ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೆಪ್ಟೆಂಬರ್ 3 ಮಂಗಳವಾರ 2024– ಅಧಿಕ ಆದಾಯ ಎದುರು ನೋಡಬಹುದು
Published 2 ಸೆಪ್ಟೆಂಬರ್ 2024, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಹೊಂದಬೇಕೆಂಬ ಆಸೆ ಹೊಂದಿರುವವರು ಸಣ್ಣ ಕಂಪನಿಗಳಲ್ಲಿ ಉದ್ಯೋಗ ಅನುಭವವನ್ನು ಹೊಂದಿದ ನಂತರ ಅಂಥ ಪ್ರಯತ್ನ ಮಾಡುವುದು ಸೂಕ್ತ.
ವೃಷಭ
ಪ್ರದರ್ಶನ ಮಾರಾಟಗಳಿಂದ ಕುಶಲಕರ್ಮಿಗಳು ಅಧಿಕ ಆದಾಯ ಎದುರು ನೋಡಬಹುದು. ರಾಜರಾಜೇಶ್ವರಿಯನ್ನು ಪ್ರಾರ್ಥಿಸಿ ಅಭೀಷ್ಟಗಳನ್ನು ನೆರವೇರಿಸಿಕೊಳ್ಳಿ.
ಮಿಥುನ
ಮನೆ ಜಾಗದ, ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ವಿಷಯದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರುವುದು. ಅಪರಿಚಿತರ ಹತ್ತಿರ ಯಾವುದೇ ಗೌಪ್ಯತೆ ಹಂಚಿಕೊಳ್ಳಬೇಡಿ.
ಕರ್ಕಾಟಕ
ಕಾರಣಾಂತರದಿಂದ ಸಿಕ್ಕಂಥ ಬಿಡುವಿನ ಸಮಯವನ್ನು ಸದು ಪಯೋಗ ಪಡಿಸಿಕೊಳ್ಳುವಿರಿ. ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ. ಆಲೋಚನೆಯಂತೆ ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆಯಾಗುವುದು.
ಸಿಂಹ
ಬೆಲೆಬಾಳುವ ವಸ್ತುವಿನ ಖರೀದಿಯಿಂದ ತಾಯಿ ಅಥವಾ ಹಿರಿಯರು ಮುನಿಸಿಕೊಳ್ಳುವರು. ದಾಯಾದಿ ಕಲಹಗಳನ್ನು ಬಿಟ್ಟು ರಾಜಿ ಮಾಡಿ ಕೊಳ್ಳುವ ಮನೋಭಾವಕ್ಕೆ ಬಂದಾರು. ಪರ್ವತಾರೋಹಣ ಮಾಡುವ ಸಾಧ್ಯತೆ ಇದೆ.
ಕನ್ಯಾ
ಇದ್ದಕ್ಕಿದ್ದ ಹಾಗೆ ನಿಮ್ಮ ಮೇಲೆ ಪ್ರೀತಿಯನ್ನು ತೋರಿಸಲು ಶುರು ಮಾಡಿದ ನೆಂಟರ ಬುದ್ಧಿಯು ಕಪಟ ಎಂಬುದನ್ನು ಅರಿಯಬೇಕು. ಪ್ರವಾಸದಿಂದ ಅನಿರೀಕ್ಷಿತವಾದ ಲಾಭದ ಅನುಭವ ಉಂಟಾಗುವುದು.
ತುಲಾ
ವೈದ್ಯರಿಗೆ ಬಿಡುವಿಲ್ಲದ ಅಭ್ಯಾಸದ ಜೊತೆಗೆ ಉನ್ನತ ಜವಾಬ್ದಾರಿ ಸ್ಥಾನಕ್ಕೆ ವರ್ಗವಣೆಯಾಗುವುದು. ಜೀವನದ ವಿಶೇಷ ದಿನದ ಪ್ರಯುಕ್ತವಾಗಿ ವೃದ್ಧರ ಸೇವೆ ಮಾಡಿ. ಭೂ ವ್ಯವಹಾರದಲ್ಲಿ ಉತ್ತಮ ಲಾಭವಿದೆ.
ವೃಶ್ಚಿಕ
ಲೇವಾದೇವಿ ವ್ಯವಹಾರ ನಡೆಸುವವರಿಗೆ ನಷ್ಟ ಸಂಭವಿಸಿ ಹಿನ್ನಡೆ ಕಾಣುವಂತಾಗಲಿದೆ. ನಂಬಿಕೆ ಇಟ್ಟು ಮಾಡಿದಂಥ ಉಪಕಾರವನ್ನು ಮರೆಯಬೇಡಿ.
ಧನು
ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವ ಬಗ್ಗೆ ಪತ್ನಿ ಮತ್ತು ಮಕ್ಕ ಳೊಂದಿಗೆ ಚರ್ಚಿಸುವಿರಿ. ರಾಜಕೀಯವಾಗಿ ಪ್ರಬಲಗೊಳ್ಳುವ ಅವಕಾಶಗಳು ಈ ದಿನದಂದು ಹೆಚ್ಚಲಿದೆ. ಧಾರ್ಮಿಕ ಕಾರ್ಯಕ್ಕೆ ಹಣವ್ಯಯವಾಗುವುದು.
ಮಕರ
ಆಶಾವಾದ ಮತ್ತು ಧನಾತ್ಮಕ ವರ್ತನೆ, ಅಭಿವೃದ್ಧಿಯ ಹೆಜ್ಜೆಗಳು ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತವೆ. ರಿಯಾಯಿತಿಯ ವಸ್ತ್ರ ಖರೀದಿಯಿಂದ ಹೆಚ್ಚು ಹಣವನ್ನು ಉಳಿತಾಯ ಮಾಡುವಿರಿ.
ಕುಂಭ
ಆರ್ಥಿಕ ಸ್ಥಿತಿಯಲ್ಲಿ ಯಾವುದೇ ತಾಪತ್ರಯಗಳಿಲ್ಲದೆ ವ್ಯಾಪಾರ ಅಭಿವೃದ್ಧಿಯಾಗಲಿದೆ. ಬಟ್ಟೆ ವ್ಯಾಪಾರಿಗಳು ರಿಯಾಯಿತಿ ಮಾರಾಟಗಳಿಂದ ಹೆಚ್ಚಿನ ಲಾಭವನ್ನು ಹೊಂದುವಿರಿ.
ಮೀನ
ವ್ಯಾಪಾರದ ಬಂಡವಾಳ ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ಮನೆಯ ಬದಿಯ ಜವಾಬ್ದಾರಿಗಳು ಅಣ್ಣನ ಅನಾರೋಗ್ಯದಿಂದ ಹೆಚ್ಚಾ ಗುವುದು. ನೌಕರರಿಗೆ ಆರ್ಥಿಕವಾಗಿ ಅನುಕೂಲವಾಗುವುದು.