ದಿನ ಭವಿಷ್ಯ: ಜೂನ್ 21 ಶನಿವಾರ 2025– ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳಲಿದೆ
Published 20 ಜೂನ್ 2025, 18:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಘಟನೆಯಿಂದಾಗಿ ಸಂಸಾರದ ಜವಾಬ್ದಾರಿ ಹೆಚ್ಚಲಿದೆ. ತೆಂಗಿನಕಾಯಿ, ತೆಂಗಿನ ಎಣ್ಣೆ ವ್ಯಾಪಾರಿಗಳು ಲಾಭ ಪಡೆಯಬಹುದು. ಧಾರ್ಮಿಕ ಗ್ರಂಥಗಳ ಅಧ್ಯಯನ ನಡೆಸುವ ಬಗ್ಗೆ ಆಸಕ್ತಿ ಮೂಡುವುದು.
ವೃಷಭ
ಮಾಧ್ಯಮ, ಪತ್ರಿಕಾ ವೃತ್ತಿಯಲ್ಲಿರುವವರಿಗೆ ಹೆಸರು ಹಾಗೂ ಕೀರ್ತಿ ಸಂಪಾದಿಸಲು ವೇದಿಕೆ ಸಿಗುತ್ತದೆ. ಕೆಲಸಕ್ಕೆ ಇನ್ನೊಬ್ಬರನ್ನು ಅವಲಂಬಿಸುವ ನಿಮಗೆ ಮಿತ್ರರೊಂದಿಗೆ ಒಡನಾಟ ಹೆಚ್ಚಲಿದೆ.
ಮಿಥುನ
ಒತ್ತಡ ತರುವ ಕೆಲಸಗಳಿಂದ ದೂರ ಉಳಿದು, ಯೋಜನಾ ಬದ್ಧ ಕೆಲಸ ಹಾಕಿಕೊಳ್ಳಿರಿ. ಪ್ರೀತಿ ವಿಷಯದಲ್ಲಿ ನಿಸ್ಸಂಕೋಚವಾಗಿ ಮಾತನಾಡಿ. ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳಲಿದೆ.
ಕರ್ಕಾಟಕ
ಸಾಂಸಾರಿಕ ವಿಚಾರದಲ್ಲಿ ಬೇರೆಯವರ ಸಲಹೆಗಳನ್ನು ಕಡೆಗಣಿಸುವುದು. ಬೇರೆಯವರ ಕುಟುಂಬದ ಹೋಲಿಕೆಯನ್ನು ನಿಮ್ಮ ಕುಟುಂಬಕ್ಕೆ ತೆಗೆದುಕೊಳ್ಳದೇ ಇರುವುದು ಒಳ್ಳೆಯದು.
ಸಿಂಹ
ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿದೆ. ಹೊಸ ವ್ಯವಹಾರದಲ್ಲಿ ಹಣ ತೊಡಗಿಸುವ ತೀರ್ಮಾನಕ್ಕೆ ಬಂದವರಿಗೆ ಮತ್ತೆ ಈ ದಿನ ಗೊಂದಲ ಉಂಟಾಗಲಿದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಕನ್ಯಾ
ಅತ್ಯಾಪ್ತರಿಗಾಗಿ ಉಡುಗೊರೆ ಕೊಡುವ ಸಲುವಾಗಿ ಹುಡುಕುತ್ತಿರುವ ವಸ್ತುವು ಲಭ್ಯವಾಗುವುದು. ಜಾಹೀರಾತುಗಳ ಮೂಲಕ ವಹಿವಾಟನ್ನುಹೆಚ್ಚಿಸಿಕೊಳ್ಳಲು ಪ್ರಯತ್ನವನ್ನು ಮಾಡಬಹುದು.
ತುಲಾ
ವಿವಾಹದ ಭಾವನೆಗಳನ್ನು ತಂದೆ ತಾಯಿಯ ಬಳಿ ವ್ಯಕ್ತಪಡಿಸಲು ಇದು ಸುಸಮಯ. ಆಭರಣಗಳಿಗಾಗಿ ಹಣ ಖರ್ಚು ಮಾಡುವಿರಿ. ಸಹೋದ್ಯೋಗಿಗಳ ಬೆಂಬಲ ಚೆನ್ನಾಗಿರುತ್ತದೆ.
ವೃಶ್ಚಿಕ
ಕೆಲಸವನ್ನು ಪೂರೈಸಲು ಮಾಡಿದ ಪ್ರಯತ್ನವು ನೀರಿನಲ್ಲಿ ಹೋಮ ಮಾಡಿದಂತೆ ಆಗದಿರಲು ಮುನ್ನೆಚ್ಚರಿಕೆ ವಹಿಸಿ. ವಾರದ ಸಂಪಾದನೆಯು ಮಕ್ಕಳಿಂದ ಒಂದೇ ದಿನದಲ್ಲಿ ನೀರಿನಂತೆ ಖರ್ಚಾಗಬಹುದು.
ಧನು
ಬದುಕಿನ ಗತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ವೃತ್ತಿಯಲ್ಲಿ ಕಾರ್ಯನಿರ್ವಹಣೆ ಮೆಚ್ಚುಗೆಗೆ ಪಾತ್ರವಾಗುವುದು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದೀರಿ.
ಮಕರ
ಆಸ್ತಿ ಪಾಲುದಾರಿಕೆಯಂಥ ಮಹತ್ತರ ಕಾರ್ಯಗಳಲ್ಲಿ ತಾಳ್ಮೆ ವಹಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಜಾಣನಡೆಯಿಂದಾಗಿ ಬಂಧುಮಿತ್ರರಲ್ಲಿ ವೈಮನಸ್ಸು ಉಂಟಾಗುವುದನ್ನು ತಪ್ಪಿಸಬಹುದು.
ಕುಂಭ
ಮನೆ ಬದಲಾವಣೆ ವಿಚಾರಗಳು ಚರ್ಚೆಗೆ ಬಂದು ಹಿರಿಯರ ಮಾತಿನಂತೆಯೇ ನಡೆದರೆ ಉತ್ತಮ. ದುಗುಡಗಳು, ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯಕ್ಕೆ ಕೆಟ್ಟದೃಷ್ಟಿ ತಗುಲಿ ಗೊಂದಲಕ್ಕೆ ಒಳಗಾಗಬಹುದು.
ಮೀನ
ಉನ್ನತ ವಿದ್ಯಾಭ್ಯಾಸ ನಡೆಸಲು ವಿದೇಶಕ್ಕೆ ಹೋಗಬೇಕೆಂದುಕೊಂಡಿರುವವರಿಗೆ ವಿವಿಧ ರೀತಿಯ ಆಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ರೇಷ್ಮೆ ವಸ್ತುಗಳ ಮಾರಾಟದಿಂದ ಲಾಭ ಹೊಂದುವಿರಿ.