‘ಏನ್ ಮುದ್ದಣ್ಣ, ಆಗಿನಿಂದ ಫೋನ್‌ನಲ್ಲಿ ಏನ್ ನೋಡ್ತಿದೀಯ’ ಕೇಳಿದ ವಿಜಿ.

‘ನಮ್ಮ ನಾಯಕರ ಚಾನೆಲ್ ನೋಡ್ತಿದೀನಿ ಸರ್?’

‘ಯಾವ ಚಾನೆಲ್‌ನಲ್ಲಿ ಬರ್ತಿದೆ? ಯುಟ್ಯೂಬ್ ಅಥವಾ ಸೆಟಲೈಟ್ ಚಾನೆಲ್ಲಾ?’

‘ಎರಡೂ ಅಲ್ಲ ಸರ್, ವಾಟ್ಸ್‌ಆ್ಯಪ್ ಚಾನೆಲ್?’

‘ವಾಟ್ಸ್‌ಆ್ಯಪ್ ಚಾನೆಲ್?!’

‘ಹೌದು ಸರ್, ಹೆಚ್ಚಾಗಿ ಸೆಲೆಬ್ರಿಟಿಗಳಿಗಂತಲೇ ಮಾಡಿರೋ ಚಾನೆಲ್ ಇದು. ನಮ್ಮ ನಾಯಕರ ಸಂದೇಶ, ಸಂದರ್ಶನ, ಅವರ ನಗೆ, ಹಗೆ, ನೋವು, ನಲಿವು ಎಲ್ಲ ಇದರಲ್ಲೇ ಬರುತ್ತೆ?’

‘ಸಂದರ್ಶನ ಕೂಡ ಬರುತ್ತಾ? ಯಾರು ರಿಪೋರ್ಟರ್, ಆ್ಯಂಕರ್?’

‘ರಿಪೋರ್ಟರ್, ಆ್ಯಂಕರ್ ಎಲ್ಲ ಇರಲ್ಲ ಸರ್, ಅದು ಒನ್‌ವೇ... ಅವರು ಹೇಳಿದ್ದನ್ನ ಆಲಿಸಬೇಕು, ಆನಂದಿಸಬೇಕು, ಮಾಡಿದ್ದನ್ನು ನೋಡಬೇಕು, ನಲಿಯಬೇಕು ಅಷ್ಟೇ?’

‘ಇಷ್ಟು ದಿನದಿಂದ ಅದನ್ನೇ ಮಾಡ್ಕೊಂಡು ಬರ್ತಿದೀರಲ್ವ, ಅದರಲ್ಲಿ ಹೊಸದೇನಿದೆ?’

‘ಈಗೀಗ ಅವರು ತುಂಬಾ ಪವರ್‌ಫುಲ್ ಸರ್. ವಾರದಲ್ಲೇ ಕೋಟಿ ಜನ ಫಾಲೋವರ್ಸ್ ಆಗಿದ್ದಾರೆ. ಅವರ ಈ ಚಾನೆಲ್ ನೋಡಿದ್ಮೇಲೇನೆ ಅವರೆಷ್ಟು ಪ್ರಭಾವಶಾಲಿ ಅಂತ ಗೊತ್ತಾಗಿದ್ದು?’

‘ಹೌದಾ ಹೇಗೆ?’

‘ಅವರು ಬಲಗೈ ಎತ್ತಿದ ವಿಡಿಯೊನ ಚಾನೆಲ್‌ನಲ್ಲಿ ಹಾಕಿದ್ರೆ ಅವತ್ತು ಜೋರು ಮಳೆ ಬರುತ್ತೆ, ಎಡಗೈ ಎತ್ತಿದ ಫೋಟೊ ಹಾಕಿದ್ರೆ ಉರಿ ಬಿಸಿಲು ಇರುತ್ತೆ’.

‘ಮುಖ ತೋರಿಸಿದ್ರೆ?’

‘ಅಚ್ಛೇ ದಿನ್ ಅಂತ’

‘ನಾನು ಅವರ ಮುಖವನ್ನೇ ನೋಡಿಲ್ವಲ್ಲ, ನಮಗೆಲ್ಲ ಅಚ್ಛೇ ದಿನ್ ಇಲ್ವಾ?’

‘ನಿಮಗೆಲ್ಲ ಅಲ್ಲ ಸರ್, ಯಾರು ಅವರನ್ನ ಆರಾಧಿಸುತ್ತಾರೋ ಅವರಿಗೆ ಮಾತ್ರ ಆ ಸೌಭಾಗ್ಯ?’

‘ನಿಮಗೆ ಮತ್ತೆ ಏನೇನ್ ಸೌಭಾಗ್ಯ ಸಿಗುತ್ತೆ?’

‘ಅವರು ವೋಟ್ ಸಿಂಬಲ್ ಫೋಟೊ ಗ್ರೂಪ್‌ನಲ್ಲಿ ಹಾಕಿದ್ರೆ, ಯಾರ್‍ಯಾರು ಎಲೆಕ್ಷನ್ ಟಿಕೆಟ್ ಕೇಳಿದ್ರೋ ಅವರಿಗೆ ಟಿಕೆಟ್ ಸಿಗುತ್ತೆ ಅಂತ ಅರ್ಥ, ಬಕೆಟ್ ಫೋಟೊ ಹಾಕಿದ್ರೆ, ಟಿಕೆಟ್ ಬೇಕಾದವ್ರು ಇನ್ನೂ ಸ್ವಲ್ಪ ದುಡ್ಡು ಕೊಡಬೇಕು ಅಂತ ಅರ್ಥ?’

‘ಓಹ್, ಹಾಗಾದ್ರೆ ನಿಮ್ ನಾಯಕರು ತುಂಬಾ ಪವರ್‌ಫುಲ್. ಅದ್ ಸರಿ, ನಿಮ್ಮ ಲೀಡರ್ ಕಮ್ ಸೆಲೆಬ್ರಿಟಿ ಹೆಸರೇನು?’

‘ವಿಶ್ವನಾಥ್‌ಜೀ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.