ದಿನ ಭವಿಷ್ಯ: ಏಪ್ರಿಲ್ 5 ಭಾನುವಾರ 2026– ಕಮಿಷನ್ ಏಜೆಂಟ್‌ಗಳಿಗೆ ಇಂದು ಅಧಿಕ ಆದಾಯ
Published 4 ಏಪ್ರಿಲ್ 2026, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿಂದೆ ನಡೆದುಹೋದಂತಹ ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸುವುದು ಉತ್ತಮ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಹಾಸ್ಯ ಕಲಾಕಾರರಿಗೆ ಬೇಡಿಕೆ ಹೆಚ್ಚುವುದು.
04 ಏಪ್ರಿಲ್ 2026, 18:31 IST
ವೃಷಭ
ವಂಶ ಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ ಈಗ ಹೆಚ್ಚಿನ ಏಳಿಗೆ ಇದೆ. ಆದಾಯ ಹಂತಹಂತವಾಗ ಭಿವೃದ್ಧಿದಾಯಕವಾಗಿದ್ದು, ಧನ ಸಂಗ್ರಹಕ್ಕೆ ಸಾಧಕವಾಗಲಿದೆ. ಮಂಗಳ ಕಾರ್ಯಗಳನ್ನು ನಡೆಸಿ ಕೊಡಲು ಒಪ್ಪುವಿರಿ.
04 ಏಪ್ರಿಲ್ 2026, 18:31 IST
ಮಿಥುನ
ಆರಕ್ಷಕರು ಮತ್ತು ರಾಜಕಾರಣಿಗಳು ನಿಮ್ಮಿಂದಲೇ ತಪ್ಪುಗಳು ನಡೆಯುವ ಸಂಭವವು ಹೆಚ್ಚಿರುವುದರಿಂದ ಜಾಗರೂಕತೆ ವಹಿಸಬೇಕಾಗುತ್ತದೆ. ಕಮಿಷನ್ ಏಜೆಂಟ್‌ಗಳಿಗೆ ಇಂದು ಅಧಿಕ ಆದಾಯ.
04 ಏಪ್ರಿಲ್ 2026, 18:31 IST
ಕರ್ಕಾಟಕ
ಸಹೋದರರ ಸಲಹೆಯನ್ನು ಪಡೆದು ನಿಮ್ಮ ಹಳೆಯ ಯೋಜನೆಗಳಿಗೆ ಮರುಜೀವ ಕೊಡಲು ನಿಶ್ಚಯಿಸಬಹುದು. ಕಬ್ಬಿಣ ಅಥವಾ ಗ್ಲಾಸ್‌ಗಳಿಂದ ಗಾಯಗಳಾಗುವ ಲಕ್ಷಣಗಳಿರುವುದರಿಂದ ಜಾಗ್ರತೆ ಇರಲಿ.
04 ಏಪ್ರಿಲ್ 2026, 18:31 IST
ಸಿಂಹ
ಎಲ್ಲ ದಾರಿಗಳೂ ಸುಗಮ ಎನಿಸಿ ಎಲ್ಲ ಕಷ್ಟಗಳೂ ನಿವಾರಣೆಯಾಗಲಿವೆ. ರಾಜಕೀಯದವರಿಗೆ ನಿರೀಕ್ಷಿತ ಕಾರ್ಯ ಸಾಧನೆ ತೃಪ್ತಿ ತರುತ್ತದೆ. ಮಾನಸಿಕ ಸ್ಥಿತಿ ಏರುಪೇರಾದ ಸಮಯದಲ್ಲಿ ಹಿರಿಯರ ಸಲಹೆ ಸಮಾಧಾನ ತರುತ್ತದೆ.
04 ಏಪ್ರಿಲ್ 2026, 18:31 IST
ಕನ್ಯಾ
ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆರಡೂ ತನ್ನ ಇರುವಿಕೆಯನ್ನು ತಿಳಿಸಲಿವೆ. ಸಮಸ್ಯೆ ಹೆಚ್ಚುವುದಕ್ಕೆ ಮುಂಚೆ ಜಾಣ್ಮೆಯಿಂದ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಿ. ಈ ದಿನ ನಿಮ್ಮ ಆರೋಗ್ಯವು ಸುಧಾರಿಸುವುದು.
04 ಏಪ್ರಿಲ್ 2026, 18:31 IST
ತುಲಾ
ವಿವಾಹ ವಿಷಯಗಳಲ್ಲಿ ಮಗಳ ಅಭಿಪ್ರಾಯ ಪಡೆದು ಮುಂದುವರಿಯುವುದು ಉತ್ತಮ. ಭೂ ಸಂಬಂಧದ ವ್ಯವಹಾರದಲ್ಲಿ ನಿಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದಲ್ಲಿ ವ್ಯವಹಾರಗಳು ಕೈಗೂಡಲಿವೆ.
04 ಏಪ್ರಿಲ್ 2026, 18:31 IST
ವೃಶ್ಚಿಕ
ಸ್ನೇಹಿತರಲ್ಲಿ ಅಥವಾ ಸಂಬಂಧಿಕರಲ್ಲಿ ಅವರ ವೈಯಕ್ತಿಕ ವಿಚಾರವನ್ನು ಅನಗತ್ಯವಾಗಿ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ತೆಂಗು ಬೆಳೆಗಾರರಿಗೆ ಉತ್ತಮ ಬೆಳೆಯ ಜೊತೆಗೆ ಹೆಚ್ಚಿನ ಲಾಭವೂ ಇರುವುದು.
04 ಏಪ್ರಿಲ್ 2026, 18:31 IST
ಧನು
ನಿಮ್ಮ ಜವಾಬ್ದಾರಿಯಿಂದ ನಡೆಯುತ್ತಿರುವ ಸಂಘ ಸಂಸ್ಥೆಯ ಸಭೆಯಲ್ಲಿ ಭಿನ್ನಾಭಿಪ್ರಾಯ ಬರಬಹುದು. ಅವರನ್ನು ಸಮಾಧಾನದಿಂದ ಎದುರಿಸುವುದು ನಿಮ್ಮ ಬುದ್ಧಿವಂತಿಕೆಯ ಗುಣ. ರೈತರಿಗೆ ಕೆಲಸ ಕಾರ್ಯಗಳಿಗೆ ತಡೆ ಬರಬಹುದು.
04 ಏಪ್ರಿಲ್ 2026, 18:31 IST
ಮಕರ
ನಿಮ್ಮಿಂದ ನಡೆಯದೇ ಇರುವ ತಪ್ಪುಗಳ ಅಪವಾದವನ್ನು ಹೊರ ಬೇಕಾಗಬಹುದು. ನಿಮ್ಮ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕಾನುಕೂಲ ಉಂಟಾಗುವುದು. ಸಿಹಿ ತಿಂಡಿಗಳ ತಯಾರಕರಿಗೆ ಬೇಡಿಕೆ ಹೆಚ್ಚುವುದು.
04 ಏಪ್ರಿಲ್ 2026, 18:31 IST
ಕುಂಭ
ಗೆಳೆಯನ ಅನಿರೀಕ್ಷಿತ ಆಗಮನ ಸಮಯವನ್ನು ವ್ಯರ್ಥ ಮಾಡಿಸಿದರೂ ಮನಸ್ಸಿಗೆ ಸಂತೋಷ ಉಂಟಾಗುವುದು. ಕೆಲಸವು ವಿಳಂಬವಾಗಿ ನೆರೆವೇರುವುದು. ಸಮಸ್ಯೆಗೆ ಧೈರ್ಯವೇ ಪರಿಹಾರ ಎಂಬುವುದನ್ನು ಮರೆಯದಿರಿ.
04 ಏಪ್ರಿಲ್ 2026, 18:31 IST
ಮೀನ
ಇಂದು ನಿಮ್ಮ ನಿಯಮವನ್ನು ಬದಿಗಿಟ್ಟು ಸಮಯಕ್ಕೆ ಸರಿಯಾಗಿ ವರ್ತಿಸುವ ಅನಿವಾರ್ಯ ಎದುರಾಗುವುದು. ಕಾಲು ನೋವು ಅಥವಾ ಬೆನ್ನು ನೋವು ಕಾಣಿಸಿಕೊಳ್ಳಬಹುದು, ಯೋಗಾಭ್ಯಾಸದಿಂದ ಸರಿಪಡಿಸಿಕೊಳ್ಳಿರಿ.
04 ಏಪ್ರಿಲ್ 2026, 18:31 IST