ದಿನ ಭವಿಷ್ಯ: ಜೂನ್ 19 ಗುರುವಾರ 2025- ದೂರದ ಪ್ರಯಾಣ ಮಾಡುವ ಸಾಧ್ಯತೆಗಳಿವೆ
Published 18 ಜೂನ್ 2025, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ರಾಜಕೀಯದಲ್ಲಿ ಯಾವುದೇ ರೀತಿಯ ಬದಲಾವಣೆ ಸರಿಯಲ್ಲ. ಗೃಹದಲ್ಲಿ ಶುಭ, ಮಂಗಳ ಕಾರ್ಯಗಳ ಚಟುವಟಿಕೆಗಳು ತೋರಿ ಬರುವವು. ದಿನದ ಖರ್ಚು ವೆಚ್ಚಗಳು ಹೆಚ್ಚಿರಲಿವೆ.
ವೃಷಭ
ಹೆಸರಾಂತ ವ್ಯಕ್ತಿಗಳನ್ನು ಭೇಟಿ ಮಾಡುವ ಅವಶ್ಯಕತೆ ಇದ್ದಲ್ಲಿ ಫಲಿಸುವ ಸಾಧ್ಯತೆಗಳಿವೆ. ಚಿನ್ನ–ಬೆಳ್ಳಿ ಮಾರಾಟಗಾರರಿಗೆ ಹೆಚ್ಚಿನ ಲಾಭ ಇರುತ್ತದೆ. ಲಲಿತಕಲಾ ಕ್ಷೇತ್ರದಲ್ಲಿರುವವರಿಗೆ ಸಾಧನೆಗೆ ಅವಕಾಶವಿದೆ.
ಮಿಥುನ
ಬ್ಯಾಂಕ್ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ಚಾಣಾಕ್ಷತನದಿಂದ ಹೆಗ್ಗಳಿಕೆಗೆ ಪಾತ್ರರಾಗುತ್ತೀರಿ. ಅನಿರೀಕ್ಷಿತ ದೂರದ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ಕರ್ಕಾಟಕ
ಮೇಲಧಿಕಾರಿಗಳೊಂದಿಗೆ ಹೊಸ ಯೋಜನೆ ಕುರಿತು ಗಹನವಾದ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಚರ್ಚೆ ನಿಮಗೆ ಅನುಕೂಲವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರಿಶ್ರಮದಿಂದ ಉತ್ತಮ ಫಲ ಕಾಣುವಿರಿ.
ಸಿಂಹ
ಸರಕು ಸಾಗಾಣೆದಾರರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬಂದರೂ, ಕಾರ್ಯದ ಒತ್ತಡದಿಂದ ವೃತ್ತಿಯಲ್ಲಿ ನಿರಾಶೆಯಾಗುವುದು. ಬೃಹತ್ ವಾಹನವನ್ನು ಖರೀದಿಸುವವರಿಗೆ ಇದು ಸೂಕ್ತ ಸಮಯವವಲ್ಲ.
ಕನ್ಯಾ
ಮನೆಗೆ ಬರುವ ವ್ಯಕ್ತಿಯೊಂದಿಗೆ ನೂತನ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವಿರಿ. ಮಾಡಿದ ಪಾಪದ ಫಲ ಅನುಭವಕ್ಕೆ ಬರಲಿದೆ. ಸರಿ–ತಪ್ಪುಗಳ ಅರಿವಿಲ್ಲದೆ ಪ್ರಶ್ನಿಸಿಕೊಳ್ಳುವ ಸಮಯ ಎದುರಾಗುವುದು.
ತುಲಾ
ಜನರ ಜತೆ ನಗು-ನಗುತ್ತಾ ಬೆರೆಯುವ ವರ್ತನೆಯಿಂದ ಪ್ರೀತಿ ಗಳಿಸುವಿರಿ. ಬೋಧಕರು ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವ ಸಂಭವವಿದೆ.
ವೃಶ್ಚಿಕ
ವೃತ್ತಿಯಲ್ಲಿ ಬೇಜವಾಬ್ದಾರಿತನ ತೋರಿದರೆ ಕೆಲಸಕ್ಕೆ ಪೂರ್ಣವಿರಾಮ ಸಿಗಬಹುದು. ಕೆಲಸದಲ್ಲಿ ಗಮನ ಮತ್ತು ಹೆಚ್ಚಿನ ಜವಾಬ್ದಾರಿ ಇರಲಿ. ಅಪರೂಪದ ತಿಂಡಿ ತಿನಿಸುಗಳು ಪ್ರಾಪ್ತಿಯಾಗಲಿವೆ.
ಧನು
ಸ್ಪಷ್ಟ ನಿರ್ಧಾರವನ್ನು ಮಾಡಿದ ವಿಚಾರವನ್ನು ಪುನಃ ಮತ್ತೊಮ್ಮೆ ಯೋಚಿಸಲು ಅವಕಾಶಗಳು ಒದಗಿಬರುತ್ತವೆ. ಬದಲಾವಣೆಯ ಅವಶ್ಯಕತೆ ಇರುವುದಿಲ್ಲ. ಪಶ್ಚತ್ತಾಪ ಪಡುವಂಥ ತಪ್ಪುಗಳು ನಡೆಯಲಿವೆ.
ಮಕರ
ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಅವಕಾಶಗಳನ್ನು ಉಪಯೋಗಿಸಿಕೊಳ್ಳಿರಿ. ಯಶಸ್ಸಿನ ಹೊಸ ಮಾರ್ಗಗಳ ಅರಿವಾಗುವುದು. ಸ್ವಪ್ರಯತ್ನದೊಂದಿಗೆ ದೈವ ಬಲವೂ ಇರುತ್ತದೆ.
ಕುಂಭ
ನೌಕರಿಯ ಅಥವಾ ಸಂಪಾದನೆಯ ಯೋಚನೆಯನ್ನು ಬಿಟ್ಟು ಉನ್ನತ ಓದಿನೆಡೆಗೆ ಗಮನ ನೀಡುವುದು ಉತ್ತಮ. ಅವಿವಾಹಿತರಿಗೆ ಕಂಕಣ ಬಲದ ಯೋಗವಿದ್ದು ಮಾತುಕತೆಯಿಂದ ದಿನ ನಿಗದಿಯಾಗುವುದು.
ಮೀನ
ವಿದೇಶದಲ್ಲಿ ನೆಲೆಸಿರುವವರಿಗೆ ಸ್ವಸ್ಥಾನದಲ್ಲಿ ಇರುವಂಥ ಪೋಷಕರ ಬಗ್ಗೆ ತಲೆಬಿಸಿಯಾಗುತ್ತದೆ. ಗೃಹ ವಿನ್ಯಾಸಗಾರರಿಗೆ ಹಾಗೂ ಒಳಾಂಗಣ ವಿನ್ಯಾಸಗಾರರಿಗೆ ಅವಕಾಶಗಳು ದೊರೆಯಲಿವೆ.