ದಿನ ಭವಿಷ್ಯ: ಏಪ್ರಿಲ್ 4 ಶನಿವಾರ 2026– ಹುಮ್ಮಸ್ಸು ನಷ್ಟಕ್ಕೆ ಕಾರಣವಾಗುತ್ತದೆ
Published 3 ಏಪ್ರಿಲ್ 2026, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಧಾನ್ಯ ಹಾಗೂ ಮಸಾಲೆ ಪದಾರ್ಥಗಳ ಸಗಟು ಹಾಗೂ ರಫ್ತು ವ್ಯಾಪಾರಿಗಳಿಗೆ ಅಧಿಕ ವ್ಯಾಪಾರ ಇರಲಿದೆ. ಕಚೇರಿಯ ಖರ್ಚು-ವೆಚ್ಚಗಳ ವಿಷಯದಲ್ಲಿ ಜಾಗ್ರತೆ ಇರಲಿ.
03 ಏಪ್ರಿಲ್ 2026, 18:31 IST
ವೃಷಭ
ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಲಾಭ ಪಡೆದುಕೊಳ್ಳುವಿರಿ. ಸಂಶೋಧನಾ ಕ್ಷೇತ್ರದಲ್ಲಿನ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ. ಹಣದ ವಿಚಾರದಲ್ಲಿ ಮಿತ ವ್ಯಯಿಗಳಾಗುವಿರಿ.
03 ಏಪ್ರಿಲ್ 2026, 18:31 IST
ಮಿಥುನ
ಮನೆಯಲ್ಲಿ ನಡೆಯಬೇಕಿರುವ ಕಾರ್ಯಕ್ರಮಗಳ ಬಗ್ಗೆ ಒಡಹುಟ್ಟಿದವರೊಡನೆ ಮಾತುಕತೆ ನಡೆಯಲಿದೆ. ಪ್ರೀತಿಯ ವಿಚಾರದಲ್ಲಿ ಗುಣಾತ್ಮಕ ಬೆಳವಣಿಗೆ ಅನುಭವಕ್ಕೆ ಬಂದೀತು. ವಿದೇಶಿ ವಸ್ತುಗಳ ಮೇಲೆ ಹಣ ವ್ಯಯ.
03 ಏಪ್ರಿಲ್ 2026, 18:31 IST
ಕರ್ಕಾಟಕ
ಪಾಲುದಾರಿಕೆ ವ್ಯವಹಾರದಲ್ಲಿ ಬುದ್ಧಿಶಕ್ತಿಯಿಂದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಇದ್ದಲ್ಲಿ ಲಾಭವಾಗುವುದು. ಗಂಟಲು ಬೇನೆ ಕಾಣಿಸಿಕೊಂಡಲ್ಲಿ ಗಿಡಮೂಲಿಕೆಗಳ ಬಳಕೆಯಿಂದ ಶಮನವಾಗುವುದು.
03 ಏಪ್ರಿಲ್ 2026, 18:31 IST
ಸಿಂಹ
ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ಪ್ರತಿಭಾ ಪ್ರದರ್ಶನಕ್ಕೆ ಪೂರ್ವ ತಯಾರಿ ಅನಿವಾರ್ಯ. ಎಲ್ಲವನ್ನು ಸ್ವಂತವಾಗಿಯೇ ಮಾಡಬಲ್ಲೆನೆಂಬ ಹುಮ್ಮಸ್ಸು ನಷ್ಟಕ್ಕೆ ಕಾರಣವಾಗುತ್ತದೆ.
03 ಏಪ್ರಿಲ್ 2026, 18:31 IST
ಕನ್ಯಾ
ಪೂರ್ವ ನಿಯೋಜಿತ ಕೆಲಸ ನೆರವೇರುವುದರಿಂದ ನೆಮ್ಮದಿ ಇರುವುದು. ವಿನಾ ಕಾರಣ ಪರಿಶ್ರಮದಿಂದ ಫಲ ಸಿಗಲಿಲ್ಲವೆಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಪ್ರಯಾಣದಲ್ಲಿ ಎಚ್ಚರಿಕೆಯಿಂದ ಇರಿ.
03 ಏಪ್ರಿಲ್ 2026, 18:31 IST
ತುಲಾ
ದಿನಚರಿಯಲ್ಲಿ ತಪ್ಪುಗಳ ಬಗ್ಗೆ ಮನವರಿಕೆ ಆಗುವುದು. ಮನೆಯಲ್ಲಿ ಆನಂದದ ವಾತಾವರಣ ಇರಲಿದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ಆಘಾತವಾಗಲಿದೆ.
03 ಏಪ್ರಿಲ್ 2026, 18:31 IST
ವೃಶ್ಚಿಕ
ಕಾರ್ಯನಿಮಿತ್ತ ಅತ್ತೆ-ಸೊಸೆಯಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆಯನ್ನು ಇಬ್ಬರೂ ಪರಸ್ಪರವಾಗಿ ಕಾಪಾಡಿಕೊಳ್ಳಿ. ಯಾರಿಗೂ ಸಾಲದ ರೂಪದಲ್ಲಿ ಹಣ ನೀಡಬೇಡಿ.
03 ಏಪ್ರಿಲ್ 2026, 18:31 IST
ಧನು
ತಂದೆಯ ಅನಾರೋಗ್ಯ ಬದಲಾವಣೆಗೆ ಕಾರಣವಾಗುವುದು. ಉದಾರ ಮನೋಭಾವ ಅನುಕೂಲ ಒದಗಿಸಲಿದೆ. ವ್ಯವಹಾರದಲ್ಲಿ ನುರಿತವರ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಿ.
03 ಏಪ್ರಿಲ್ 2026, 18:31 IST
ಮಕರ
ಅಜಾಗರೂಕತೆಯಿಂದ ಹಣ ಕಳೆದುಕೊಳ್ಳುವಂತಾಗಬಹುದು ಎಚ್ಚರವಿರಲಿ. ಸತ್ಕಾರ್ಯದ ಯತ್ನಗಳು ಕೈಗೂಡಲು ತಾಳ್ಮೆ ವಹಿಸಿ. ಮಗನ ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಅತೀವ ಸಂತೋಷ.
03 ಏಪ್ರಿಲ್ 2026, 18:31 IST
ಕುಂಭ
ಅಕ್ಕ-ಪಕ್ಕದಲ್ಲಾಗುವ ಸನ್ನಿವೇಶಗಳು ಪ್ರಾಮಾಣಿಕತೆಗೆ ಅಥವಾ ಸ್ವಾಮಿ ನಿಷ್ಠೆಗೆ ಬೆಲೆ ಇಲ್ಲವೆಂದು ಕಾಣಿಸುವುದು, ಅದರ ಫಲವಾಗಿ ಸ್ವಭಾವವನ್ನು ಬದಲಿಸಿಕೊಳ್ಳಬೇಡಿ. ಸಾಂಸಾರಿಕ ಸುಖದಲ್ಲಿ ಅಭಿವೃದ್ಧಿ ಅಪೇಕ್ಷಿಸಬಹುದು.
03 ಏಪ್ರಿಲ್ 2026, 18:31 IST
ಮೀನ
ಅತಿ ಬುದ್ಧಿವಂತ ಜನರಲ್ಲಿ ವ್ಯವಹಾರ ನಡೆಸಬೇಕಾಗುವುದರಿಂದ ಜಾಗ್ರತೆ ಇರಲಿ. ಗುರಿಯನ್ನು ಸಾಧಿಸುವ ಬಗ್ಗೆ ಮಾತ್ರ ಗಮನವಿರಲಿ. ಮನಸ್ಸಿಗೆ ನೆಮ್ಮದಿ ಉಂಟಾಗುವುದು.
03 ಏಪ್ರಿಲ್ 2026, 18:31 IST