ದಿನ ಭವಿಷ್ಯ: ಈ ರಾಶಿಯವರು ಹೂಡಿಕೆ ವಿಚಾರದಲ್ಲಿ ಜಾಗ್ರತೆಯಿಂದ ವ್ಯವಹರಿಸಿ
Published 1 ಮೇ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸ ಕಾರ್ಯಗಳು ಆತಂಕವಿಲ್ಲದೆ ಸಾಗುವುದು ನೆಮ್ಮದಿ ತರಲಿದೆ. ಒಡಹುಟ್ಟಿದವರೊಂದಿಗಿನ ಪರಸ್ಪರ ಸಹಕಾರದಿಂದ ಮಾನಸಿಕ ನೆಮ್ಮದಿ ಹೊಂದುವಿರಿ.
ವೃಷಭ
ಪರಿಸ್ಥಿತಿಗಳು ಸ್ವಲ್ಪ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರುವುದು. ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಪರಿಶ್ರಮದ ಅಗತ್ಯವಿದೆ. ವಿಘ್ನ ಭಯದಿಂದ ಹೊರಬರಲು ಮಹಾಗಣಪತಿಯನ್ನು ಆರಾಧಿಸಿ.
ಮಿಥುನ
ಮಗಳ ಜೀವನದ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ. ಸಿವಿಲ್ ಎಂಜಿನಿಯರ್‌ಗೆ ಉತ್ತಮ ಅವಕಾಶಗಳು ಸಿಗಲಿವೆ.
ಕರ್ಕಾಟಕ
ಸಜ್ಜನರ ಸಹವಾಸ ಮಾಡುವ ಹಂಬಲಕ್ಕೆ ಪೂರಕ ವಾತಾವರಣ ಸಿಗಲಿದೆ. ಲೇವಾದೇವಿ ವ್ಯವಹಾರಗಳಲ್ಲಿ ಜಾಗ್ರತೆ ವಹಿಸಬೇಕಾಗುವುದು. ಕೆಲಸ ಕಾರ್ಯದಲ್ಲಿ ಏಕಾಗ್ರತೆ ಕಡಿಮೆಯಾಗಲಿದೆ.
ಸಿಂಹ
ಮನೆಯಲ್ಲಿನ ಕೆಲ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುವುದು. ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿಯಿಂದ ಖರ್ಚು ಉಂಟಾಗಲಿದೆ. ಯಂತ್ರೋಪಕರಣಗಳನ್ನು ಜಾಗ್ರತೆಯಿಂದ ಬಳಸಿ.
ಕನ್ಯಾ
ಪರಿಶ್ರಮವಿದ್ದರೂ ಅಲ್ಪ ಕಾರ್ಯಸಿದ್ಧಿಯಾಗುವುದು ದುಃಖಕ್ಕೆ ಮೂಲ ಕಾರಣ. ಧ್ಯಾನ ಹಾಗೂ ಕ್ರೀಡೆಯಂಥ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಸೇವಾನಿರತ ವ್ಯಕ್ತಿಗಳಿಗೆ ಜನಪ್ರಿಯತೆ ಹೆಚ್ಚುತ್ತದೆ.
ತುಲಾ
ಸಹಕಾರವನ್ನು ಪಡೆದು ನಿಮ್ಮನ್ನೇ ಮೂರ್ಖರನ್ನಾಗಿ ಮಾಡುವವರು ಎದುರಾಗುವರು. ತಾಯಿಯ ಸಹಾಯದಿಂದ ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭವಾಗುವುದು. ಮನೆಯಲ್ಲಿ ವಿವಾಹ ಸಿದ್ಧತೆಗಳು ಭರದಿಂದ ಸಾಗಲಿವೆ.
ವೃಶ್ಚಿಕ
ಅಧೀನ ಸಿಬ್ಬಂದಿಯೊಂದಿಗೆ ಸಂಯಮದಿಂದ ಇರಿ. ಕಾರ್ಖಾನೆಯಲ್ಲಿ ವಿದ್ಯುತ್ ಶಕ್ತಿಯ ಲೋಪದಿಂದ ನಷ್ಟ ಸಂಭವಿಸಬಹುದು. ಹೂಡಿಕೆ ವಿಚಾರದಲ್ಲಿ ಜಾಗ್ರತೆಯಿಂದ ವ್ಯವಹರಿಸಿ.
ಧನು
ಮನಸ್ಸು ಧ್ಯಾನದತ್ತ ಹರಿಯಲು ಧಾರ್ಮಿಕ ವಿಚಾರಧಾರೆ ಮುಖ್ಯ. ಕೇವಲ ಮನರಂಜನೆಗಾಗಿ ಅಧಿಕ ಮಟ್ಟದಲ್ಲಿ ಧನ ಹಾನಿ ಆಗಲಿದೆ. ಸ್ವಇಚ್ಛೆಯೇ ಅಂತಿಮವಾಗಿರಲಿ.
ಮಕರ
ಮನೆಯ ಸದಸ್ಯರಲ್ಲಿದ್ದ ಭಿನ್ನಾಭಿಪ್ರಾಯ, ವೈಮನಸ್ಸಿಗೆ ಕಾರಣ ಮತ್ತು ಪರಿಹಾರವನ್ನು ಕಂಡುಕೊಳ್ಳುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಣಗಬೇಕಾಗಬಹುದು. ಬೇಳೆ ವ್ಯಾಪಾರಸ್ಥರಿಗೆ ಅಧಿಕ ವ್ಯಾಪಾರವಿರುವುದು.
ಕುಂಭ
ಸರಿಯಾದ ಪರಿಶೀಲನೆ ಇಲ್ಲದೆ ಯಾವ ಕೆಲಸಗಳಲ್ಲೂ ಹೂಡಿಕೆ ಮಾಡುವುದು ಸರಿಯಲ್ಲ. ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳುವುದರಿಂದ ನೋವು ಕಡಿಮೆಯಾಗುವುದು.
ಮೀನ
ಸತ್ಕಾರ್ಯ ನೆರವೇರಿಸುವ ಬಗ್ಗೆ ಪೂರ್ವಭಾವಿಯಾಗಿ ಕುಟುಂಬದವರೊಡನೆ ದೀರ್ಘ ಸಮಾಲೋಚನೆ ನಡೆಸಿ. ಮನೆ ಹುಡುಕುವ ಕೆಲಸದಲ್ಲಿ ಸಹೋದ್ಯೋಗಿಯೊಬ್ಬರು ನೆರವಿಗೆ ಬರುವರು.