ದಿನ ಭವಿಷ್ಯ | ಬುಧವಾರ 31 ಮೇ 2023
Published 30 ಮೇ 2023, 21:44 IST
ಕೆ.ಎಲ್.ವಿದ್ಯಾಶಂಕರ ಸೋಮಯಾಜಿ
ಮೇಷ
ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುವುದು. ದೇಹಾರೋಗ್ಯವನ್ನು ಸ್ವತಃ ಕಾಳಜಿ ವಹಿಸಿ ನೋಡಿಕೊಳ್ಳಬೇಕು. ಸಾಂಸಾರಿಕವಾಗಿ ನೆಮ್ಮದಿ ಅಭಿವೃದ್ಧಿಯಾಗಲಿದೆ.
ವೃಷಭ
ಪಾರಮಾರ್ಥಿಕತೆಯಿಂದಾಗಿ ದೇವರ ರಕ್ಷಣೆ ಸದಾಕಾಲ ದೊರೆ ಯುವುದು. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಾಧನೆಗೆ ಪುರಸ್ಕಾರ ದೊರಕಲಿದೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಮನ್ನಣೆ ಇರುವುದು.
ಮಿಥುನ
ನಿಮ್ಮ ವಚನದಲ್ಲಿ ಹಿಡಿತವಿರಲಿ. ಮಾತುಕತೆಯಿಂದ ಕಟ್ಟುಬೀಳುವ ಪರಿಸ್ಥಿತಿ ಬರುತ್ತದೆ. ರಾಜಕೀಯ ಭವಿಷ್ಯದಲ್ಲಿ ಉತ್ತಮ ಅವಕಾಶ ಸಿಕ್ಕಿದರೂ ಕಾದು ನೋಡುವ ಪ್ರವೃತ್ತಿ ಉತ್ತಮ. ಉಷ್ಣದ ಸಮಸ್ಯೆಯಾಗಬಹುದು.
ಕರ್ಕಾಟಕ
ಸಮಯ ಕಳೆಯಲು ಮಾಡಿದ ಕೆಲಸದಿಂದ ಸೃಜನಶೀಲತೆ ಹೆಚ್ಚಲಿದೆ. ವೃತ್ತಿರಂಗದಲ್ಲಿ ಅಭಿವೃದ್ಧಿ ತೋರಿಬಂದರೂ ವಿಘ್ನ ಭೀತಿ ಉಂಟಾ ಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನ ಅನಿವಾರ್ಯ.
ಸಿಂಹ
ಆರ್ಥಿಕವೃದ್ಧಿ, ಆರೋಗ್ಯವೃದ್ಧಿ, ಆಕಸ್ಮಿಕ ಧನ ಪ್ರಾಪ್ತಿ ಯೋಗ ಈ ದಿನದಲ್ಲಿದೆ. ತಂತ್ರಜ್ಞರಿಗೆ ಮತ್ತು ಕುಶಲ ಕಾರ್ಮಿಕರಿಗೆ ಬೇಡಿಕೆಗಳು ಹೆಚ್ಚುವುದು.ಅವಿರತ ಶ್ರಮದ ಫಲ ಏನು ಎಂಬುದು ಮಕ್ಕಳಿಗೆ ಅರಿವಾಗಲಿದೆ.
ಕನ್ಯಾ
ನಿಮ್ಮಲ್ಲಿರುವ ಸ್ಪರ್ಧಾತ್ಮಕ ಮನೋಭಾವ ಅತ್ಯುನ್ನತ ಮಟ್ಟಕ್ಕೆ ಏರುವಂತೆ ಮಾಡುತ್ತದೆ. ವ್ಯವಸ್ಥಾಪಕ ವೃತ್ತಿಯವರಿಗೆ ಅಧಿಕಾರ ತಪ್ಪುವ ಭೀತಿ ಎದುರಾಗಬಹುದು. ಕ್ರಿಮಿಕೀಟಗಳಿಂದ ಅಲರ್ಜಿ ಉಂಟಾಗಬಹುದು.
ತುಲಾ
ಸರ್ಕಾರಿ ಕಚೇರಿಗಳಲ್ಲಿನ ಕೆಲಸಕ್ಕೆ ಹೆಚ್ಚು ಅಲೆದಾಡುವಂತಾಗಲಿದೆ. ವರ್ತಮಾನ ಕಾಲದಲ್ಲಿರುವ ಕೆಲಸವು ಶುಭ ಅಂತ್ಯ ನೋಡುತ್ತದೆ. ತಾಂತ್ರಿಕ ಕ್ಷೇತ್ರದವರಿಗೆ ರಾತ್ರಿ ಪಾಳಿಯಂತಹ ಬದಲಾವಣೆ ಇರಬಹುದು.
ವೃಶ್ಚಿಕ
ವಾತಾವರಣದಲ್ಲಾಗುವ ಬದಲಾವಣೆಯು ದೇಹದ ಮೇಲೆ ಪ್ರಭಾವ ಬೀರಲಿದೆ. ನೂತನ ಮನೆ ಕಟ್ಟಲೇಬೇಕೆಂಬ ಆಸೆ ಪ್ರಾರಂಭದ ಹಾದಿಯನ್ನು ಕಾಣಲಿದೆ. ಸತ್ಫಲಗಳಿಗಾಗಿ ಶಾರದೆಯನ್ನು ದರ್ಶಿಸುವುದು ಒಳ್ಳೆಯದು.
ಧನು
ರಾಜಕೀಯ ವ್ಯವಹಾರಗಳ ಪ್ರಬಲ ಆಕಾಂಕ್ಷಿಯಾಗಿರುವರು ಇನ್ನಷ್ಟು ಚುರುಕಾಗಬೇಕಾಗಿದೆ.ಕನಸುಗಳಿಗೆ ಜೀವ ಬಂದಂತೆ ಭಾಸವಾಗುತ್ತದೆ. ಸಿದ್ಧ ಉಡುಪು ಮಾರಾಟಗಾರರಿಗೆ ವಿಶೇಷ ಲಾಭ ಇರುವುದು.
ಮಕರ
ಒಳಗೊಳಗೆ ಅಸೂಯೆ ಪಡುವ ಸಂಬಂಧಿಗಳು ಸಾಧನೆಗೆ ಅಡ್ಡಿ ತಂದಾರು. ಮಗಳ ಮನೆಯಿಂದ ವಿಶೇಷ ಸುದ್ದಿ ಕೇಳುವಿರಿ. ಮಾರಾಟ ಪ್ರತಿನಿಧಿಗಳಿಗೆ ಸಂತೋಷದ ದಿನ. ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವ ಸಂಭವವಿದೆ.
ಕುಂಭ
ಕಾರ್ಯ ಸಾಧನೆಗೆ ಅಧಿಕ ತಿರುಗಾಟ, ಗಣ್ಯರ ಭೇಟಿ ಅನಿವಾರ್ಯವಾಗಲಿದೆ. ನಿಧಾನ ಗತಿಯ ಕೆಲಸ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ಇದು ಸಾಧನೆಯಲ್ಲಿ ಮೇಲಕ್ಕೆ ಸಾಗಲು ಸಹಕಾರಿ.
ಮೀನ
ತಂದೆ-ತಾಯಿಯ ಅಥವಾ ಮನೆಯವರ ಮಾತಿನತ್ತ ವಿಶೇಷ ಗಮನ ಹರಿಸಬೇಕಾಗುವುದು. ಕರ್ತವ್ಯದಲ್ಲಿ ಅಧಿಕವಾದ ಆತ್ಮವಿಶ್ವಾಸವು ಲೆಕ್ಕಾಚಾರವಿಲ್ಲದ ಜೀವನದಂತೆ ಆಗುತ್ತದೆ. ಮಿತವ್ಯಯ ಸಾಧಿಸಲು ಪ್ರಯತ್ನಿಸಿ.