ಸೋಮವಾರ, 14 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
04/05/2025 - 10/05/2025
ವಾರ ಭವಿಷ್ಯ: 11-5-2025ರಿಂದ 17-5-2025 ರವರೆಗೆ
Published 10 ಮೇ 2025, 23:31 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನೀವು ಎಲ್ಲರನ್ನೂ ಒಗ್ಗೂಡಿಸಿ ಸಹಕಾರ ಪಡೆಯುವಿರಿ. ಕೃಷಿಯಿಂದ ಸ್ವಲ್ಪ ಆದಾಯವನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ದೇವರ ಕಾರ್ಯಕ್ಕೆ ಹಣ ಖರ್ಚಾಗುವುದು. ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರ ಕಡಿಮೆ ಇರುತ್ತದೆ. ಕೃಷಿಭೂಮಿ ಖರೀದಿ ಅವಕಾಶವಿದೆ. ಹಿರಿಯರ ಒಡವೆ ಅಥವಾ ಹಣ ದೊರೆಯುವ ಸಂದರ್ಭ ಇದೆ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ( ಅಶ್ವಿನಿ ಭರಣಿ ಕೃತಿಕ 1)
ವೃಷಭ
ನಿಮ್ಮ ನಡವಳಿಕೆಯಲ್ಲಿ ಸಾಕಷ್ಟು ಗಂಭೀರತೆ ಇರುತ್ತದೆ. ಆದಾಯವು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಸರ್ಕಾರಿ ವ್ಯವಹಾರಗಳಲ್ಲಿ ಹಿನ್ನಡೆ ಇರುತ್ತದೆ. ಶೀತ ಬಾಧೆ ಕೆಲವರನ್ನು ಕಾಡಬಹುದು. ಸಂಗಾತಿಯ ಜತೆ ಸೇರಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ. ಕೆಲವೊಂದು ವೈಯಕ್ತಿಕ ಚಿಂತೆಗಳು ನಿಮ್ಮನ್ನು ಕಾಡಬಹುದು. ಹಿರಿಯರ ವ್ಯವಹಾರಗಳಲ್ಲಿ ನಿಮಗೆ ಅವಕಾಶ ದೊರೆತು ಲಾಭವಾಗುತ್ತದೆ. ವಿದೇಶಕ್ಕೆ ಆಭರಣಗಳನ್ನು ರಫ್ತು ಮಾಡುವವರಿಗೆ ಲಾಭವಿದೆ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಸರ್ಕಾರಿ ವ್ಯವಹಾರಗಳಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಕೃಷಿಯಿಂದ ಸ್ವಲ್ಪ ಲಾಭವಿರುತ್ತದೆ. ಸರ್ಕಾರಿ ಕಾಮಗಾರಿ ಗುತ್ತಿಗೆ ದೊರೆಯುವ ಸಂದರ್ಭವಿದೆ. ದೇವರ ದರ್ಶನಕ್ಕಾಗಿ ಪ್ರವಾಸ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಿ ಉತ್ತಮ ಫಲಿತಾಂಶ ಪಡೆಯಬಹುದು. ಬಂಧುಗಳ ನಡುವಿನ ವ್ಯವಹಾರ ನಷ್ಟಕ್ಕೆ ಕಾರಣವಾಗಬಹುದು. ಸಂಗಾತಿ ಆದಾಯ ಕಡಿಮೆಯಾಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ವಹಿಸಿಕೊಂಡ ಕೆಲಸಗಳನ್ನು ಮಾಡಲಾಗದೆ ಒದ್ದಾಡುವಿರಿ. ಉದ್ಯೋಗದಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ಹೈನುಗಾರಿಕೆ ಮಾಡುವವರಿಗೆ ಉತ್ತಮ ಲಾಭ ಇರುತ್ತದೆ. ಕ್ರೀಡಾಪಟುಗಳು ಸಿಕ್ಕ ಅವಕಾಶವನ್ನು ಸದುಪಯೋಗ‍ಪಡಿಸಿಕೊಳ್ಳುವರು. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರವಿರುತ್ತದೆ. ಸುಗಂಧ ದ್ರವ್ಯ ವ್ಯಾಪಾರ ಮಾಡುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಆದಾಯವು ಕಡಿಮೆ ಇರುತ್ತದೆ. ಮಹಿಳೆಯರೊಡನೆ ವ್ಯವಹಾರ ಮಾಡದಿರುವುದು ಒಳ್ಳೆಯದು. ಕ್ರೀಡಾಪಟುಗಳಿಗೆ ಅಪೇಕ್ಷಿತ ಸೌಲಭ್ಯಗಳು ದೊರೆಯುವುದಿಲ್ಲ. ವೃತ್ತಿ ಸಂಬಂಧಿತ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಮೂತ್ರ ಸಂಬಂಧಿ ದೋಷಗಳಿರುವವರು ಎಚ್ಚರ ವಹಿಸಿ. ವಿದೇಶಿ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ನಿಮ್ಮ ವ್ಯವಹಾರಗಳಿಗೆ ತಂದೆಯಿಂದ ಆರ್ಥಿಕ ನೆರವು ಸಿಗುತ್ತದೆ. ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ಯಾವುದೇ ಕೆಲಸ ಮಾಡಲು ಉತ್ಸಾಹ ಇರುವುದಿಲ್ಲ. ಆದಾಯವು ಚೆನ್ನಾಗಿರುತ್ತದೆ. ಬಂಧುಗಳಿಂದ ನಿಮಗೆ ಲಾಭ ಇರುತ್ತದೆ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಶತ್ರುಗಳನ್ನು ಎದುರಿಸುವ ಶಕ್ತಿ ನಿಮಗೆ ಒದಗುತ್ತದೆ. ಸಂಗಾತಿಯ ವ್ಯವಹಾರಗಳಲ್ಲಿ ಲಾಭವನ್ನು ಕಾಣಬಹುದು. ಸರ್ಕಾರಿ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿರುವುದಿಲ್ಲ. ಸ್ತ್ರೀಯರ ಸಿದ್ಧ ಉಡುಪುಗಳನ್ನು ತಯಾರಿಸುವವರಿಗೆ ಲಾಭವಿರುತ್ತದೆ. ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ವಾರದ ಆರಂಭ ಆನಂದದಾಯಕವಾಗಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ಆಸ್ತಿ ವ್ಯವಹಾರಗಳಲ್ಲಿ ಮೋಸವಾಗುವ ಸಾಧ್ಯತೆಗಳು ಹೆಚ್ಚಿವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಪಡೆಯುವುದು ಕಷ್ಟವಾಗಬಹುದು. ಹಳೆಯ ಕೆಲವು ರೋಗಗಳು ನಿಮ್ಮನ್ನು ಕಾಡಬಹುದು. ಸಂಗಾತಿಯ ಸಹಾಯದಿಂದ ಸರ್ಕಾರಿ ವ್ಯವಹಾರಗಳಲ್ಲಿ ಲಾಭವನ್ನು ಕಾಣಬಹುದು. ಕೆಲವು ಬರಹಗಾರರಿಗೆ ಅಪವಾದ ಬರುವ ಸಾಧ್ಯತೆಗಳಿವೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ನಿಮ್ಮ ಕೆಲಸಗಳಲ್ಲಿ ಹಿರಿಯರ ಪ್ರಭಾವವನ್ನು ಕಾಣಬಹುದು. ಆದಾಯವು ನಿಮ್ಮ ವೆಚ್ಚವನ್ನು ಸರಿದೂಗಿಸುತ್ತದೆ. ನಿಮ್ಮ ಶತ್ರುಗಳನ್ನು ಈಗ ನೀವು ಮಟ್ಟ ಹಾಕಬಹುದು. ನಿಮ್ಮ ಮಕ್ಕಳಿಂದ ಯಾವುದೇ ರೀತಿಯ ಗೌರವ ದೊರೆಯುವುದಿಲ್ಲ. ತಲೆನೋವಿನ ತೊಂದರೆಗಳಿದ್ದಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ. ಸರ್ಕಾರಿ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿಲ್ಲದಿದ್ದರೂ, ನಷ್ಟವಿಲ್ಲ. ( ವಿಶಾಖಾ 4 ಅನುರಾಧ ಜೇಷ್ಠ)
ಧನು
ಯಾರ ತಂಟೆಗೂ ಹೋಗದೆ ನಿಮ್ಮ ಪಾಡಿಗೆ ನೀವು ಇರುವಿರಿ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಶತ್ರುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮಗಿರುತ್ತದೆ. ಬಂಧುಗಳೊಡನೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ನಷ್ಟಕ್ಕೆ ಕಾರಣವಾಗಬಹುದು. ಸಂಗಾತಿ ಕಡೆಯವರ ಸಹಾಯದಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲತೆ ಇರುತ್ತದೆ. ಕೃಷಿ ಕ್ಷೇತ್ರದಲ್ಲಿ ನಿರೀಕ್ಷೆ ಮಾಡಿದಷ್ಟು ಅಭಿವೃದ್ಧಿ ಇರುವುದಿಲ್ಲ. ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ವೃತ್ತಿಯಲ್ಲಿ ನಿಮ್ಮ ಪ್ರಭಾವವನ್ನು ಹೆಚ್ಚು ಮಾಡಿಕೊಳ್ಳುವಿರಿ. ಆದಾಯವು ಕಡಿಮೆ ಇದ್ದರೂ ಅದರಲ್ಲೇ ನಿರ್ವಹಣೆ ಮಾಡುವಿರಿ. ನಿಮ್ಮ ವಿರುದ್ಧ ಇರುವವರನ್ನು ಗುರುತಿಸುವಲ್ಲಿ ಯಶಸ್ವಿಯಾಗುವಿರಿ. ಈಗ ನಿಮಗೆ ಮಕ್ಕಳಿಂದ ಸೂಕ್ತ ಗೌರವ ಮತ್ತು ಧನ ಸಹಾಯ ದೊರೆಯುತ್ತದೆ. ನರ ದೌರ್ಬಲ್ಯ ಇರುವವರು ಎಚ್ಚರವಹಿಸಿ. ಸಂಗಾತಿಯಿಂದ ಸಂಸಾರಕ್ಕೆ ನಿರೀಕ್ಷಿತ ಧನಸಹಾಯ ಸಿಗುವುದಿಲ್ಲ. ಸರ್ಕಾರಿ ವ್ಯವಹಾರಗಳಲ್ಲಿದ್ದ ಗೊಂದಲಗಳು ನಿವಾರಣೆಯಾಗುತ್ತವೆ. ವೃತ್ತಿಯಲ್ಲಿನ ವೃತ್ತಿನಿಷ್ಠೆ ನಿಮ್ಮನ್ನು ಕಾಯುತ್ತದೆ. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಶ್ರಮಪಟ್ಟು ಕೆಲಸ ಮಾಡಿದಲ್ಲಿ ಆದಾಯ ಬರುತ್ತದೆ. ನಿಮಗೆ ಅನಿರೀಕ್ಷಿತವಾಗಿ ಹಿರಿಯರ ಜತೆ ಸೇರಿ ವ್ಯವಹಾರ ಮಾಡುವ ಅವಕಾಶ ದೊರೆಯುತ್ತದೆ. ಸಂಸಾರದಲ್ಲಿ ಸಂತೋಷ ಹೆಚ್ಚುವ ಸಾಧ್ಯತೆಗಳಿವೆ. ಸರ್ಕಾರಿ ಸಂಸ್ಥೆಗಳಿಗೆ ವಸ್ತುಗಳನ್ನು ಪೂರೈಸುವವರ ಆದಾಯ ಈಗ ಹೆಚ್ಚುತ್ತದೆ. ಮಾಂಸಖಂಡಗಳ ನೋವು ಕೆಲವರನ್ನು ಕಾಡಬಹುದು. ಸಂಗಾತಿಯ ಕಡೆಯವರಿಂದ ನಿಮಗೆ ನಿರೀಕ್ಷೆಗೆ ಮೀರಿದ ಸಹಕಾರ ದೊರೆಯುತ್ತದೆ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ವಿದೇಶಿ ವ್ಯಾಮೋಹ ಬಹಳ ಹೆಚ್ಚಿರುತ್ತದೆ. ಆದಾಯವು ಉತ್ತಮ ಹಂತಕ್ಕೆ ಬರುತ್ತದೆ. ಹಿರಿಯರ ಸಹಕಾರಗಳನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ಕೆಲವೊಂದು ವ್ಯವಹಾರಗಳಿಂದ ಆದಾಯ ವೃದ್ಧಿಸಿಕೊಳ್ಳುವ ಅವಕಾಶಗಳು ದೊರೆಯುತ್ತವೆ. ಕಣ್ಣಿನ ತೊಂದರೆಗಾಗಿ ಹೆಚ್ಚು ಹಣ ಖರ್ಚಾಗಬಹುದು. ಸಂಗಾತಿಯ ಅತಿಯಾದ ಧಾರ್ಮಿಕ ಆಸಕ್ತಿ ನಿಮಗೆ ಬೇಸರ ತರಿಸಬಹುದು. ಕೃಷಿಗಾಗಿ ಖರ್ಚು ಮಾಡಿದ ಹಣ ಲಾಭ ತರುವುದಿಲ್ಲ. ಹಿರಿಯರಿಂದ ಕೃಷಿ ಬಗ್ಗೆ ತಿಳಿವಳಿಕೆಯನ್ನು ಪಡೆಯಬಹುದು. ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ADVERTISEMENT
ADVERTISEMENT