ದಿನ ಭವಿಷ್ಯ: ಈ ರಾಶಿಯವರಿಗೆ ನಿರೀಕ್ಷೆಗೆ ತಕ್ಕಂತೆ ಶುಭ ಕಾಲ ಕೂಡಿಬರಲಿದೆ
Published 2 ಮೇ 2026, 22:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಚೇತರಿಕೆಯನ್ನು ಹೊಂದುವಿರಿ. ನಿರೀಕ್ಷೆಗೆ ತಕ್ಕಂತೆ ಶುಭ ಕಾಲ ಕೂಡಿಬರಲಿದೆ. ನಿಮ್ಮ ಸಮಸ್ಯೆಗಳಿಗೆ ಧಾರ್ಮಿಕ ಮಾರ್ಗದಲ್ಲಿ ನಡೆದರೆ ಉತ್ತರ ಸಿಗುವುದು.
ವೃಷಭ
ಪ್ರದರ್ಶನ ಮಾರಾಟ ಮಳಿಗೆಯವರಿಗೆ ಲೋಹದ ಉತ್ಪನ್ನ ಮಾರಾಟಗಳಿಂದ ನಿರೀಕ್ಷೆಗೂ ಮೀರಿದ ಲಾಭವಿದೆ. ಸಾಕುಪ್ರಾಣಿಗಳಿಂದ ಸಣ್ಣ-ಪುಟ್ಟ ತೊಂದರೆಗಳಿವೆ. ಕೆಲಸಗಳನ್ನು ಪೂರ್ಣಗೊಳಿಸುವ ಸಂಕಲ್ಪವಿರಲಿ.
ಮಿಥುನ
ಮನರಂಜನೆಯ ವಿಷಯದಲ್ಲಿ ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗುವುದು. ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ರಂಗಕರ್ಮಿಗಳಿಗೆ ಹೆಚ್ಚಿನ ಜನಸಂಪರ್ಕವಾಗಲಿದೆ.
ಕರ್ಕಾಟಕ
ಅನಿರೀಕ್ಷಿತ ಸಂಗತಿಗಳು ಜರುಗಿ ಕೆಲಸಗಳು ಪೂರ್ಣಗೊಳ್ಳುವುದು ವಿಳಂಬವಾಗುವುದು. ಕೆಲಸ ಕಾರ್ಯಗಳನ್ನು ಮುಂದೂಡುವ ವಿಚಾರ ಸರಿಯಲ್ಲ. ಮನೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಪಾಪ ಪರಿಹಾರ.
ಸಿಂಹ
ಕಫದ ಅಥವಾ ಉಸಿರಾಟದ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ. ಮುಗ್ಧ ಜನರಿಗೆ ಸಹಾಯ ಮಾಡಿ. ಮನೆಯಲ್ಲಿ ಉದ್ವೇಗದ ವಾತಾವರಣ ಎದುರಾಗಬಹುದು.
ಕನ್ಯಾ
ಇನ್ನೊಬ್ಬರನ್ನು ಅವಹೇಳನ ಮಾಡುವ ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರಲಿದೆ. ಹಿರಿಯರ ಕೋರಿಕೆಯಂತೆ ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸಿ.
ತುಲಾ
ವಾದ ಪ್ರತಿವಾದಗಳಿಂದ ಸ್ನೇಹವನ್ನು ಕಳೆದುಕೊಳ್ಳುವಂತಾಗಹುದು. ಸ್ವಚ್ಛತಾ ಕಾರ್ಯಗಳಲ್ಲಿ ಪಾಲ್ಗೊಂಡ ಕಾರಣ ಅಲರ್ಜಿ ಉಂಟಾಗಬಹುದು. ದುರ್ಘಟನೆಯ ನೋವುಗಳು ಕಾಡುವುದು.
ವೃಶ್ಚಿಕ
ವ್ಯವಹಾರದ ಒತ್ತಡವಿದ್ದರೂ ರೀತಿ-ನೀತಿಗಳನ್ನು ಅನುಸರಿಸಿದರೆ ಸಫಲರಾಗುವಿರಿ. ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯಹೊಂದುವಿರಿ. ಭೂಮಿಯ ಖರೀದಿಗೆ ಧನ ಸಂಗ್ರಹವಾಗುವುದು.
ಧನು
ಸಂಪೂರ್ಣ ಮನಸ್ಸಿಟ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಲ್ಲಿ ವ್ಯವಹಾರ ದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ, ವಿದೇಶಿ ವ್ಯವಹಾರಗಳು ಲಭಿಸಬಹುದು. ವಿದ್ಯಾಭ್ಯಾಸದಲ್ಲಿ ಅನೇಕ ತೊಂದರೆಯನ್ನು ಎದುರಿಸಬೇಕಾಗುವುದು.
ಮಕರ
ತಂದೆ ತಾಯಿಯ ಆರೋಗ್ಯವು ಉತ್ತಮವಾಗಿ ಸುಧಾರಿಸುವುದ ರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಮೂಡಲಿದೆ. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವುದು ಬಾಳಿನಲ್ಲಿ ಅನಿವಾರ್ಯವಾಗುತ್ತದೆ.
ಕುಂಭ
ಶೀಘ್ರವಾದ ಹಾಗೂ ಕಾಲಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಹಣಕಾಸಿನ ಲಾಭವನ್ನು ತರಲಿದೆ. ಮಂಗಳ ಕಾರ್ಯದ ಸಲುವಾಗಿ ಬಂಗಾರ ಖರೀದಿಸುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಯುವುದು.
ಮೀನ
ಅನಾವಶ್ಯಕ ಚಿಂತೆ, ಖರ್ಚು ಹಾಗೂ ಹಾಳು ವ್ಯಸನಗಳು ಈ ದಿನ ನಿಮ್ಮನ್ನು ಆವರಿಸಿಕೊಳ್ಳಬಹುದು, ಎಚ್ಚರದಿಂದಿರಿ. ಸಾಯಂಕಾಲದ ವೇಳೆ ಧನ ಲಾಭವಾಗುವ ಯೋಗವಿದೆ.