತ್ತದೆ.
ಮೀನ
ಅನಿವಾರ್ಯವಾಗಿ ನಿವೇಶನ ಮಾರುವ ಪರಿಸ್ಥಿತಿ ಎದುರಾದರೂ ಲಾಭ ಪಡೆಯುವಿರಿ. ದುರ್ಜನರ ಸಹವಾಸದಿಂದ ತಕ್ಷಣ ಹೊರಬರುವ ಪ್ರಯತ್ನ ಮಾಡಿ. ಕಾರ್ಮಿಕರ ಬೇಡಿಕೆಗಳನ್ನು ಪೂರೈಸುವ ಭರವಸೆಯನ್ನು ಮರೆಯದಿರಿ.
ADVERTISEMENT
ADVERTISEMENT