ಬುಧವಾರ, 13 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಹಿಡಿದ ಕೆಲಸದಲ್ಲಿ ಯಶಸ್ಸು ಕಾಣುವಿರಿ
Published 21 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬೇರೆಯವರ ಮಾತಿಗೆ ಚಿಂತಿಸದೆ ನಿಗದಿತ ಸಮಯದಲ್ಲಿ ಕೆಲಸ ಮುಗಿಸಲು ಪ್ರಯತ್ನವಿರಲಿ. ಸಮಾಜದ ಹಿತಕ್ಕಾಗಿ ನೀವು ಮಾಡುತ್ತಿರುವ ಕೆಲಸದಲ್ಲಿ ನಿಮಗೆ ಜಯ ದೊರೆಯುತ್ತದೆ.
ವೃಷಭ
ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡು ಸಂಸಾರದ ಜವಾಬ್ದಾರಿ ಯನ್ನು ಉತ್ತಮವಾಗಿ ನೋಡಿಕೊಳ್ಳುವಂತೆ ಆಗಲಿದೆ. ಉದ್ಯೋಗಕ್ಕೆ ಸೇರಲು ಸಿದ್ಧತೆ ನಡೆಸುವಿರಿ. ಖರ್ಚು ಕಡಿಮೆ ಮಾಡುವುದನ್ನು ಅಭ್ಯಸಿಸಿ.
ಮಿಥುನ
ಅಂದುಕೊಂಡಷ್ಟು ನಿಮ್ಮ ಪರಿಸ್ಥಿತಿ ಕೆಟ್ಟದಾಗಿ ಇಲ್ಲದ ಕಾರಣ ಹೆಚ್ಚಿನ ಲಾಭಗಳಿಸುವ ಉದ್ದೇಶವಿದ್ದಲ್ಲಿ ಸ್ವಲ್ಪ ಸಮಯ ತಾಳ್ಮೆಯಿಂದ ಕಾಯಬೇಕಾಗುವುದು. ಕೌಟುಂಬಿಕ ವಿಚಾರಗಳತ್ತ ಸಂಪೂರ್ಣ ಗಮನ ನೀಡಿ.
ಕರ್ಕಾಟಕ
ಅಧಿಕ ಕೋಪದಿಂದ ಕೆಲವೊಂದು ವಿಚಾರದಲ್ಲಿ ನಷ್ಟ ಅನುಭವಿಸುವಿರಿ. ಪ್ರಭಾವಿ ವ್ಯಕ್ತಿಯೊಬ್ಬರಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಒಬ್ಬ ಜ್ಞಾನಿಯ ಅನುಗ್ರಹಕ್ಕೆ ಪಾತ್ರರಾಗುವಿರಿ.
ಸಿಂಹ
ಬೆಟ್ಟದಂತೆ ಕಂಡುಬಂದ ಒಂದು ಸಮಸ್ಯೆಯು ನಿಮ್ಮ ಬುದ್ಧಿವಂತಿಕೆ ಯಿಂದ ಮಂಜಿನಂತೆ ಕರಗುವುದು. ಆಲಸ್ಯತನವನ್ನು ದೂರಮಾಡಿಕೊಳ್ಳುವುದರಿಂದ ಅಭಿವೃದ್ಧಿ. ಪಿತ್ರಾರ್ಜಿತ ಆಸ್ತಿಯು ನಿಮ್ಮ ಪಾಲಾಗಲಿದೆ.
ಕನ್ಯಾ
ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭ ಬರಲಿದೆ. ನಿಮ್ಮ ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಈ ದಿನ ನಿಮಗೆ ಹೆಚ್ಚು ಆನಂದ ಸಿಗಬಹುದು.
ತುಲಾ
ಬೇರೆಯವರನ್ನು ಮರುಳುಗೊಳಿಸುವ ಮಾತಿನ ಕೌಶಲ ನಿಮ್ಮಲ್ಲಿದೆ, ಅದು ಈ ದಿನ ನಿಮಗೆ ಮುಳ್ಳಾಗಬಹುದು. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಹಿಡಿದ ಕೆಲಸದಲ್ಲಿ ಯಶಸ್ಸು ಕಾಣುವಿರಿ.
ವೃಶ್ಚಿಕ
ಇಂದು ನೆಮ್ಮದಿಯ ಜೊತೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಲಕಳೆಯುವಿರಿ. ವೃತ್ತಿರಂಗದಲ್ಲಿ ಹೊಸ ವಿಚಾರಗಳ ಅನ್ವೇಷಣೆಯಿಂದ ಆರ್ಥಿಕವಾಗಿ ತೊಂದರೆಯಾದರೂ ಮುಂದಿನ ದಿನದಲ್ಲಿ ಲಾಭವನ್ನು ತರಲಿದೆ.
ಧನು
ವೃತ್ತಿ ಬದಲಾಯಿಸುವ ಅಥವಾ ಆಸ್ತಿ ಖರೀದಿಸುವ ಯೋಚನೆಯನ್ನು ಮುಂದೂಡುವುದು ಉತ್ತಮ. ವೈಯಕ್ತಿಕ ಜೀವನದ ಬೆಳವಣಿಗೆ ಬಗ್ಗೆ ಗಮನಹರಿಸಿ. ಲಕ್ಷ್ಮಿಯನ್ನು ಪೂಜಿಸಿದಲ್ಲಿ ಏಳಿಗೆ ಹೊಂದಲು ಸಾಧ್ಯ.
ಮಕರ
ಪೊಲೀಸ್ ಅಧಿಕಾರಿಗಳಿಗೆ ಸಿಬ್ಬಂದಿ ವರ್ಗದವರಿಂದ ಮತ್ತು ಸಾರ್ವಜನಿಕರಿಂದ ಸಹಕಾರ ದೊರೆಯಲಿದೆ. ಹಿಂಜರಿಕೆಮತ್ತು ಭಯದ ಸ್ವಭಾವ ನಿಮ್ಮ ಹಿನ್ನೆಡೆಗೆ ಕಾರಣವಾಗಿದೆ. ಅವಿವಾಹಿತರಿಗೆ ವಿವಾಹ ಯೋಗ.
ಕುಂಭ
ನಿಮ್ಮ ಕರ್ತವ್ಯ ಮತ್ತು ಸಮಯ ಪ್ರಜ್ಞೆಯಿಂದಾಗಿ ನೀವು ದುಡಿಯುವ ಸಂಸ್ಥೆಗೆ ನಿಮ್ಮಿಂದ ಲಾಭ ಉಂಟಾಗುವುದು. ಶೈಕ್ಷಣಿಕ ರಂಗದಲ್ಲಿನ ನಿಮ್ಮ ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಸಂಪಾದಿಸಿಕೊಳ್ಳುವಿರಿ.
ಮೀನ
ಗೃಹೋಪಕರಣಗಳ ಖರೀದಿ ಮಾಡುವ ಯೋಗವಿದೆ. ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ಮಾನಹಾನಿಯ ಸಾಧ್ಯತೆಗಳೂ ಇರಬಹುದು.
ADVERTISEMENT
ADVERTISEMENT