ದಿನ ಭವಿಷ್ಯ: ಈ ರಾಶಿಯವರಿಗೆ ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ
Published 29 ಏಪ್ರಿಲ್ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಹೋದ್ಯೋಗಿಗಳೊಡನೆ ಅಥವಾ ಆಪ್ತ ಸ್ನೇಹಿತರೊಡನೆ ಹಣಕಾಸಿನ ವ್ಯವಹಾರದಿಂದ ಸಂಬಂಧಕ್ಕೆ ಹುಳಿ ಹಿಂಡಿದಂತಾಗಲಿದೆ. ಪ್ರೀತಿ ಪಾತ್ರರೊಡನೆ ಆತ್ಮೀಯ ಗೆಳತನ ಇಟ್ಟುಕೊಳ್ಳಿ. ಕಾಗದಪತ್ರ ನಿರ್ವಹಣೆಯಲ್ಲಿ ಎಚ್ಚರವಹಿಸಿ.
29 ಏಪ್ರಿಲ್ 2026, 19:30 IST
ವೃಷಭ
ಕಲಾವಿದರಿಗೆ ಉತ್ತಮ ಅವಕಾಶವಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದು ಕಷ್ಟಕರವಾಗಲಿದೆ. ಸಂಸ್ಥೆಯ ಆರ್ಥಿಕ ಆದಾಯ ಹೆಚ್ಚಿಸಲು ಶ್ರಮ ಅಗತ್ಯ.
29 ಏಪ್ರಿಲ್ 2026, 19:30 IST
ಮಿಥುನ
ಬಹುದಿನಗಳಿಂದ ಕಾಡುತ್ತಿರುವ ಅಜೀರ್ಣದ ಸಮಸ್ಯೆಯಿಂದ ಜೀವನ ಉತ್ಸಾಹ ಕಳೆದುಕೊಂಡು ಆಲಸ್ಯವನ್ನು ಹೊಂದುವಿರಿ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸಿ.
29 ಏಪ್ರಿಲ್ 2026, 19:30 IST
ಕರ್ಕಾಟಕ
ನಿದ್ರಾಹೀನತೆಯಿಂದಾಗಿ ಸಂಭ್ರಮದ ಸಂದರ್ಭಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮೆಕ್ಯಾನಿಕ್‌ಗಳಿಗೆ ಹೆಚ್ಚು ಆದಾಯ ತರುವ ದಿನ. ನಂಬಿಸಿ ಮೋಸ ಮಾಡುವವರ ಬಲೆಗೆ ನೀವಿಂದು ಬೀಳುವ ಸಾಧ್ಯತೆ.
29 ಏಪ್ರಿಲ್ 2026, 19:30 IST
ಸಿಂಹ
ಕೆಲಸದಲ್ಲಿ ಸಾಗುತ್ತಿರುವ ಮಾರ್ಗವು ಸರಿಯಾಗಿದೆ ಎಂಬ ದೃಢತೆ ನಿಮಗೆ ಬರಲಿದೆ. ದುರಭ್ಯಾಸದಿಂದ ದೂರ ಉಳಿಯುವ ಪ್ರಯತ್ನಕ್ಕೆ ಸ್ನೇಹಿತರು ತೊಂದರೆ ಮಾಡಬಹುದು.
29 ಏಪ್ರಿಲ್ 2026, 19:30 IST
ಕನ್ಯಾ
ಸಾರ್ವಜನಿಕರಲ್ಲಿ ಹೆಚ್ಚಾಗಿ ಬೆರೆಯುವ ಸಂದರ್ಭ ಬರುವುದರಿಂದ ಆರೋಗ್ಯದಲ್ಲಿ ಗಮನವಹಿಸಿ. ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುವ ಉತ್ತಮ ಅವಕಾಶ ಪಡೆಯುವಿರಿ. ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ.
29 ಏಪ್ರಿಲ್ 2026, 19:30 IST
ತುಲಾ
ಬಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ಮನೆಯಲ್ಲಿ ನಡೆಯಲಿದೆ. ವಾಹನ ಚಾಲನೆಯಲ್ಲಿ ಅಥವಾ ಕಬ್ಬಿಣ ಕೆಲಸ ಮಾಡುವವರು ಕಾಳಜಿ ವಹಿಸಿ. ಸಿದ್ಧ ಉಡುಪು ಮಾರಾಟಗಾರರಿಗೆ ಶುಭದಿನ.
29 ಏಪ್ರಿಲ್ 2026, 19:30 IST
ವೃಶ್ಚಿಕ
ವೈಯಕ್ತಿಕವಾದ ಕಷ್ಟಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ. ಅನುಕಂಪ ತೋರುವ ಬದಲು ಗೇಲಿ ಮಾಡುವವರೇ ಅಧಿಕವಾಗಿ ಸಿಗುತ್ತಾರೆ. ತಲೆನೋವಿನಂತ ಸಮಸ್ಯೆ ಎದುರಾಗಬಹುದು.
29 ಏಪ್ರಿಲ್ 2026, 19:30 IST
ಧನು
ಕೆಲಸವನ್ನು ಮುಂದೂಡುವ ಅಭ್ಯಾಸ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಅನಗತ್ಯವಾಗಿ ಮಧ್ಯಸ್ಥಿಕೆ ವಹಿಸುವುದು ಸಮಸ್ಯೆಯನ್ನು ಕೈಬೀಸಿ ಕರೆದಂತಾಗುತ್ತದೆ. ಜಾಗರೂಕರಾಗಿ ಇರುವುದು ಕ್ಷೇಮ.
29 ಏಪ್ರಿಲ್ 2026, 19:30 IST
ಮಕರ
ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾನೂನು ವಿಷಯದಲ್ಲಿ ಸಲಹೆ ಪಡೆದುಕೊಳ್ಳುವುದು ಅನಿವಾರ್ಯ. ಇತರರಿಗೆ ಅನುಮಾನಕ್ಕೆ ಎಡೆ ಮಾಡಿಕೊಡುವಂತಹ ಕೆಲಸಗಳು ನಿಮ್ಮಿಂದ ನಡೆಯಲಿದೆ.
29 ಏಪ್ರಿಲ್ 2026, 19:30 IST
ಕುಂಭ
ಹಣಕಾಸಿನ ವಿಚಾರದಲ್ಲಿ ವ್ಯವಹರಿಸುವಾಗ ದಾಕ್ಷಿಣ್ಯಕ್ಕೆ ಸಿಕ್ಕಿಕೊಳ್ಳದೇ ಇರುವ ರೀತಿಯಲ್ಲಿ ವ್ಯವಹರಿಸಿ. ಗೋವಿನ ಉತ್ಪನ್ನಗಳ ಮಾರಾಟಗಾರರಿಗೆ ಲಾಭ ಬರುವುದು. ಆರೋಗ್ಯದಲ್ಲಿ ಜಾಗ್ರತೆ ವಹಿಸಿ.
29 ಏಪ್ರಿಲ್ 2026, 19:30 IST
ಮೀನ
ಅಭಿವೃದ್ಧಿಯ ಅವಕಾಶಗಳು ಸಿಕ್ಕಿದರೂ, ಬಳಸಿಕೊಳ್ಳಲು ಅಸಾಧ್ಯವಾಗುವಂತಹ ಪರಿಸ್ಥಿತಿಗೆ ತಲುಪುವಿರಿ. ಮಾನಸಿಕ ಕೊರಗು ಸಂತೋಷಕ್ಕೆ ಭಂಗವನ್ನು ಉಂಟುಮಾಡುವುದು. ಮದುವೆ ವಿಷಯ ಪ್ರಸ್ತಾಪವಾಗಲಿದೆ.
29 ಏಪ್ರಿಲ್ 2026, 19:30 IST