ದಿನ ಭವಿಷ್ಯ: ಜೂನ್ 20 ಶುಕ್ರವಾರ 2025– ವಿಮಾ ಏಜೆಂಟ್‌ಗಳಿಗೆ ಸಂತಸದ ಸುದ್ದಿ
Published 19 ಜೂನ್ 2025, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಪ್ತ ವಲಯದಲ್ಲಿಟ್ಟ ನಂಬಿಕೆಯು ಸುಳ್ಳಾಗುವ ಸಂದರ್ಭ ಬರಬಹುದು. ಎಚ್ಚರಿಕೆಯಿಂದಿರಿ. ಸೌಂದರ್ಯವರ್ಧಕ ವಸ್ತುಗಳ ತಯಾರಕರಿಗೆ ಮತ್ತು ಮಾರಟಗಾರರಿಗೆ ಲಾಭ ಉಂಟಾಗುತ್ತದೆ.
ವೃಷಭ
ಹೊಸ ವೃತ್ತಿಯಲ್ಲಿ ಓಡಾಟದ ಕೆಲಸವು ದೇಹಕ್ಕೆ ಆಯಾಸ ಉಂಟುಮಾಡುತ್ತದೆ. ಆರಂಭದ ಅಭ್ಯಾಸದ ಹಂತದಲ್ಲಿರುವ ವೈದ್ಯರು ತಪ್ಪುಗಳು ಸಂಭವಿಸದಂತೆ ಜಾಗ್ರತೆವಹಿಸಿ.
ಮಿಥುನ
ಹಳಿ ತಪ್ಪಿದ ಕಾರ್ಯಗಳನ್ನು ಪುನಃ ಸರಿಯಾದ ಮಾರ್ಗಕ್ಕೆ ತರುವ ಪ್ರಯತ್ನ ನಡೆಸಿದರೆ ಶುಭಫಲ ಪ್ರಾಪ್ತಿ. ವಿಶೇಷ ವ್ಯಕ್ತಿಗಳ ಭೇಟಿ ಸಂತೋಷ ತರುವುದಲ್ಲದೆ, ಯೋಜನೆಗಳಿಗೆ ಚೈತನ್ಯ ತುಂಬುವುದು.
ಕರ್ಕಾಟಕ
ಭಾವನಾತ್ಮಕ ಸಂಬಂಧಗಳ ಬೆಳವಣಿಗೆ ಉತ್ತಮವಾಗಿ ಕೂಡಿಬರಲಿದೆ. ವ್ಯವಹಾರದಲ್ಲಿ ಕಾರ್ಮಿಕರೊಂದಿಗೆ ಅನುಸರಣೆ ಅಗತ್ಯ. ವ್ಯಾಪಾರದ ಮೂಲ ವಿಚಾರದಲ್ಲಿ, ವ್ಯವಹಾರದಲ್ಲಿ ಗೌಪ್ಯತೆ ಕಾಪಾಡಿ.
ಸಿಂಹ
ಇಷ್ಟಾರ್ಥಗಳು ಸಿದ್ಧಿಸಲಿವೆ. ಪ್ರಯತ್ನಗಳು ವ್ಯರ್ಥವಾಗದೆ ಸರಿಯಾಗಿ ಫಲಿಸಲು ಮನೆದೇವರ ಹಾಗೂ ಗುರುಹಿರಿಯರ ಆರ್ಶೀವಾದಗಳು ಕಾರಣವಾಗಲಿವೆ. ಸರ್ಕಾರಿ ಹರಾಜಿನಲ್ಲಿ ಲಾಭ ಹೊಂದುವಿರಿ.
ಕನ್ಯಾ
ಆತ್ಮವಿಶ್ವಾಸವೇ ಶ್ರೀರಕ್ಷೆ. ಜನಸಂಪರ್ಕದಿಂದ ಅದೃಷ್ಟ ಹಾಗೂ ಖ್ಯಾತಿ ಇಮ್ಮಡಿಗೊಳ್ಳುವುದು. ಹಣಕಾಸಿನ ವಿಷಯದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲೇ ಮತ್ತೊಮ್ಮೆ ಯೋಚಿಸುವುದು ಸೂಕ್ತ.
ತುಲಾ
ದಿನ ಶ್ರಮ ದಿಂದ ಕೂಡಿದ್ದರೂ ವಿರಾಮ ದೊರೆಯುವುದು. ರಕ್ಷಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಅರ್ಹತೆ ಮತ್ತು ಆಸಕ್ತಿ ಇದ್ದವರಿಗೆ ಆಯ್ಕೆಗೊಳ್ಳುವ ಅವಕಾಶ ಸಿಗಲಿದೆ.
ವೃಶ್ಚಿಕ
ಬಹಳ ಬೇಗ ಗುರಿ ತಲುಪಬೇಕು ಎಂಬ ಹಂಬಲವು ಸೋಲನ್ನು ತಂದೊಡ್ಡಬಹುದು. ಯೋಚಿಸಿ ಸಾವಕಾಶವಾಗಿ ಕಾರ್ಯಮಗ್ನರಾಗಿ. ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ.
ಧನು
ವೃತ್ತಿಯಲ್ಲಿ ಸಾಕಷ್ಟು ಪೈಪೋಟಿ ಎದುರಿಸಬೇಕಾಗಬಹುದು. ಜಯಕ್ಕಾಗಿ ಕಠಿಣ ಪರಿಶ್ರಮ ಅಗತ್ಯ. ಜವಳಿ ವ್ಯಾಪಾರಕ್ಕೆ ಪ್ರಚಾರ ಅಗತ್ಯ. ವಿಮಾ ಏಜೆಂಟ್‌ಗಳಿಗೆ ಸಂತಸದ ಸುದ್ದಿ ಬರುವುದು.
ಮಕರ
ಲಾಭಕ್ಕಾಗಿ ವೃತ್ತಿನಿಷ್ಠೆಯನ್ನು ಬಿಡುವ ತೀರ್ಮಾನ ತೆಗೆದುಕೊಳ್ಳಬೇಡಿ. ಕಲ್ಪನಾಲೋಕದಲ್ಲಿ ವಿಹರಿಸುವುದನ್ನು ಬಿಟ್ಟು ವಾಸ್ತವದ ವಿಚಾರದಲ್ಲಿರಿ. ಈ ದಿನ ಕೈಗಾರಿಕೋದ್ಯಮಿಗಳಿಗೆ ರಫ್ತು ವ್ಯವಹಾರಗಳಿಂದ ಲಾಭ ಬರಲಿದೆ.
ಕುಂಭ
ಒಡಹುಟ್ಟಿದವರ ನೆರವಿನಿಂದ ಸಾಲ ಮರುಪಾವತಿ ಸಾಧ್ಯ. ಕಾರ್ಯಕ್ಕೆ ಇದ್ದ ಆಡಚಣೆಗಳ ಕಾರಣಗಳು ತಿಳಿದುಬರುವುದು. ಸಂಕಲ್ಪಿತ ಕಾರ್ಯ ನಿರ್ಭೀತಿಯಿಂದ ಮುಂದುವರಿಯಲು ಮಹಾಗಣಪತಿಯನ್ನು ಆರಾಧಿಸಿ.
ಮೀನ
ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸು ಲಭಿಸುವುದು. ಕೋರ್ಟು ವ್ಯವಹಾರಗಳು ನಿಮ್ಮದಾಗಲಿವೆ. ತಾನಾಗಿ ಬಂದ ಅವಕಾಶವನ್ನು ಕಳೆದುಕೊಳ್ಳಬೇಡಿ. ಔದ್ಯೋಗಿಕ ಜೀವನದಲ್ಲಿ ಪ್ರಮುಖ ಘಟ್ಟ ಪ್ರವೇಶಿಸುವ ಸಾಧ್ಯತೆ ಇದೆ.