ದಿನ ಭವಿಷ್ಯ: ಮಾರ್ಚ್ 30 ಸೋಮವಾರ 2026– ಇಂದು ಯಾತ್ರೆಯ ಯೋಚನೆ ಬರಲಿದೆ
Published 29 ಮಾರ್ಚ್ 2026, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿಂದಿನಿಂದ ಬಂದ ಕಷ್ಟ ಕಾರ್ಪಣ್ಯಗಳಿಗೆ ಮಾರ್ಗದರ್ಶಕರ ಮೂಲಕ ದಾರಿ ಸಿಗುವುದು ನಿಶ್ಚಿತ. ರಸ ಪದಾರ್ಥಗಳ ವ್ಯಾಪಾರಸ್ಥರಿಗೆ ಅನುಕೂಲಕರ ದಿನ.
29 ಮಾರ್ಚ್ 2026, 18:31 IST
ವೃಷಭ
ಗುತ್ತಿಗೆದಾರರು ಹಣ ಉಳಿಸುವ ಪ್ರಯತ್ನಕ್ಕಿಂತ ಹೆಸರು ಸಂಪಾದಿಸುವ ವಿಷಯಕ್ಕೆ ಗಮನನೀಡಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಸ್ವಭಾವ ಹೊಂದಿದರೆ ನಷ್ಟ ಸಂಭವಿಸಲಿದೆ. ಯಾತ್ರೆಯ ಯೋಚನೆ ಬರಲಿದೆ.
29 ಮಾರ್ಚ್ 2026, 18:31 IST
ಮಿಥುನ
ಸ್ವ ಉದ್ಯೋಗ ಪ್ರಾರಂಭಿಸುವ ಯೋಚನೆಗೆ ನಿಯೋಜಿತ ರೀತಿಯಲ್ಲಿ ತಯಾರಿಯ ಹಂತ ಪ್ರಾರಂಭವಾಗುವುದು. ಉದಯೋನ್ಮುಖ ತಾರೆಯರಿಗೆ ಅವಕಾಶ ಸಿಗಲಿದೆ.
29 ಮಾರ್ಚ್ 2026, 18:31 IST
ಕರ್ಕಾಟಕ
ಅನಿವಾರ್ಯ ಪರಿಸ್ಥಿತಿಗೂ ಯಾರಿಗೂ ಸಾಲ ಕೊಡಬೇಡಿ. ಅವಿವಾಹಿತರಿಗೆ ಸೋದರ ಮಾವನ ಸಹಾಯದಿಂದ ವಿವಾಹ ಸಂಬಂಧಗಳು ಕೂಡಿ ಬರಲಿವೆ.
29 ಮಾರ್ಚ್ 2026, 18:31 IST
ಸಿಂಹ
ತಾಂತ್ರಿಕ ಉದ್ಯೋಗಿಗಳಿಗೆ ವೃತ್ತಿ ತಾತ್ಕಾಲಿಕ ಸಮಾಧಾನವನ್ನು ತಂದರೂ ಬದಲಾವಣೆಗೆ ಅವಕಾಶ ಇರುತ್ತದೆ. ಬಂದ ಅವಕಾಶವನ್ನು ಬಳಸಿಕೊಳ್ಳಿ. ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ.
29 ಮಾರ್ಚ್ 2026, 18:31 IST
ಕನ್ಯಾ
ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕವಾಗಿ ಯೋಚಿಸಿದರೆ ಅಭಿವೃದ್ಧಿಯ ಹಾದಿ ಹಿಡಿಯುವಿರಿ. ಉಪನ್ಯಾಸಕರಿಗೆ, ಸಂಗೀತಗಾರರಿಗೆ ಸನ್ಮಾನದಂತಹ ಗೌರವ ಸಿಗಲಿದೆ.
29 ಮಾರ್ಚ್ 2026, 18:31 IST
ತುಲಾ
ವೈಯಕ್ತಿಕ ಹಾಗೂ ವೃತ್ತಿ ಚಟುವಟಿಕೆಯಲ್ಲಿ ಯಶಸ್ಸು ಸಾಧಿಸಲು ಕೊಂಚ ಶ್ರಮ ವಹಿಸಬೇಕಾದೀತು. ಚಾಲಕ ವೃತ್ತಿಯವರು ಕೆಲಸದಲ್ಲಿ ಒತ್ತಡ ಎದುರಿಸಬೇಕಾಗುವುದು. ಆರೋಗ್ಯ ಉತ್ತಮವಾಗಿರುತ್ತದೆ.
29 ಮಾರ್ಚ್ 2026, 18:31 IST
ವೃಶ್ಚಿಕ
ಸ್ನೇಹಿತರಲ್ಲಿ ಸಂಶಯ, ಅಪನಂಬಿಕೆ ಬಾರದಂತೆ ಮನಸ್ಥಿತಿ ಕಾಪಾಡಿಕೊಳ್ಳಿ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಅಗತ್ಯಗಳನ್ನು ಪೂರೈಸಿ. ಸಿದ್ಧಿವಿನಾಯಕನಿಗೆ ಸೇವೆ ಮಾಡುವುದರಿಂದ ಶುಭ.
29 ಮಾರ್ಚ್ 2026, 18:31 IST
ಧನು
ಮೃದು ಮನಸ್ಸು ವೃತ್ತಿಯಲ್ಲಿ ಹೊಂದಿಕೊಳ್ಳಲು ಉಪಯೋಗವಾಗುವುದು. ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ಬಗ್ಗೆ ಗಮನ ನೀಡಿ. ಆಲಸ್ಯತನವನ್ನು ದೂರಮಾಡಿ.
29 ಮಾರ್ಚ್ 2026, 18:31 IST
ಮಕರ
ಮನೆಯ ವಿಷಯಗಳತ್ತ, ದೈನಂದಿನ ಆಗುಹೋಗುವ ಬಗ್ಗೆ ಹೆಚ್ಚಿನ ಗಮನಹರಿಸ ಬೇಕಾಗುವುದು. ಆತ್ಮೀಯರೊಂದಿಗೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವಿರಿ. ಸಹೋದರರೊಂದಿಗೆ ಕಾಲ ಕಳೆಯುವಿರಿ.
29 ಮಾರ್ಚ್ 2026, 18:31 IST
ಕುಂಭ
ದೇವತಾನುಗ್ರಹದ ಕೊರತೆ, ಮನುಷ್ಯ ಪ್ರಯತ್ನವೂ ಇಲ್ಲದ ಕಾರಣ ಯತ್ನಿಸಿದ ಕಾರ್ಯ ವಿಳಂಬವಾಗುವುದು. ಉದ್ಯೋಗದಲ್ಲಿ ಎದುರಾಗಿದ್ದ ಚಿಂತೆ ದೂರಾಗುವುದು. ಕೆಲಸಕ್ಕೆ ನೇರ ಆಯ್ಕೆಗೊಳ್ಳುವ ಸಂಭವವಿದೆ.
29 ಮಾರ್ಚ್ 2026, 18:31 IST
ಮೀನ
ಮುಂದಾಲೋಚನೆ ಇಲ್ಲದೇ ಭರವಸೆಯನ್ನೂ ನೀಡಬೇಡಿ. ಆಡಿದ ಮಾತನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಸಣ್ಣ-ಪುಟ್ಟ ವಿಚಾರಕ್ಕೂ ನೆರೆಹೊರೆಯವರ ಕಿರಿಕಿರಿ ತಪ್ಪದು.
29 ಮಾರ್ಚ್ 2026, 18:31 IST