ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಕ್ಷುಲ್ಲಕ ಕಾರಣಗಳಿಗೆ ಕೋಪಿಸಿಕೊಳ್ಳುವಿರಿ
Published 10 ಸೆಪ್ಟೆಂಬರ್ 2024, 22:27 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸಗಳಿಗೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಾಮಾಜಿಕ ಸಹಕಾರ ಸಿಗುವುದು. ವಿವಾಹ ಪ್ರಸ್ತಾವಗಳು ಆಕರ್ಷಕವಾಗಿ ಕಂಡರೂ ಪರಾಮರ್ಶಿಸದೇ ಒಪ್ಪಿಕೊಳ್ಳಬೇಡಿ.
ವೃಷಭ
ಸಂಗಾತಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವುದರಿಂದ ನೋವನ್ನು ಮರೆಯುವುದು. ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರವನ್ನು ಮಾಡುವವರಿಗೆ ತಾಪತ್ರಯಗಳು ಕಾಣಿಸಿಕೊಳ್ಳಲಿವೆ.
ಮಿಥುನ
ಅಚ್ಚುಕಟ್ಟಾದ ಕೆಲಸಗಳಿಂದ ಅಧಿಕಾರಿ ವರ್ಗದವರಲ್ಲಿ ನಿಮ್ಮ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸಿಕೊಳ್ಳುವಿರಿ. ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯ ಹಸ್ತ ದೊರಕಲಿದೆ.
ಕರ್ಕಾಟಕ
ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ನಂಬುಗೆ ಮತ್ತು ವಿಶ್ವಾಸದಿಂದಾಗಿ ಹಲವಾರು ಅವಕಾಶಗಳು ನಿಮ್ಮದಾಗಲಿವೆ. ಆಟೋಟಗಳಲ್ಲಿ ಹಿಂದಿನಕ್ಕಿಂತ ಉತ್ತಮ ಪ್ರದರ್ಶನ ತೋರುವಿರಿ.
ಸಿಂಹ
ಆರೋಗ್ಯಕ್ಕಿಂತ ಹಣ ಮುಖ್ಯ ಎನ್ನುವ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಾಗುವುದು. ಕೃಷಿಕರಿಗೆ ಉತ್ತಮ ಫಸಲು ದೊರಕುವ ಲಕ್ಷಣಗಳಿಂದ ಮನಸ್ಸಿಗೆ ಹರ್ಷವಿರುವುದು. ಸಾಮರಸ್ಯದಿಂದ ಇರುವಿರಿ.
ಕನ್ಯಾ
ಅನಗತ್ಯ ಖರ್ಚಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಕಾರ್ಯಕ್ಷೇತ್ರದಲ್ಲಿನ ಉನ್ನತ ವ್ಯಕ್ತಿಯನ್ನು ಭೇಟಿಯಾಗುವಿರಿ. ಮಾತುಗಳು ಯಾರ ಮನಸ್ಸನ್ನೂ ನೋಯಿಸದಿರಲಿ.
ತುಲಾ
ಹಣಕಾಸು ಸಂಸ್ಥೆಗಳನ್ನು ನಡೆಸುವವರಿಗೆ ದುಡುಕು ನಿರ್ಧಾರದಿಂದ ನಷ್ಟ ಸಂಭವಿಸಲಿದೆ. ನಿಮ್ಮ ಸಂಬಂಧಿಕರ ಆಗಮನದಿಂದ ಸಂತೋಷ ಆಗುವುದು. ಬೇಸರವಾದಲ್ಲಿ ಅದರ ನಿವಾರಣೆಗಾಗಿ ಸಂಗೀತ ಕೇಳಿ.
ವೃಶ್ಚಿಕ
ನೆಂಟರಿಷ್ಟರ ಸಲಹೆಸೂಚನೆಗಳನ್ನು ಆಲಿಸಿ. ಸನ್ಮಾರ್ಗದಲ್ಲಿ ನಡೆದರೆ ದೈವಬಲ ನಿಮಗೆ ಒದಗಿ ಬಂದು ಅಭಿವೃದ್ಧಿ ಗೊಳ್ಳುವಿರಿ. ವೈದ್ಯರ ಸಲಹೆಯಂತೆ ಧ್ಯಾನ ಮತ್ತು ಯೋಗದ ಅಭ್ಯಾಸ ಮಾಡಿಕೊಳ್ಳಿ. ಹಣಕಾಸಿನ ಬಗ್ಗೆ ಚಿಂತೆ ಬೇಡ.
ಧನು
ಪ್ರಸ್ತುತ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವುದರಿಂದ ಅತಿಯಾಗಿ ಬೀಗದಿರುವುದು ಒಳ್ಳೆಯದು. ವಾಹನದಿಂದ ಕೈ ಕಾಲಿಗೆ ಪೆಟ್ಟಾಗುವ ಸಾಧ್ಯತೆ ಇದೆ. ಸಾಧನೆಯ ಮಾರ್ಗದಲ್ಲಿ ಮುಂದುವರಿಯುವಿರಿ.
ಮಕರ
ಗೃಹ ನಿರ್ಮಾಣದಂಥ ಕಾರ್ಯ ಕೈಗೊಂಡವರಿಗೆ ಮಾನಸಿಕ ಒತ್ತಡ ಹೆಚ್ಚಾಗಿರುವುದು. ವಯಸ್ಸಾದವರು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸ್ವೀಕರಿಸಿ. ಕ್ಷುಲ್ಲಕ ಕಾರಣಗಳಿಗೆ ಕೋಪಿಸಿಕೊಳ್ಳುವಿರಿ.
ಕುಂಭ
ಸಂಸ್ಥೆಯ ಹೊಸ ಆರ್ಥಿಕ ನೀತಿಯಿಂದ ನಿಮಗೆ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭ ಇರುವುದು. ಜವಾಬ್ದಾರಿಯ ಕೆಲಸ ಕಾರ್ಯ ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಹಣ ಉಳಿಸಲು ಯೋಚಿಸುವಿರಿ.
ಮೀನ
ಮಗಳ ಮಾತಿನಂತೆ ಕೆಲಸದಲ್ಲಿ ಮಾಡಿಕೊಂಡ ಬದಲಾವಣೆಯು ಆರೋಗ್ಯವನ್ನು ಸರಿ ಮಾಡಿಕೊಳ್ಳಲು ಸಹಕಾರಿ. ಎಲ್ಲಾ ಕೆಲಸಗಳನ್ನು ಅತೀವ ಒತ್ತಡದ ನಡುವೆಯೇ ಮಾಡುವಂತೆ ಆಗುವುದು.
ADVERTISEMENT
ADVERTISEMENT