ಭಾನುವಾರ, 8 ಫೆಬ್ರುವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
24/11/2024 - 30/11/2024
ವಾರ ಭವಿಷ್ಯ: ವೃತ್ತಿಯಲ್ಲಿ ಒತ್ತಡಗಳಿದ್ದರೂ ಅದಕ್ಕೆ ತಕ್ಕ ಲಾಭವಿರುತ್ತದೆ
Published 30 ನವೆಂಬರ್ 2024, 18:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಸ್ವಲ್ಪ ಆಲಸ್ಯ ಮೈದುಂಬಿರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯ ಹಂತಕ್ಕೆ ಬರುತ್ತದೆ. ನಡವಳಿಕೆಯಿಂದ ಜನರನ್ನು ಎದುರು ಹಾಕಿಕೊಳ್ಳುವಿರಿ. ಆಸ್ತಿ ವ್ಯವಹಾರ ಮಾಡುವವರಿಗೆ ನಿಗದಿತ ಆದಾಯವಿಲ್ಲದಿದ್ದರೂ, ನಷ್ಟವಿಲ್ಲ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುವುದಿಲ್ಲ. ಹೊಟ್ಟೆಯಲ್ಲಿ ವಾಯು ಪ್ರಕೋಪ ಕಾಡಬಹುದು. ಸಂಗಾತಿಯಿಂದ ಅಲ್ಪ ಮಟ್ಟಿನ ಸಹಕಾರ ಸಿಗುತ್ತದೆ. ವೃತ್ತಿಯಲ್ಲಿ ಒತ್ತಡಗಳಿದ್ದರೂ ಅದಕ್ಕೆ ತಕ್ಕ ಲಾಭವಿರುತ್ತದೆ.
ವೃಷಭ
ಸಮಾಜದಿಂದ ಗೌರವ ಸಿಗುವ ಸಾಧ್ಯತೆಗಳಿವೆ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ಸಂಗಾತಿಗೆ ಆಸ್ತಿ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ಈಗ ಸಾಮಾನ್ಯ ಫಲಿತಾಂಶ ಇರುತ್ತದೆ. ಹಣಕಾಸಿನ ವ್ಯವಹಾರಗಳಿಂದ ನಷ್ಟವಾಗಬಹುದು. ಸಂಗಾತಿಯಿಂದ ಹೆಚ್ಚು ಸಹಾಯ ದೊರೆಯುತ್ತದೆ. ವಿದೇಶಿ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ.
ಮಿಥುನ
ಅಲಂಕಾರಿಕವಾಗಿ ಕಾಣಿಸಿಕೊಳ್ಳಲು ಪ್ರಯತ್ನಪಡುವಿರಿ. ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ. ಮಾತನಾಡುವಾಗ ಎಚ್ಚರಿಕೆ ಇರಲಿ. ಹಿರಿಯರೊಂದಿಗೆ ಜಗಳ ಬೇಡ. ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಸ್ವಲ್ಪಮಟ್ಟಿನ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಕಣ್ಣಿನ ಬಗ್ಗೆ ಹೆಚ್ಚು ಎಚ್ಚರ ವಹಿಸಿ. ಆದಾಯದಷ್ಟೇ ಖರ್ಚು ಇರುತ್ತದೆ. ಕೃಷಿಯಲ್ಲಿ ಸ್ವಲ್ಪ ಅಭಿವೃದ್ಧಿಯನ್ನು ಕಾಣಬಹುದು.
ಕರ್ಕಾಟಕ
ಮನಸ್ಸಿನಲ್ಲಿ ಧೈರ್ಯವಿದ್ದರೂ ಅದನ್ನು ವ್ಯಕ್ತಪಡಿಸಲು ಆಗುವುದಿಲ್ಲ. ಚೆನ್ನಾಗಿ ಮಾತನಾಡಿ ಜನರನ್ನು ಗೆಲ್ಲುವಿರಿ. ಸಂಗಾತಿಯ ಕಿರಿಕಿರಿಯಿಂದ ಸಂತೋಷ ಹಾಳಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಸಂಗಾತಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ಸರ್ಕಾರಿ ಕೆಲಸದಲ್ಲಿರುವವರಿಗೆ ಅಭಿವೃದ್ಧಿ ಇರುತ್ತದೆ.
ಸಿಂಹ
ಸಾಧಿಸುವ ಛಲವಿದ್ದರೂ ಅದನ್ನು ಕಾರ್ಯಗೊಳಿಸುವ ಮನಸ್ಸು ಕಡಿಮೆ ಇರುತ್ತದೆ. ಆದಾಯವು ಮಂದಗತಿಯಲ್ಲಿರುತ್ತದೆ. ಧಾರ್ಮಿಕ ಕಾರ್ಯ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ವಾತ ಸಂಬಂಧಿ ದೋಷಗಳು ನಿಮ್ಮನ್ನು ಕಾಡಬಹುದು. ಸಂಗಾತಿಯಿಂದ ಕೆಲವೊಮ್ಮೆ ಪ್ರತಿರೋಧ ಎದುರಾಗುತ್ತದೆ.
ಕನ್ಯಾ
ಧರ್ಮಶ್ರದ್ಧೆ ಹೆಚ್ಚಾದಂತೆ ತೋರಿಸಿಕೊಳ್ಳುವಿರಿ. ಆದಾಯವು ಸಾಮಾನ್ಯವಾಗಿರುತ್ತದೆ. ನಿಮ್ಮ ಚಟುವಟಿಕೆಗಳಿಂದ ಬಂಧುಗಳ ವಿರೋಧ ಕಟ್ಟಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಈಗ ನಿರೀಕ್ಷಿತ ಫಲಿತಾಂಶವಿರುವುದಿಲ್ಲ. ಸ್ನಾಯು ಸೆಳೆತ ಹೆಚ್ಚಾಗಬಹುದು. ಸಂಗಾತಿಯು ನಿಮ್ಮ ಮಾತುಗಳಿಗೆ ಪ್ರತಿರೋಧ ತೋರಬಹುದು. ವೃತ್ತಿಯಲ್ಲಿ ಕಾರ್ಯ ಒತ್ತಡ ಹೆಚ್ಚಾಗಬಹುದು.
ತುಲಾ
ಬಹಳ ಚುರುಕಾದ ನಡವಳಿಕೆಯನ್ನು ಹೊಂದಿರುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಮಹಿಳೆಯರಿಂದ ಹೆಚ್ಚು ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರೇಯಸ್ಸು ಇರುವುದಿಲ್ಲ. ಕೀಲುನೋವು ಕೆಲವರನ್ನು ಬಾಧಿಸಬಹುದು. ಸಂಗಾತಿಗೆ ಉದ್ಯೋಗ ದೊರೆಯುವ ಸಂದರ್ಭವಿದೆ. ತಾಯಿಯ ವಿರೋಧವನ್ನು ಕಟ್ಟಿಕೊಳ್ಳಬೇಕಾಗಬಹುದು.
ವೃಶ್ಚಿಕ
ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ಶತ್ರುಗಳ ಕಾಟವನ್ನು ಬುದ್ಧಿವಂತಿಕೆಯಿಂದ ತಪ್ಪಿಸಿಕೊಳ್ಳುವಿರಿ. ಹರಿತವಾದ ಆಯುಧಗಳನ್ನು ಉಪಯೋಗಿಸುವವರು ಬಹಳ ಎಚ್ಚರದಿಂದ ಬಳಸಿ. ಸಂಗಾತಿಗೆ ಹಿರಿಯರಿಂದ ಆಸ್ತಿ ದೊರೆಯುತ್ತದೆ. ಅದಿರು ವ್ಯಾಪಾರಿಗಳು ವ್ಯಾಪಾರದಲ್ಲಿ ಏರಿಳಿತವನ್ನು ಕಾಣಬಹುದು. ಯೋಗ ಗುರುಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ.
ಧನು
ಕೆಲವು ವಿಷಯಗಳಲ್ಲಿ ಜ್ಞಾನ ಸಂಪಾದನೆ ಮಾಡುವಿರಿ. ಆದಾಯವು ಕಡಿಮೆ ಇದ್ದರೂ ತೊಂದರೆ ಏನಿಲ್ಲ. ನಿಮ್ಮ ನಡವಳಿಕೆಯಿಂದಲೇ ಶತ್ರುಗಳಿಗೆ ಭಯ ಹುಟ್ಟುವಂತೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಆಹಾರ ವ್ಯತ್ಯಾಸದಿಂದ ಆರೋಗ್ಯ ವ್ಯತ್ಯಾಸವಾಗಬಹುದು. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು.
ಮಕರ
ನಿಮ್ಮ ಶ್ರಮದಿಂದ ಹೆಚ್ಚು ಆದಾಯ ಮಾಡಿಕೊಳ್ಳಲು ಪ್ರಯತ್ನ ಪಡುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಯಶಸ್ಸು ಇರುತ್ತದೆ. ಅಧಿಕ ರಕ್ತದ ಒತ್ತಡವಿರುವವರು ಎಚ್ಚರ ವಹಿಸಿ. ಸಂಗಾತಿ ಕಡೆಯವರಿಂದ ನಿಮಗೆ ಹೆಚ್ಚು ಸಹಕಾರ ದೊರೆಯುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಮಂದಗತಿ ಇದ್ದರೂ ನಷ್ಟವಿರುವುದಿಲ್ಲ. ವೃತ್ತಿಯಲ್ಲಿ ಕೆಲವರ ಸಹಾಯ ದೊರೆಯುತ್ತದೆ.
ಕುಂಭ
ಹಿರಿಯರಲ್ಲಿ ಸಹಜವಾಗಿ ಶಾಂತತೆ ಇರುತ್ತದೆ. ಯುವಕರು ತಮ್ಮ ಮಾತಿನಿಂದಲೇ ಆದಾಯದ ಮೂಲವನ್ನು ಕಳೆದು ಕೊಳ್ಳುವ ಸಾಧ್ಯತೆ ಇದೆ. ದಂತ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಫಲಿತಾಂಶ ನಿರೀಕ್ಷೆಯ ಹತ್ತಿರ ಬರುತ್ತದೆ. ಬೆಂಕಿಯೊಡನೆ ಕೆಲಸ ಮಾಡುವವರು ಎಚ್ಚರದಿಂದ ಮಾಡಿ.
ಮೀನ
ಆದಾಯವು ಕಡಿಮೆ ಇರುತ್ತದೆ. ಹಿರಿಯರ ಸಹಕಾರದಿಂದ ಸ್ವಲ್ಪ ಅನುಕೂಲವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಶೀತಬಾಧೆ ಕೆಲವರನ್ನು ಕಾಡುಬಹುದು. ಕೃಷಿ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.
ADVERTISEMENT
ADVERTISEMENT