ದಿನ ಭವಿಷ್ಯ: ಈ ರಾಶಿಯವರಿಗೆ ದೀರ್ಘಕಾಲಿಕ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ
Published 30 ಏಪ್ರಿಲ್ 2026, 19:35 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ತಪ್ಪುಗಳ ಬಗ್ಗೆ ಬೇರೆಯವರು ಹೇಳುವ ಮೊದಲು ನೀವೆ ಸರಿಪಡಿಸಿಕೊಳ್ಳಿರಿ. ಕುಟುಂಬದ ಸದಸ್ಯರ ಹಿತಾಸಕ್ತಿಗೆ ಆದ್ಯತೆ ಇರಲಿ. ಹಾಲು ಉತ್ಪನ್ನ ವಸ್ತುಗಳ ಮಾರಾಟಗಾರರಿಗೆ ಲಾಭ ಆಗಲಿದೆ.
30 ಏಪ್ರಿಲ್ 2026, 19:35 IST
ವೃಷಭ
ಸ್ಥಗಿತಗೊಂಡ ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ ಆಗುವುದು. ಹಳೆಯ ವಿಷಯಗಳನ್ನು ಅಥವಾ ಅಗಲಿದಂತಹ ವ್ಯಕ್ತಿಗಳನ್ನು ನೆನಪಿಸಿಕೊಂಡು ದುಃಖ ಪಡುವುದು ಸರಿಯಲ್ಲ.
30 ಏಪ್ರಿಲ್ 2026, 19:35 IST
ಮಿಥುನ
ತೀರ್ಮಾನಗಳು ಇನ್ನೊಬ್ಬರ ಮನಸ್ಸಿಗೆ ಅಥವಾ ಅವರ ಭಾವನೆಗೆ ನೋವಾಗದಂತಿರಲಿ. ವೈದ್ಯಕೀಯ ವಿದ್ಯಾರ್ಥಿಗಳು ಓದಿನಲ್ಲಿ ಪರಿಶ್ರಮ ವಹಿಸಬೇಕಾಗುತ್ತದೆ. ಇನ್ನೊಬ್ಬರಿಗೆ ತಿಳಿವಳಿಕೆ ಹೇಳುವ ಕೆಲಸವನ್ನು ಮಾಡದಿರಿ.
30 ಏಪ್ರಿಲ್ 2026, 19:35 IST
ಕರ್ಕಾಟಕ
ದುಸ್ಥಿತಿಯಿಂದ ಹೊರ ಬರುವ ಸಾಮರ್ಥ್ಯ ನಿಮ್ಮಲ್ಲಿದೆ. ಯಾವ ಪರಿಸ್ಥಿತಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ. ಕೆಲಸಗಳಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ತಾಳ್ಮೆ ಈ ದಿನದ ಮೂಲ ಮಂತ್ರವಾಗಿರಲಿ.
30 ಏಪ್ರಿಲ್ 2026, 19:35 IST
ಸಿಂಹ
ಗೃಹ ನಿರ್ಮಾಣದ ಕೆಲಸವನ್ನು ಆರಂಭಿಸಲು ಸೂಕ್ತ ಸಮಯ. ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಇರಲಿದೆ. ದೇವರ ದಯೆಯಿಂದ ಕುಟುಂಬದಲ್ಲಿ ಸಾಮರಸ್ಯ ಅಧಿಕವಾಗಿ ಇರುತ್ತದೆ.
30 ಏಪ್ರಿಲ್ 2026, 19:35 IST
ಕನ್ಯಾ
ಹೊಸ ಕಾರ್ಯದ ಸಂಪೂರ್ಣ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಯಾವ ಕೆಲಸದಲ್ಲೂ ಅಡೆ ತಡೆಗಳು ಇರದು. ಕುಟುಂಬದ ಸದಸ್ಯರಲ್ಲಿರುವ ವಾದ–ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
30 ಏಪ್ರಿಲ್ 2026, 19:35 IST
ತುಲಾ
ಆಫೀಸಿನ ವಿಷಯದಂತೆ ಮನೆಯ ವಿಷಯಗಳ ಕಡೆಗೂ ಗಮನವಹಿಸುವುದು ಒಳ್ಳೆಯದು. ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಸಿಗುವ ಸುಸಂದರ್ಭವನ್ನು ಸೂಕ್ತವಾಗಿ ಬಳಸಿಕೊಳ್ಳಿ.
30 ಏಪ್ರಿಲ್ 2026, 19:35 IST
ವೃಶ್ಚಿಕ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪರಿಪೂರ್ಣ ಪ್ರಯತ್ನ ಹಾಕುವುದು ಅಗತ್ಯ. ಬರಹಗಾರರಿಗೆ ವೃತ್ತಿಯಲ್ಲಿ ಅಡಚಣೆ ಉಂಟಾಗಬಹುದು. ದೀರ್ಘಕಾಲಿಕ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ.
30 ಏಪ್ರಿಲ್ 2026, 19:35 IST
ಧನು
ಅಧಿಕಾರಿಗಳ ಜೊತೆ ಮುಕ್ತ ಚರ್ಚೆ ಮಾಡಿದ್ದಲ್ಲಿ ಸಮಸ್ಯೆಗಳ ಪರಿಹಾರವನ್ನು ಶಾಶ್ವತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗುವುದು. ಸರ್ಕಾರಿ ಕಾಮಗಾರಿ ಕೆಲಸಗಳು ದೊರೆತು ಆರ್ಥಿಕ ಅಭಿವೃದ್ಧಿಯನ್ನು ಹೊಂದುವಿರಿ.
30 ಏಪ್ರಿಲ್ 2026, 19:35 IST
ಮಕರ
ಅಧಿಕಾರ ಪ್ರಾಪ್ತಿಯಲ್ಲಿ ಅಡೆತಡೆಯ ಸಂಭವವಿರುವುದು. ನಿಮ್ಮ ಕೈ ಮೀರಿದ ಕೆಲಸಗಳ ಬಗ್ಗೆ ಪುನಃ ಪುನಃ ಯೋಚಿಸುವುದು ಸರಿಯಲ್ಲ. ರಾಜಕೀಯ ವ್ಯಕ್ತಿಗಳ ಸಹಾಯದಿಂದ ನಿಮ್ಮ ವೈಯಕ್ತಿಕ ಕಾರ್ಯಗಳನ್ನು ನಡೆಸಿಕೊಳ್ಳಬಹುದು.
30 ಏಪ್ರಿಲ್ 2026, 19:35 IST
ಕುಂಭ
ವೃತ್ತಿ ಬದುಕಿನಲ್ಲಿ ಸಂಕೋಚದ ಪ್ರವೃತ್ತಿಯಿಂದಾಗಿ ಲಾಭಗಳಿಲ್ಲದೆ ಅಧಿಕವಾದ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಎಂಜಿನಿಯರ್‌ಗಳ ನಿರುದ್ಯೋಗದ ಸಮಸ್ಯೆ ಸ್ನೇಹಿತನ ಪ್ರಯತ್ನ ಬಲದಿಂದ ದೂರವಾಗಲಿದೆ.
30 ಏಪ್ರಿಲ್ 2026, 19:35 IST
ಮೀನ
ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಇರುವುದು ಯಶಸ್ಸಿಗೆ ಅನುಕೂಲವಾಗುತ್ತದೆ. ಮಾರಾಟ ಪ್ರತಿನಿಧಿಗಳಿಗೆ ಕಮಿಷನ್ ಸಿಗಲಿದೆ. ಸತ್ಯನಾರಾಯಣನ ಸೇವೆಯಿಂದ ಆರ್ಥಿಕ ಮುಗಟ್ಟು ನಿವಾರಣೆಯಾಗುವುದು.
30 ಏಪ್ರಿಲ್ 2026, 19:35 IST