ದಿನ ಭವಿಷ್ಯ: ಈ ರಾಶಿಯವರಿಗೆ ನಾಯಕತ್ವದ ಸ್ಥಾನಕ್ಕೆ ಆಯ್ಕೆಯಾಗುವ ಲಕ್ಷಣಗಳಿವೆ
Published 21 ಏಪ್ರಿಲ್ 2026, 23:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೆಂಡತಿಯ ಆರೋಗ್ಯದ ವಿಚಾರವಾಗಿ ವೈದ್ಯರಲ್ಲಿ ಸಮಾಲೋಚನೆ ನಡೆಸಬೇಕಾಗಬಹುದು. ಸಂಜೆಯ ಸಮಯದಲ್ಲಿ ಬೆಲೆ ಬಾಳುವ ವಸ್ತು ಕಾಣೆಯಾಗುವ ಸಂಭವವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಚತುರ ನಡೆ ಇರುವುದು.
21 ಏಪ್ರಿಲ್ 2026, 23:00 IST
ವೃಷಭ
ಕಾಗದದ ವ್ಯಾಪಾರದಲ್ಲಿ ಮಂದಗತಿಯ ನಡೆ ಕಂಡರೂ ಅಭಿವೃದ್ಧಿಯಂತೂ ಖಚಿತವಾಗಿರುತ್ತದೆ. ನಿಮ್ಮ ಸುತ್ತ ವಾತಾವರಣ ಸಂತಸದಾಯಕವಾಗಿರುತ್ತದೆ. ಸಾಮಾಜಿಕವಾಗಿ ನಿಮ್ಮ ವರ್ಚಸ್ಸು ಹೆಚ್ಚುವುದು. ಕೃಷಿಕರಿಗೆ ಸಂಪಾದನೆ ಹೆಚ್ಚಲಿದೆ.
21 ಏಪ್ರಿಲ್ 2026, 23:00 IST
ಮಿಥುನ
ಅಪರಿಚಿತರಿಂದ ಮೋಸ ಆಗಬಹುದು, ಆದ್ದರಿಂದ ಅಪರಿಚಿತ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ವ್ಯಾಪಾರ ನೆಡೆಸುವುದು ಸರಿಯಲ್ಲ. ನಡವಳಿಕೆಯನ್ನು ಕೊಂಚ ಹಿಡಿತದಲ್ಲಿಟ್ಟುಕೊಂಡರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವುದು ತಪ್ಪುವುದು.
21 ಏಪ್ರಿಲ್ 2026, 23:00 IST
ಕರ್ಕಾಟಕ
ಅರೆ ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಇನ್ನಷ್ಟು ಹೆಚ್ಚಿನ ಅನುಕೂಲಗಳಾಗುವ ಸಾಧ್ಯತೆ ಇದೆ. ಎಲ್ಲವನ್ನೂ ಎದುರಿಸಬಲ್ಲೆನೆಂಬ ಮಾನಸಿಕ ಧೈರ್ಯವನ್ನು ತಂದುಕೊಳ್ಳಿರಿ. ನ್ಯಾಯಾಂಗ ಇಲಾಖೆಯವರಿಗೆ ವಿಚಿತ್ರ ಅನುಭವವಾಗುವುದು.
21 ಏಪ್ರಿಲ್ 2026, 23:00 IST
ಸಿಂಹ
ಏಕಾಂಗಿಯಾಗಿ ಮತ್ತು ಹೆಚ್ಚು ಸ್ವತಂತ್ರವಾಗಿರಲು ಇಚ್ಛಿಸಿದಲ್ಲಿ ಉತ್ತಮ ಅವಕಾಶಗಳು ಎದುರಾಗಲಿವೆ. ವಸ್ತ್ರ ವಿನ್ಯಾಸದಲ್ಲಿ ವಿಶೇಷ ಪರಿಣತಿ ತೆಗೆದುಕೊಳ್ಳಬಹುದು. ಪಾಲುದಾರಿಕೆಯಲ್ಲಿ ನಿರ್ಲಿಪ್ತತೆಯಿಂದ ಇರುವುದು ಉತ್ತಮ.
21 ಏಪ್ರಿಲ್ 2026, 23:00 IST
ಕನ್ಯಾ
ಸ್ವ ಉದ್ಯೋಗಿಗಳು ಕೈ ತಪ್ಪಿ ಹೋಗಿದ್ದ ಕೆಲಸಗಳನ್ನು ಮರಳಿ ಪಡೆದುಕೊಳ್ಳುವಲ್ಲಿ ಗೆಲುವು ಕಾಣುವಿರಿ. ಕೆಲಸಗಾರರಲ್ಲಿ ಸಮಾಧಾನ ಚಿತ್ತದಿಂದಿರಿ, ಇಲ್ಲವಾದರೆ ಮಾನಹಾನಿಯಾಗಬಹುದು. ಅರಣ್ಯ ಪಾಲಕರಿಗೆ ಬಡ್ತಿ ಸಂಭವವಿದೆ.
21 ಏಪ್ರಿಲ್ 2026, 23:00 IST
ತುಲಾ
ಜೀವನದ ಯಾವುದೇ ರಂಗದಲ್ಲಾದರೂ ನಿಮ್ಮ ಬಯಕೆಗೆ ತಕ್ಕಂತೆ ದೂರ ಕ್ರಮಿಸುವ ಸಾಮರ್ಥ್ಯ ನಿಮ್ಮಲ್ಲಿರುವುದು ಮತ್ತು ಈ ದಿನ ಮಾರ್ಗ ಗೋಚರವಾಗುವುದು. ನಾಯಕತ್ವದ ಸ್ಥಾನಕ್ಕೆ ಆಯ್ಕೆಯಾಗುವ ಲಕ್ಷಣಗಳಿವೆ.
21 ಏಪ್ರಿಲ್ 2026, 23:00 IST
ವೃಶ್ಚಿಕ
ಕೋರ್ಟು ಕಛೇರಿಯ ಕೆಲಸ ಕಾರ್ಯಗಳು ಯಾವುದೇ ರೀತಿಯ ಪರದಾಟವಿಲ್ಲದೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ. ನಿಮಗಿರುವ ವ್ಯಾವಹಾರಿಕ ಸಂಬಂಧಗಳು ವಿಸ್ತಾರಗೊಳ್ಳುವ ಸಮಯ ಇದಾಗಿದೆ. ಪರೀಕ್ಷೆಗಳಲ್ಲಿ ಜಯ ಗಳಿಸುವಿರಿ.
21 ಏಪ್ರಿಲ್ 2026, 23:00 IST
ಧನು
ಪರರಿಗೆ ಉಪಕಾರ ಮಾಡುವುದು ಕಷ್ಟವೆನಿಸಿದರೆ ಸುಮ್ಮನಿರಿ, ಉಪದ್ರವ ಮಾಡಬೇಡಿ. ಔಷಧಿಗಳ ಬಳಕೆಯಲ್ಲಿ ಜ್ಞಾನವಿರಲಿ ಮತ್ತು ನಿಮ್ಮ ಸ್ವಇಚ್ಛೆಯಂತೆ ಸೇವಿಸಬೇಡಿ. ಅಸಾಧ್ಯ ಕಾರ್ಯಗಳನ್ನೂ ಸಹ ಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ.
21 ಏಪ್ರಿಲ್ 2026, 23:00 IST
ಮಕರ
ಸಂಬಂಧಿಗಳ ಅಪಹಾಸ್ಯದ ಮಾತುಗಳಿಂದ ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಇಮ್ಮಡಿಗೊಂಡು ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಆಪ್ತ ಸ್ನೇಹಿತರು ಮತ್ತು ನೆರೆಯವರೊಂದಿಗೆ ಬಾಂಧವ್ಯ ಉತ್ತಮಗೊಳ್ಳುವುದು.
21 ಏಪ್ರಿಲ್ 2026, 23:00 IST
ಕುಂಭ
ಭಾಷಣ, ಚಿತ್ರಕಲೆಯಲ್ಲಿನ ನಿಮ್ಮ ಆಸಕ್ತಿಯಿಂದಾಗಿ, ಹೆಚ್ಚಿನ ಕಲಿಕೆಗಾಗಿ ಸಮಯವನ್ನು ಮೀಸಲಿಡುವ ತೀರ್ಮಾನ ಮಾಡಿ. ದಾಯಾದಿ ವರ್ಗದವರಿಂದ ನಿಮ್ಮ ಕೆಲಸಕ್ಕೆ ಅಪರೂಪಕ್ಕೆ ಅನುಕೂಲ ಉಂಟಾಗಲಿದೆ.
21 ಏಪ್ರಿಲ್ 2026, 23:00 IST
ಮೀನ
ಮೇಲಧಿಕಾರಿಗಳೊಂದಿಗೆ ವ್ಯವಹರಿಸುವಾಗ ನಿರ್ಧಾರಗಳನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ಸರಿಯಾಗಿ ಸ್ಪಷ್ಟ ಪಡಿಸುವುದು ಒಳ್ಳೆಯದು. ಜೀವನ ಶೈಲಿಯನ್ನು ಇನ್ನೊಬ್ಬರ ಬಲವಂತದ ಮೇಲೆ ಬದಲಾಯಿಸಿಕೊಳ್ಳಬೇಕಾಗುತ್ತದೆ.
21 ಏಪ್ರಿಲ್ 2026, 23:00 IST