ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯಿಂದ ಹಣಕಾಸಿನ ನೆರವು
Published 21 ಮಾರ್ಚ್ 2026, 22:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ವಾರದ ಆರಂಭದಲ್ಲಿ ಸಂತೋಷ ಕೂಟಗಳಲ್ಲಿ ಭಾಗವಹಿಸುವಿರಿ. ಆದಾಯವು ಕಡಿಮೆ ಇರುತ್ತದೆ. ಖರ್ಚು ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕೆಲಸಗಳಿಗೆ ಹಿರಿಯರ ಸಹಕಾರ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ. ಆಯುರ್ವೇದ ಓದುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ.
21 ಮಾರ್ಚ್ 2026, 22:30 IST
ವೃಷಭ
ಸರ್ಕಾರಿ ಹಣ ಹೂಡಿಕೆಯ ಬಗ್ಗೆ ಸಾಕಷ್ಟು ಆಲೋಚನೆ ಮಾಡುವಿರಿ. ಆದಾಯವು ನಿಮ್ಮ ನಿರೀಕ್ಷೆಯನ್ನು ಮೀರಿ ಇರುತ್ತದೆ. ಸಹೋದರಿಯರಿಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿ ಅತಿ ಆತುರ ಬೇಡ. ಸ್ತ್ರೀರೋಗ ತಜ್ಞರಿಗೆ ಬಹಳ ಬೇಡಿಕೆ ಬರುತ್ತದೆ. ಸಂಗಾತಿಯ ಸಹಾಯದಿಂದ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ವೃತ್ತಿಯಲ್ಲಿ ಈಗ ಏಳಿಗೆ ಇದ್ದರೂ ಹಿತ ಶತ್ರುಗಳಿರುವರು.
21 ಮಾರ್ಚ್ 2026, 22:30 IST
ಮಿಥುನ
ಸಮಾಜದಿಂದ ಗೌರವ ಸಿಗುವ ಸಾಧ್ಯತೆಗಳಿವೆ. ಆದಾಯವು ನಿರೀಕ್ಷೆಯಷ್ಟಿರುತ್ತದೆ. ಆಸ್ತಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ವೃತ್ತಿ ಸಂಬಂಧಿತ ಪರೀಕ್ಷೆಗಳನ್ನು ತೆಗೆದುಕೊಂಡು ಪದೋನ್ನತಿಯನ್ನು ಸಾಧಿಸಬಹುದು. ಶಸ್ತ್ರಚಿಕಿತ್ಸಕರಿಗೆ ಬೇಡಿಕೆ ಹೆಚ್ಚಾಗುವುದು. ಸಂಗಾತಿಯಿಂದ ಆರ್ಥಿಕ ಸಹಕಾರ ಸಿಗುತ್ತದೆ. ಉದ್ಯೋಗದಲ್ಲಿದ್ದ ತೊಂದರೆಗಳು ಸ್ವಲ್ಪ ಮಟ್ಟಿಗೆ ನಿವಾರಣೆಯಾಗುತ್ತವೆ.
21 ಮಾರ್ಚ್ 2026, 22:30 IST
ಕರ್ಕಾಟಕ
ನೀವು ಅಂದುಕೊಂಡ ಕೆಲಸವನ್ನು ಸಾಧಿಸಿ ಸಂತೋಷಪಡುವಿರಿ. ಆದಾಯವು ಕಡಿಮೆ ಇರುತ್ತದೆ. ಧರ್ಮ ಕಾರ್ಯ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಆಭರಣ ಮಾರಾಟಗಾರರಿಗೆ ವ್ಯವಹಾರಗಳಲ್ಲಿ ಏರಿಳಿತ ಇರುವುದಿಲ್ಲ. ಕೃಷಿ ವಿಜ್ಞಾನವನ್ನು ಓದುತ್ತಿರುವವರಿಗೆ ಬಹಳ ಯಶಸ್ಸು ಇರುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಅಷ್ಟು ಅಭಿವೃದ್ಧಿ ಇರುವುದಿಲ್ಲ. ಸಂಗಾತಿಯಿಂದ ವೃತ್ತಿಯಲ್ಲಿ ಸ್ವಲ್ಪ ಅನುಕೂಲವಾಗುತ್ತದೆ.
21 ಮಾರ್ಚ್ 2026, 22:30 IST
ಸಿಂಹ
ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಬಂಧುಗಳ ಜತೆವಿನ ಹಣಕಾಸಿನ ವ್ಯವಹಾರ ನಷ್ಟಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಪಡೆಯುವ ಯೋಗವಿದೆ. ತಲೆನೋವು ಅಥವಾ ಮೂಳೆ ಸಂಬಂಧಿತ ದೋಷಗಳು ಕಾಡುತ್ತವೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಹಿನ್ನಡೆ ಇರುತ್ತದೆ. ತಾಯಿಯಿಂದ ನಿರೀಕ್ಷೆಗೆ ಮೀರಿದ ಸಹಕಾರ ಸಿಗುತ್ತದೆ.
21 ಮಾರ್ಚ್ 2026, 22:30 IST
ಕನ್ಯಾ
ಆದಾಯವು ಕಡಿಮೆ ಇದ್ದು ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ಆಸ್ತಿ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಇರುತ್ತದೆ. ತಳಿ ಸಂಶೋಧಕರಿಗೆ ಬೇಡಿಕೆ ಹೆಚ್ಚುತ್ತದೆ. ವ್ಯವಹಾರಗಳಲ್ಲಿ ಹೆಚ್ಚು ಎಚ್ಚರವಾಗಿರಿ. ನಿಮ್ಮ ಪಾಲಿನ ಲಾಭಗಳನ್ನು ಸರಿಯಾಗಿ ಗಮನಿಸಿ.
21 ಮಾರ್ಚ್ 2026, 22:30 IST
ತುಲಾ
ವಾರದ ಆರಂಭದಲ್ಲೇ ಆರ್ಥಿಕ ಸಂಕಟಗಳನ್ನು ಕಾಣಬಹುದು. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ನಿಮ್ಮ ನಡವಳಿಕೆಯಲ್ಲಿ ಈಗ ನಿಮ್ಮ ಸಂಗಾತಿಯ ಪ್ರಭಾವವನ್ನು ಕಾಣಬಹುದು. ಕೃಷಿಯಿಂದ ಅಪೇಕ್ಷಿತ ಆದಾಯ ದೊರೆಯುವುದಿಲ್ಲ. ವಾಯುಯಾನ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ಬೆಂಕಿಯ ಜೊತೆ ಕೆಲಸ ಮಾಡುವವರು ಎಚ್ಚರದಿಂದಿರಿ. ಕೆಲವರ ಪ್ರೀತಿ ಪ್ರೇಮಗಳು ವಿವಾಹವಾಗಿ ಪರಿವರ್ತನೆಯಾಗುತ್ತವೆ.
21 ಮಾರ್ಚ್ 2026, 22:30 IST
ವೃಶ್ಚಿಕ
ಶತ್ರುಗಳನ್ನು ಎದುರಿಸುವ ಮನೋಬಲ ನಿಮ್ಮಲ್ಲಿ ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಈಗ ಹಿಡಿದ ಕೆಲಸವನ್ನು ಸಾಧಿಸುವ ಇಚ್ಛಾಶಕ್ತಿ ನಿಮ್ಮಲ್ಲಿ ಇರುತ್ತದೆ. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಅನುಕೂಲವಿರುತ್ತದೆ. ಶೀತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ನಿಮ್ಮ ಸಂಗಾತಿಯ ಸಹಕಾರದಿಂದ ವಿದ್ಯಾಭ್ಯಾಸ ಮುಂದುವರಿಸಬಹುದು.
21 ಮಾರ್ಚ್ 2026, 22:30 IST
ಧನು
ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಕೃಷಿ ಭೂಮಿಯನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ಪಡೆಯುವ ಯೋಗವಿದೆ. ಹೆಣ್ಣು ಮಕ್ಕಳಿಗೆ ಯಶಸ್ಸು ಇರುತ್ತದೆ. ಸಂಗಾತಿಯಿಂದ ನಿಮ್ಮ ನಿರೀಕ್ಷೆಗೆ ಮೀರಿದ ಆರ್ಥಿಕ ಸಹಕಾರ ದೊರೆಯುತ್ತದೆ. ತಾಯಿಯಿಂದ ಸಿಗುತ್ತಿದ್ದ ಸಹಕಾರ ಕಡಿಮೆಯಾಗಬಹುದು. ನಾಟಿ ವೈದ್ಯರುಗಳಿಗೆ ಬೇಡಿಕೆ ಹೆಚ್ಚಾಗುವ ಸಂದರ್ಭವಿದೆ.
21 ಮಾರ್ಚ್ 2026, 22:30 IST
ಮಕರ
ನಿಮ್ಮ ಗುರಿಯನ್ನು ತಲುಪಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆದಾಯ ಸ್ವಲ್ಪಮಟ್ಟಿಗೆ ಉತ್ತಮವಾಗುತ್ತದೆ. ಶತ್ರುಗಳನ್ನು ನಿಗ್ರಹ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ಕೃಷಿಯಿಂದ ಆದಾಯವನ್ನು ನಿರೀಕ್ಷೆ ಮಾಡಬಹುದು. ಹಾಲಿನ ಉತ್ಪನ್ನಗಳನ್ನು ಮಾರುವವರ ಆದಾಯ ಹೆಚ್ಚುತ್ತದೆ. ಬಟ್ಟೆ ವ್ಯಾಪಾರಿಗಳಿಗೆ ಲಾಭ ಹೆಚ್ಚುತ್ತದೆ.
21 ಮಾರ್ಚ್ 2026, 22:30 IST
ಕುಂಭ
ಉತ್ತಮ ಗುರಿಯೊಂದಿಗೆ ನೀವು ಮುಂದುವರಿಯುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳು ಈಗ ನಿಮ್ಮಿಂದ ಸಹಾಯ ಪಡೆಯಲು ಮಾತ್ರ ಬರುವರು. ನಿಮ್ಮ ತಾಯಿಯ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಣಬಹುದು. ಬಟ್ಟೆಯ ಮೇಲೆ ಕಸೂತಿ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅಲ್ಪ ಶ್ರಮದಿಂದ ಪೂರ್ಣ ಫಲಿತಾಂಶ ಪಡೆಯುವ ಯೋಗವಿದೆ.
21 ಮಾರ್ಚ್ 2026, 22:30 IST
ಮೀನ
ಎಲ್ಲರೊಂದಿಗೆ ಬಹಳ ಗತ್ತಿನಿಂದ ನಡೆದುಕೊಳ್ಳುವಿರಿ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಮಹಿಳೆಯರಿಂದ ಕೆಲವು ತೊಡಕುಗಳನ್ನು ಎದುರಿಸಬೇಕಾಗಬಹುದು. ನರರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗಬಹುದು. ಸಂಗಾತಿಯ ಸಹಕಾರ ನಿರೀಕ್ಷಿತ ಸಮಯದಲ್ಲಿ ದೊರೆಯುವುದಿಲ್ಲ. ರೇಷ್ಮೆ ಸೀರೆ ನೇಯುವವರಿಗೆ ಅನಿರೀಕ್ಷಿತ ಲಾಭವಿರುತ್ತದೆ.
21 ಮಾರ್ಚ್ 2026, 22:30 IST