ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಆರಂಭಿಸಿದ ಎಲ್ಲ ಕಾರ್ಯಗಳಲ್ಲೂ ಜಯಗಳಿಸುವ ಯೋಗವಿದೆ
Published 14 ಆಗಸ್ಟ್ 2024, 23:35 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಸ ಮನೆ ಅಥವಾ ನಿವೇಶನದ ದಾಖಲೆಗಳನ್ನು ಸಂಗ್ರಹಿಸಲು ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡಬೇಕಾಗುವುದು. ಕೆಲಸದ ಒತ್ತಡವಿದ್ದರೂ, ಕೌಟುಂಬಿಕ ವಿಚಾರಗಳತ್ತ ಗಮನಹರಿಸುವುದು ಉತ್ತಮ.
ವೃಷಭ
ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗುವ ಪ್ರಸಂಗ ಬಂದರೂ ಧೈರ್ಯದಿಂದ ಎದುರಿಸುವ ಹೋರಾಟವನ್ನು ಮಾಡಿ. ಆರಂಭಿಸಿದ ಎಲ್ಲ ಕಾರ್ಯಗಳಲ್ಲೂ ಜಯಗಳಿಸುವ ಯೋಗವಿದೆ.
ಮಿಥುನ
ಮೇಲಧಿಕಾರಿಗಳು ಅಥವಾ ಹಿರಿಯರೊಂದಿಗೆ ಗಂಭೀರ ವಿಚಾರಗಳ ಬಗ್ಗೆ ಚರ್ಚಿಸುವಾಗ ಸ್ಪಷ್ಟತೆ ಇರಲಿ. ಸಮಾಜದಲ್ಲಿ ಮೃದು ಭಾಷಿಗಳು ಎನಿಸಿಕೊಳ್ಳುವಿರಿ.
ಕರ್ಕಾಟಕ
ಜೀವನ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ್ದು ಅನಿವಾರ್ಯ. ಮದುವೆ ವಿಷಯದಲ್ಲಿ ಮನೆಯವರಿಂದ ಒತ್ತಡ ಬರಲಿದೆ. ರಾಜಕಾರಣಿಗಳಿಗೆ ಬಹಳ ದಿನಗಳ ನಂತರ ಯಶಸ್ಸು ದೊರೆಯಲಿದೆ.
ಸಿಂಹ
ಈ ಹಿಂದೆ ಪ್ರಾರಂಭವಾಗಿರುವ ಕೆಲಸಗಳು ಪ್ರಯತ್ನದ ಕೊರತೆಯಿಂದಾಗಿ ನಿಷ್ಕ್ರಿಯಗೊಂಡಂತಾಗಲಿದೆ. ಧೃತಿಗೆಡದೆ ಸಮಸ್ಯೆಗಳನ್ನು ಎದುರಿಸಿ. ಶ್ರೀರಾಮ ನಾಮ ಸ್ಮರಣೆ ಮಾಡಿ.
ಕನ್ಯಾ
ಮಿತ್ರರಿಂದ ಮನಸ್ಸಿಗೆ ನೋವಾಗುವಂತಹ ಮಾತುಗಳನ್ನು ಕೇಳಬೇಕಾಗುವುದು. ಆರೋಗ್ಯ ಸುಧಾರಿಸಲಿದೆ. ಧ್ಯಾನ ಹಾಗೂ ಯೋಗದ ಅಭ್ಯಾಸದಿಂದ ಅನುಕೂಲವಾಗಲಿದೆ.
ತುಲಾ
ವೃತ್ತಿ ಬದಲಾವಣೆಯ ಆಲೋಚನೆಯಿಂದ ಯಾವುದೇ ಸಮಸ್ಯೆ ನಿವಾರಣೆಯಾಗುವುದಿಲ್ಲ. ವ್ಯವಹಾರದಲ್ಲಿನ ನಷ್ಟವನ್ನು ನಿಭಾಯಿಸುವ ಧೈರ್ಯ ಬೆಳೆಸಿಕೊಳ್ಳಿ. ಬಂಧುಗಳ ಆಗಮನದಿಂದ ಸಂತಸವಾಗಲಿದೆ.
ವೃಶ್ಚಿಕ
ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಬೇಕಾಗುವುದು. ಅನ್ಯರಿಂದ ಸಹಾಯ ಮತ್ತು ಸಹಕಾರವನ್ನು ನಿರೀಕ್ಷಿಸದಿರಿ. ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು.
ಧನು
ಹಿತಶತ್ರುಗಳ ಒಳಸಂಚು ನಿಮ್ಮ ಗಮನಕ್ಕೆ ಬರಲಿದ್ದು, ಧೈರ್ಯವಾಗಿ ಎದುರಿಸಿ. ಬಾಕಿ ಉಳಿದ ಕೆಲಸ ಪೂರ್ಣಗೊಳಿಸಲು ಈ ದಿನ ಪ್ರಶಸ್ತವಾಗಿದೆ. ದೀರ್ಘಕಾಲಿಕ ಕೆಲಸಗಳು ನಿಧಾನವಾಗಿ ಸಾಗಲಿವೆ.
ಮಕರ
ಹಳೆಯ ಸ್ನೇಹಿತನೊಬ್ಬನ ಆಕಸ್ಮಿಕ ಭೇಟಿಯಿಂದ ಸಂತಸವಾಗಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸುವರು. ಸಾಮಾಜಿಕ ಗಲಭೆಯಿಂದ ದೂರವಿರಿ.
ಕುಂಭ
ಸಂದರ್ಭಕ್ಕನುಗುಣವಾಗಿ ವರ್ತಿಸುವುದರಿಂದ ಒಳಿತಾಗಲಿದೆ. ವ್ಯವಹಾರಗಳಲ್ಲಿ ಮಿಶ್ರಫಲ ದೊರಕಲಿದೆ. ಶತ್ರುಗಳ ಉಪಟಳ ನಿಮ್ಮ ಗಮನಕ್ಕೆ ಬರಲಿದೆ.
ಮೀನ
ಧಾರ್ಮಿಕ ಕಾರ್ಯಗಳಲ್ಲಿ ತೊಡಗಬೇಕೆಂಬ ಆಲೋಚನೆಗಳು ಬರಲಿದ್ದು, ಮನೆಯಲ್ಲಿ ದೇವತಾ ಕಾರ್ಯಕ್ರಮಗಳನ್ನು ಏರ್ಪಡಿಸುವಿರಿ. ಶ್ರಮಕ್ಕೆ ತಕ್ಕ ಸ್ಥಾನಮಾನಗಳು ದೊರೆಯಲಿದೆ.