ಸೋಮವಾರ, 18 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸ್ವಪ್ರಯತ್ನದಿಂದ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ
Published 22 ಏಪ್ರಿಲ್ 2026, 23:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಏಕಮುಖ ಪ್ರತಿಭೆಯನ್ನು ಹೊರತುಪಡಿಸಿ, ಇತರ ವಿಷಯಗಳಿಗೂ ಪ್ರಾಮುಖ್ಯ ನೀಡಿ. ಕೃಷಿ ಮತ್ತು ಹೈನು ಉತ್ಪನ್ನಗಳಲ್ಲಿನ ವ್ಯಾಪಾರಗಳಿಂದ ಹೇರಳ ಲಾಭವಿದೆ. ಸ್ವಪ್ರಯತ್ನದಿಂದ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ.
ವೃಷಭ
ವಿದೇಶಿ ಸ್ನೇಹಿತರಿಂದ ವ್ಯಾವಹಾರಿಕ ಸಲಹೆಯನ್ನು ಪಡೆಯುವಂತಾಗಲಿದೆ. ನಿಮ್ಮ ಕನಸುಗಳು ನನಸಾಗುವ ಎಲ್ಲ ಲಕ್ಷಣಗಳೂ ಕಂಡು ಬರುವವು. ವಾಣಿಜ್ಯ ಸಂಸ್ಥೆಯೊಂದರಲ್ಲಿ ಕೆಲಸ ಸಂಪಾದಿಸಿಕೊಳ್ಳುವ ಪ್ರಯತ್ನ ಮಾಡಬಹುದು.
ಮಿಥುನ
ಇತರರು ನಿಮ್ಮ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳದಂತೆ ಜಾಗರೂಕತೆ ವಹಿಸಿ. ಲೇವಾದೇವಿ ವ್ಯವಹಾರಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿ. ಸಂಜೆಯ ವೇಳೆ ಪ್ರೀತಿ ಪಾತ್ರರೊಡನೆ ಕಾಲ ಕಳೆಯುವಿರಿ.
ಕರ್ಕಾಟಕ
ರಾತ್ರಿಯ ಸಮಯದಲ್ಲಿ ಪ್ರಯಾಣ ಮಾಡಿದ ಕಾರಣದಿಂದಾಗಿ ಹಗಲು ಹೊತ್ತಿನಲ್ಲಿ ದೇಹಾಯಾಸ ಉಂಟಾಗಬಹುದು. ವಾದ ಮಾಡುವ ಬದಲು ಕುಟುಂಬದ ನೆಮ್ಮದಿಗಾಗಿ ಪರಸ್ಪರ ಸೋಲನ್ನು ಒಪ್ಪಿಕೊಳ್ಳುವುದು ಉತ್ತಮ.
ಸಿಂಹ
ನಿಮ್ಮ ಮನಸ್ಸಿನ ಭಾವನೆಗಳಿಗೆ ಕಿವಿಗೊಡುವುದು ಇಂದಿನ ಪಾಲಿಗೆ ಬುದ್ಧಿವಂತಿಕೆಯ ನಡೆಯಾಗಲಿದೆ. ಬೇಕರಿ ವ್ಯಾಪಾರಿಗಳಿಗೆ ಸಿಹಿ ಪದಾರ್ಥಗಳ ಮಾರಾಟದಿಂದ ಅಧಿಕ ಲಾಭ. ಗೃಹಿಣಿಯರಿಗೆ ಇಷ್ಟಾರ್ಥಗಳು ಸಿದ್ಧಿಯಾಗುವುದು.
ಕನ್ಯಾ
ಕೌಟುಂಬಿಕ ವಿಷಯಗಳಲ್ಲಿ ಸಹೋದರ ಸಹೋದರಿಯರ ಪ್ರೀತಿ ವಿಶ್ವಾಸದಿಂದ ಖುಷಿ ಸಿಗುವುದು. ಆಸ್ತಿ ಮಾರಾಟಗಳ ವಹಿವಾಟುಗಳಲ್ಲಿ ಎಣಿಕೆಗೂ ಮೀರಿದ ಲಾಭವನ್ನು ಕಾಣುವಿರಿ. ಮನೆಯ ವಿಷಯಗಳ ಕಡೆಗೆ ಹೆಚ್ಚಿನ ಗಮನಹರಿಸಿ.
ತುಲಾ
ನಿಮ್ಮ ಮಕ್ಕಳನ್ನು ಹೊರಗಿನ ಅನಾನುಕೂಲ ಪರಿಸ್ಥಿತಿಗಳಿಂದ ರಕ್ಷಣೆ ಮಾಡಲು ಸರ್ವಪ್ರಯತ್ನಗಳನ್ನು ಮಾಡುವಿರಿ. ನಿಮ್ಮ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಹುಡುಕುವ ಸಲುವಾಗಿ ವಿದ್ವಾಂಸರನ್ನು ಭೇಟಿಯಾಗುವಿರಿ.
ವೃಶ್ಚಿಕ
ಎಣ್ಣೆಯಲ್ಲಿ ಕರಿದ ವಸ್ತುಗಳ ಮಾರಾಟಗಾರರಿಗೆ ವ್ಯವಹಾರ ವಿಸ್ತಾರಕ್ಕೆ ಅವಕಾಶವಿದೆ. ಪುಸ್ತಕ ವ್ಯಾಪಾರಿಗಳಿಗೆ ಅಥವಾ ಪ್ರಕಾಶಕರಿಗೆ ನಿರೀಕ್ಷಿತ ಲಾಭ ದೊರೆಯುವುದು. ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳವಿರಲಿದೆ.
ಧನು
ನಾಟಕ ಹಾಗೂ ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಇಂದು ಯಶಸ್ಸು ಇದ್ದು, ಹೆಚ್ಚಿನ ಪ್ರೋತ್ಸಾಹಗಳು ದೊರೆತು ಸಮಾಜದಲ್ಲಿನ ಉತ್ತಮ ಸ್ಥಾನಮಾನಗಳಿಂದ ಉನ್ನತ ಸ್ಥಿತಿಗೆ ತಲುಪುವಂತಾಗಲಿದೆ.
ಮಕರ
ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಯಾವುದೇ ಕೆಲಸವನ್ನು ಒಪ್ಪಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭಿಸಲಿವೆ. ಸಮಯಕ್ಕೆ ಸರಿಯಾಗಿ ಕಾರ್ಯ ಸಾಧಿಸಲು ಸ್ವಲ್ಪ ಪರಿಶ್ರಮ ವಹಿಸಬೇಕಾಗುವುದು.
ಕುಂಭ
ನಿಮ್ಮ ಸ್ವಂತ ವಿಚಾರವನ್ನು ಮುಚ್ಚಿಟ್ಟ ಪರಿಣಾಮವಾಗಿ ಹಿನ್ನಡೆಯನ್ನು ಅನುಭವಿಸಬೇಕಾಗಲಿದೆ. ಇನ್ನೊಬ್ಬರಿಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮಾಡುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿ ಇರುವುದಿಲ್ಲ.
ಮೀನ
ಎಲ್ಲ ವಿಚಾರದಲ್ಲಿಯೂ ಇತರರ ಅಭಿಪ್ರಾಯವನ್ನು ಕೇಳದೇ ನಿಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಅಭ್ಯಾಸಿಸಿ. ದ್ವಿಚಕ್ರ ವಾಹನಗಳ ಮಾರಾಟಗಾರರು ಇಂದು ಜೋರಿನ ವಹಿವಾಟು ನಡೆಸುವರು.
ADVERTISEMENT
ADVERTISEMENT