ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ
Published 26 ಆಗಸ್ಟ್ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿರಿಯರ ಕೋರಿಕೆಯಂತೆ ಮನೆಯಲ್ಲಿ ದೇವತಾ ಕಾರ್ಯಗಳನ್ನು ಆಯೋಜಿಸುವಿರಿ. ಕೆಲಸದಲ್ಲಿ ವಿಘ್ನಗಳು ಎದುರಾದರೂ, ಅಪೇಕ್ಷಿತ ಫಲ ದೊರಕುವುದು. ಬಾಲ್ಯದ ನೆನಪುಗಳು ಕಾಡಲಿವೆ.
ವೃಷಭ
ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವ ಅವಕಾಶಗಳು ಸಿಗಲಿವೆ. ಮನೆಯಲ್ಲಿ ಸಂತಸದ ವಾತಾವರಣದಿಂದ ಹಿರಿಯರಿಗೆ ನೆಮ್ಮದಿ ಇರುವುದು. ತಜ್ಞರ ಅಭಿಪ್ರಾಯ ಪಡೆದು ಚಿಕಿತ್ಸೆ ಪಡೆದುಕೊಳ್ಳಿ.
ಮಿಥುನ
ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳಲು, ತಾಯಿಯ ಹಾಗೂ ಸಹೋದರರ ಮನಗೆಲ್ಲುವಲ್ಲಿ ಯಶಸ್ವಿಯಾಗುವಿರಿ. ಕಲುಷಿತ ಆಹಾರದಿಂದ ಆರೋಗ್ಯ ಹದಗೆಡುವ ಲಕ್ಷಣಗಳಿವೆ.
ಕರ್ಕಾಟಕ
ಬಹು ದಿನಗಳ ಕಠಿಣ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕ ಲಾಭ ಮತ್ತು ಮನಸ್ಸಿಗೆ ಸಂತೋಷ ಉಂಟಾಗಲಿದೆ. ಸೋಲಿಗೆ ಆಲಸ್ಯತನವೇ ಮುಖ್ಯ ಕಾರಣವಾಗಿರುತ್ತದೆ. ಪತ್ನಿಯ ಆರೋಗ್ಯ ಸುಧಾರಿಸಲಿದೆ.
ಸಿಂಹ
ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ಮಾತನ್ನು ನೆನಪಿಟ್ಟುಕೊಳ್ಳುವುದು ಉತ್ತಮ. ಡೇರಿ ಉತ್ಪನ್ನಗಳ ಮಾರಾಟಗಾರರಿಗೆ ಹೆಚ್ಚಿನ ಲಾಭವಾಗಲಿದೆ. ಜೀವನದಲ್ಲಿ ಹೊಸ ಚೈತನ್ಯ ಮೂಡಲಿದೆ.
ಕನ್ಯಾ
ಆಪ್ತ ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯಗಳು ದೀರ್ಘಕಾಲದವರೆಗೆ ಮುಂದುವರೆಯಬಹುದು. ಆಸ್ತಿ ಕೊಳ್ಳುವ ಅಥವಾ ಮಾರುವ ಬಗ್ಗೆ ಸೂಕ್ತ ವ್ಯಕ್ತಿಗಳೊಂದಿಗೆ ಚರ್ಚಿಸಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.
ತುಲಾ
ಕಿರು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಬಯಕೆಗಳನ್ನು ಹಿರಿಯ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದರೆ, ಈಡೇರಲಿವೆ. ಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ಹೆಚ್ಚಿನ ಏಳ್ಗೆಯಾಗುವುದು.
ವೃಶ್ಚಿಕ
ಸಕ್ರಿಯವಾಗಿ ಕಾರ್ಯನಿರ್ವಹಿಸಿದಲ್ಲಿ ಸದ್ಯ ವಿಳಂಬಗೊಂಡಿರುವ ಕೆಲವು ಕಾರ್ಯಗಳು ಮುಗಿಯಲಿವೆ. ವ್ಯಾಪಾರದಲ್ಲಿ ಪಾಲುದಾರರಿಂದಲೇ ಮೋಸವಾಗುತ್ತಿರುವ ವಿಚಾರ ತಿಳಿದು ದುಃಖವಾಗಬಹುದು.
ಧನು
ಕೂಡಿ ಬಂದಿರುವ ಕಂಕಣ ಬಲವು ನಿಮ್ಮ ತಪ್ಪು ನಡತೆಯಿಂದಾಗಿಯೋ ಅಥವಾ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಮುರಿದು ಬೀಳುವ ಸಾಧ್ಯತೆ ಇದೆ. ಸಿನಿಮಾ ಕಲಾವಿದರಿಗೆ ಖ್ಯಾತಿ ಮತ್ತು ಸಂಪತ್ತು ಹರಿದು ಬರಲಿದೆ.
ಮಕರ
ನಿಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಬೇರೆಯವರ ಮೇಲೆ ವೃಥಾ ಆರೋಪಿಸುವಂತಹಾ ಪ್ರಯತ್ನ ನೆಡೆಸುವಿರಿ. ದೇಹದಲ್ಲಿ ವಾಯು ಬಾಧೆ ಕಂಡುಬಂದು, ಸಣ್ಣ-ಪುಟ್ಟ ಅನಾರೋಗ್ಯ ಬಾಧಿಸಲಿದೆ.
ಕುಂಭ
ಹಳೆಯ ವಿಚಾರಗಳನ್ನೇ ಮುಂದಿಟ್ಟುಕೊಂಡು ಆಪ್ತರೊಂದಿಗೆ ಮತ್ತೆ ಮತ್ತೆ ವಾದಿಸಬೇಡಿ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮಾತೃವರ್ಗದವರಿಂದ ಆರ್ಥಿಕ ನೆರವು ಸಿಗಲಿದೆ.
ಮೀನ
ಸಿಹಿ ತಿಂಡಿಯ ತಯಾರಕರಿಗೆ ಕಾರ್ಮಿಕರ ಕೊರತೆ ಎದುರಾಗುವ ಸಾಧ್ಯತೆ ಇದೆ. ಹಂಗಾಮಿ ಕೆಲಸಗಾರರಿಗೆ ವೃತ್ತಿಯಲ್ಲಿ ಸಣ್ಣ ಬದಲಾವಣೆ ಆಗಲಿದೆ. ಸಿನಿಮಾ ರಂಗದವರಿಗೆ ಖ್ಯಾತಿ ದೊರಕಲಿದೆ.