ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೆಪ್ಟೆಂಬರ್ 4 ಬುಧವಾರ 2024– ಪ್ರಶಂಸೆ ಮಾತುಗಳನ್ನು ಕೇಳುವಿರಿ
Published 3 ಸೆಪ್ಟೆಂಬರ್ 2024, 18:34 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಣಕಾಸಿನ ವ್ಯಾಮೋಹದಿಂದ ಪಶ್ಚಾತ್ತಾಪಕ್ಕೆ ಕಾರಣವಾಗದಂತೆ ನೋಡಿಕೊಳ್ಳಿ. ಮಗಳಿಗೆ ತಾಯಿಯ ಅಥವಾ ಹತ್ತಿರದ ಸಂಬಂಧಿಕರ ವರ ನಿಶ್ಚಯವಾಗುವುದು. ಅಧಿಕ ಕೊಬ್ಬಿನ ಅಂಶದ ಆಹಾರವನ್ನು ತ್ಯಜಿಸಿ.
ವೃಷಭ
ಆಹಾರದ ಪದ್ಧತಿ ನಿಯಂತ್ರಿಸಿ, ರಕ್ತದೊತ್ತಡ ಸ್ಥಿತಿಯನ್ನು ಸಮತೋಲನಕ್ಕೆ ತರುವ ಪ್ರಯತ್ನ ಮಾಡಬಹುದು . ದೇಹಾಯಾಸ ತೋರಿಬಂದು ತಪ್ಪಾದ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿ ಎದುರಾಗಬಹುದು.
ಮಿಥುನ
ಇಂದಿನ ಪರಿಸ್ಥಿತಿ ಮನದ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಮನೆಯಲ್ಲಿ ಪತ್ನಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ಆಫೀಸಿನ ಜನರ ಬಗ್ಗೆ ಗಮನವಿರಲಿ.
ಕರ್ಕಾಟಕ
ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣ ಇರುವುದು. ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ. ಕೆಲಸಕ್ಕೆ ಅನಿರೀಕ್ಷಿತ ಬದಲಾವಣೆಗಳು ಬರಬಹುದು. ನಟನೆ ಮಾಡುವವರಿಗೆ ಉತ್ತಮ ಅವಕಾಶಗಳಿವೆ.
ಸಿಂಹ
ಪ್ರಭಾವಿ ವ್ಯಕ್ತಿಗಳ ಒಡನಾಟ ಹೆಚ್ಚಿನ ಸ್ಥಾನಮಾನವನ್ನು ಜತೆಯಲ್ಲಿ ಆಯಾಸವನ್ನು ತಂದು ಕೊಡಲಿದೆ. ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ಅಧಿಕಾರಿಗಳಿಂದ ಪ್ರಶಂಸೆ ಮಾತುಗಳನ್ನು ಕೇಳುವಿರಿ.
ಕನ್ಯಾ
ನವದಂಪತಿ ಪರಸ್ಪರ ಬೇಕು ಬೇಡಗಳನ್ನು ಅರಿತು ಬಹಳ ಎಚ್ಚರಿಕೆ ವಹಿಸಿ ಪ್ರತಿ ಹೆಜ್ಜೆಯನ್ನು ಇಡಿ. ದಂಪತಿಗಳಿಗೆ ಸಂತಾನದ ಶುಭ ಸಮಾಚಾರಗಳಿರುವುದು. ಹೊಸ ಸ್ಥಳದಲ್ಲಿ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವಿರಿ.
ತುಲಾ
ಕ್ರೀಡಾಪಟುಗಳು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಅಪೇಕ್ಷಿತ ಜಯ ಹೊಂದುವಿರಿ. ಮನೆಯವರ ಅಥವಾ ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ. ವಾತದ ಬಾಧೆಯು ಉಪಶಮನವಾಗುವುದು.
ವೃಶ್ಚಿಕ
ಅವಿವಾಹಿತರು ಮನೆಯಲ್ಲಿ ತೋರಿಸುವ ಎಲ್ಲಾ ಸಂಬಂಧಗಳಿಗೆ ನಕಾರ ಸೂಚಿಸುವ ಬದಲು ಅಪೇಕ್ಷಿತ ವ್ಯಕ್ತಿಯನ್ನೇ ಮನೆಯವರ ಮುಂದೆ ಪ್ರಸ್ತಾಪಿಸುವುದು ಒಳ್ಳೆಯದು. ಪತಿ ಪತ್ನಿಯರಲ್ಲಿ ಸಾಮರಸ್ಯ ಇರುವುದು.
ಧನು
ಮೇಲಧಿಕಾರಿಯ ಅಪರೂಪದ ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯ ಹಾಗೂ ಸಂತೋಷವೆನಿಸುವುದು. ಅತಿಯಾದ ಪರಿಶ್ರಮದ ದುಡಿಮೆಯು ಜನರ ದೃಷ್ಟಿ ದೋಷಕ್ಕೆ ಗುರಿಯಾಗುವುದು.
ಮಕರ
ಇತರರಿಗೆ ಸಹಾಯ ಮಾಡಲೆಂದು ಹೋದ ನಿಮಗೆ ಸಂಕೋಚದ ಸ್ವಭಾವದಿಂದಾಗಿ ಆರ್ಥಿಕವಾಗಿ ನಷ್ಟವಾಗಬಹುದು. ಬಂಧುಗಳಲ್ಲಿ ಗೌಪ್ಯ ವಿಷಯವನ್ನು ತಿಳಿಸದಿರಿ. ಆಹಾರದಲ್ಲಿ ಅದನ್ನು ಸರಿಪಡಿಸಿಕೊಳ್ಳಿ.
ಕುಂಭ
ಮಧ್ಯದಲ್ಲಿ ನಿಂತ ವಿದ್ಯಾಭ್ಯಾಸವನ್ನು ಮುಂದುವರಿಸುವ ಪ್ರಯತ್ನ ಮಾಡಿದರೆ ಸಫಲರಾಗುವಿರಿ.ವ್ಯವಹಾರದಲ್ಲಿ ಅಡ್ಡಿ ಆತಂಕ ಎದುರಾದರೂ ದುರ್ಗಾದೇವಿಯ ಆರಾಧನೆಯಿಂದ ಸಹಜವಾಗಿ ಮುಂದುವರಿಯುವುದು.
ಮೀನ
ಕುಟುಂಬದ ಮಾತುಕತೆಯಲ್ಲಾಗಲಿ ಅಥವಾ ಆಫೀಸಿನ ಸಭೆಯಲ್ಲಾಗಲಿ ಸಂದರ್ಭಕ್ಕೆ ಸರಿಯಾದಂಥ ಮಾತುಗಳಿಂದ ಸಮಸ್ಯೆ ಪರಿಹರಿಸಿಕೊಳ್ಳುವಿರಿ. ಸಾಮಾಜಿಕ ಬದುಕಿನಲ್ಲಿ ಹುರುಪನ್ನು ಕಾಣಲಿದ್ದೀರಿ. ಅನವಶ್ಯಕ ಚಿಂತೆ ಬೇಡ.