ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
15/09/2024 - 21/09/2024
ವಾರ ಭವಿಷ್ಯ: ಈ ರಾಶಿಯ ವಕೀಲರಿಗೆ ಹೆಚ್ಚು ದಾವೆಗಳು ದೊರೆತು ಆದಾಯ ಹೆಚ್ಚುತ್ತದೆ
Published 21 ಸೆಪ್ಟೆಂಬರ್ 2024, 23:45 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಚುರುಕುತನ ನಿಮ್ಮಲ್ಲಿ ಮೈತುಂಬಿರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯನ್ನು ಮೀರಿರುತ್ತದೆ. ಬಂಧುಗಳ ಸಹಕಾರ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತದೆ. ಕೆಲವರಿಗೆ ಕಣ್ಣಿನ ಸೋಂಕು ಉಂಟಾಗುವ ಸಾಧ್ಯತೆಗಳಿವೆ. ಸಂಗಾತಿಯಿಂದ ನಿರೀಕ್ಷಿತ ಸಹಕಾರ ದೊರೆಯುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ ಹಾಗೂ ಕೆಲವರಿಗೆ ಹೊಸ ಸ್ಥಾನಮಾನ ಸಿಗಬಹುದು.
ವೃಷಭ
ಯಾವುದೇ ಸಮಸ್ಯೆಯನ್ನು ಎದುರಿಸುವ ಛಲ ಮತ್ತು ಶಕ್ತಿ ನಿಮ್ಮಲ್ಲಿ ಇರುತ್ತದೆ. ಮಾತಿನಲ್ಲಿ ಒರಟುತನವಿರುತ್ತದೆ. ಬಹಳ ಚುರುಕಾದ ನಡವಳಿಕೆ ಮೈಗೂಡುತ್ತದೆ. ರಿಯಲ್‌ ಎಸ್ಟೇಟ್‌ ವ್ಯವಹಾರಗಳಲ್ಲಿ ಮುಂದುವರೆಯುವಿರಿ. ಧರ್ಮ ವಿದ್ಯೆಯನ್ನು ಕಲಿಯುತ್ತಿರುವವರಿಗೆ ಸಾಕಷ್ಟು ಪ್ರಗತಿ ಇರುತ್ತದೆ. ಮೂತ್ರ ಸಂಬಂಧಿ ದೋಷಗಳು ಕೆಲವರನ್ನು ಬಾಧಿಸಬಹುದು. ಸಂಗಾಗಿ ಆದಾಯ ಹೆಚ್ಚಾಗುವ ಸಂದರ್ಭವಿದೆ.
ಮಿಥುನ
ಸಾಹಸತನ ಪ್ರದರ್ಶನ ಮಾಡಲು ಮುಂದಾಗುವಿರಿ. ಆದಾಯವು ಸ್ವಲ್ಪಕಡಿಮೆ ಇರುತ್ತದೆ. ನಿಮ್ಮ ವ್ಯವಹಾರಿಕ ಬುದ್ಧಿಯಿಂದ ಸಂಪಾದನೆ ಹೆಚ್ಚು ಮಾಡಿಕೊಳ್ಳಲು ಪ್ರಯತ್ನ ಪಡುವಿರಿ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಮೂಳೆಯ ತೊಂದರೆಗಳ ಬಗ್ಗೆ ಎಚ್ಚರವಿರಿ. ಸಂಗಾತಿಯ ವ್ಯವಹಾರಗಳಿಗಾಗಿ ಹೆಚ್ಚು ಹಣ ಕೊಡಬೇಕಾಗುತ್ತದೆ.
ಕರ್ಕಾಟಕ
ಈ ವಾರದಲ್ಲಿ ಒಂದು ರೀತಿ ಸಂತೋಷವಿರುತ್ತದೆ. ನಿಮ್ಮ ವ್ಯವಹಾರಗಳಿಂದ ಮತ್ತು ವಾಕ್ಚಾತುರ್ಯದಿಂದ ಹೆಚ್ಚು ಆದಾಯ ಮಾಡಿಕೊಳ್ಳುವಿರಿ. ಹಿರಿಯರನ್ನು ಓಲೈಸಿಕೊಂಡು ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸುವಿರಿ. ಆಸ್ತಿ ವಿಚಾರದಲ್ಲಿ ಮೇಲುಗೈ ಸಾಧಿಸುವಿರಿ. ಶೀತ ಬಾಧೆ ಮತ್ತು ಶ್ವಾಸಕೋಶದ ತೊಂದರೆಗಳಿರುವವರು ಎಚ್ಚರವಹಿಸಿರಿ. ಸಂಗಾತಿ ನಿಮ್ಮಮಾತಿಗೆ ಸಹಮತ ನೀಡದಿರಬಹುದು.
ಸಿಂಹ
ನಿಮ್ಮ ನಡವಳಿಕೆಯಲ್ಲಿ ಅತಿಯಾದ ವ್ಯಾವಹಾರಿಕತೆ ಇರುತ್ತದೆ. ಆದಾಯದಲ್ಲಿ ಸಲ್ಪ ಸುಧಾರಣೆಯನ್ನು ಕಾಣಬಹುದು. ಸರ್ಕಾರಿ ಸಾಲಗಳು ಸುಲಭವಾಗಿ ಸಿಗುತ್ತವೆ. ಭೂಮಿ ವ್ಯವಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ. ಕಟ್ಟಡ ನಿರ್ಮಾಣಕಾರರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಪಡೆಯುವ ಯೋಗವಿದೆ. ಅಜೀರ್ಣ ನಿಮ್ಮನ್ನು ಕಾಡಬಹುದು.
ಕನ್ಯಾ
ಎಲ್ಲ ವಿಚಾರಗಳಲ್ಲೂ ಸ್ವಂತ ಆಲೋಚನೆ ಮಾಡಲು ಸಿದ್ದರಾಗುವಿರಿ. ಆದಾಯವು ಈಗ ಮಧ್ಯಮ ಗತಿಯಲ್ಲಿರುತ್ತದೆ. ವೃತ್ತಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಭೂಮಿ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭಗಳಿರುವುದಿಲ್ಲ. ವಕೀಲರಿಗೆ ಹೆಚ್ಚು ದಾವೆಗಳು ದೊರೆತು ಆದಾಯ ಹೆಚ್ಚುತ್ತದೆ. ಸಂಗಾತಿಯ ಪ್ರತಿಕೂಲ ನಡವಳಿಕೆಗಳು ನಿಮಗೆ ಕೋಪ ತರಿಸಬಹುದು. ಕೃಷಿಯಿಂದ ಸ್ವಲ್ಪ ಆದಾಯವಿರುತ್ತದೆ.
ತುಲಾ
ಬಹಳ ಅಲಂಕಾರಿಕವಾಗಿ ಕಾಣಿಸಿಕೊಳ್ಳಲು ಪ್ರಯತ್ನ ಪಡುವಿರಿ. ಆದಾಯವು ಚೇತರಿಕೆಯ ಹಾದಿಯಲ್ಲಿರುತ್ತದೆ. ಸಮಾಜದ ಪ್ರಮುಖರು ನಿಮ್ಮ ಕಾರ್ಯ ವೈಖರಿಯ ಬಗ್ಗೆ ಪ್ರಶ್ನೆ ಮಾಡುವರು. ರಾಜಕೀಯ ನಾಯಕರುಗಳಿಗೆ ವಿಚಿತ್ರ ಸನ್ನಿವೇಶ ಒದಗಿ ಲಾಭವಾಗಬಹುದು. ವಿದೇಶಿ ಕಂಪನಿಗಳಿಂದ ಸಾಲ ತೆಗೆದುಕೊಂಡಿರುವವರಿಗೆ ಸಂಕಷ್ಟಗಳು ಎದುರಾಗಬಹುದು.
ವೃಶ್ಚಿಕ
ಕೆಲವೊಂದು ವಿಚಾರಗಳಲ್ಲಿ ನೀವು ಅಸಹಾಯಕರಾಗಿರುವಿರಿ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ರಾಜಕೀಯ ನಾಯಕರಗಳು ತಮ್ಮ ನಡವಳಿಕೆಯಿಂದ ಜನರನ್ನು ಆಕರ್ಷಿಸಲು ಪ್ರಯತ್ನಪಡುವರು. ಕೃಷಿ ಪಂಡಿತರಿಗೆ ಸಾಕಷ್ಟು ಬೆಲೆ ಬರುತ್ತದೆ. ವಿದೇಶಿ ಭಾಷೆಯ ಜೊತೆಗೆ ತಾಂತ್ರಿಕ ವ್ಯಾಸಂಗ ಮಾಡಬೇಕೆಂಬ ಆಶಿಸುತ್ತಿದ್ದವರಿಗೆ ಈಗ ಅವಕಾಶಗಳು ದೊರೆಯುತ್ತದೆ.
ಧನು
ಸಮಸ್ಯೆಗಳನ್ನು ಅವಲೋಕಿಸಿ ಅದರ ಸಾಧಕ ಭಾದಕಗಳನ್ನು ಅರಿತು ಮುನ್ನಡೆಯುವಿರಿ. ಆದಾಯವು ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ. ಶತ್ರುಗಳಲ್ಲಿ ಒಡಕುಹುಟ್ಟಿಸಿ, ಅವರವರೇ ಬಡಿದಾಡಿಕೊಳ್ಳುವಂತೆ ಮಾಡುವಿರಿ. ವಾಹನ ತಯಾರಿಕಾ ಕಂಪನಿಗಳು ಹೊಸ ಶಾಖೆಗಳನ್ನು ತೆರೆಯಬಹುದು. ಹಳೆಯ ಸಾಲಗಳನ್ನು ಈಗ ತೀರಿಸುವ ಸಮಯ ಬರಬಹುದು. ಸಂಗಾತಿಯು ನಿಮಗೆ ಬೆಂಗಾವಲಾಗಿ ನಿಲ್ಲುವರು.
ಮಕರ
ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಆದಾಯವು ಕಡಿಮೆ ಇದ್ದರೂ ಸಹ ಹಣ ನಿರ್ವಹಣೆಯ ಮಾರ್ಗಗಳು ನಿಮಗೆ ತಿಳಿದಿರುತ್ತದೆ. ಬಂಧುಗಳಿಂದ ವಿರೋಧವಿದ್ದರೂ ಅದನ್ನು ಎದುರಿಸಿ ಮುನ್ನಡೆಯುವಿರಿ. ಭೂಮಿಯ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವಿರುವುದಿಲ್ಲ. ವಿದ್ಯಾರ್ಥಿಗಳಿಗೆ ಈಗ ಉತ್ತಮ ಫಲಿತಾಂಶ ಪಡೆಯುವ ಯೋಗವಿರುತ್ತದೆ. ಬಂಧುಗಳ ನಡುವೆ ಹಣದ ವ್ಯವಹಾರ ಬೇಡ.
ಕುಂಭ
ಆದಾಯವು ಕಡಿಮೆ ಇರುತ್ತದೆ. ಮಾತನಾಡುವಾಗ ಎಚ್ಚರವಿರಲಿ. ಆಸ್ತಿ ವ್ಯವಹಾರಗಳನ್ನು ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಓದುತ್ತಿರುವವರಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಸ್ವಲ್ಪ ಕಡಿಮೆಯಾಗಬಹುದು. ಸಂಗಾತಿ ಮಾಡುವ ವ್ಯವಹಾರಗಳಲ್ಲಿ ಲಾಭವಿರುತ್ತದೆ.
ಮೀನ
ಅಸಹನೆಯನ್ನು ಬಿಟ್ಟು ಮುಂದುವರೆಯುವುದು ಬಹಳ ಒಳ್ಳೆಯದು. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಬಯಸಿದ್ದ ಆಸ್ತಿಯನ್ನು ಖರೀದಿಸಲು ಮುಂದಾಗುವಿರಿ. ವಿದ್ಯಾರ್ಥಿಗಳು ನಿರೀಕ್ಷಿತ ಮಟ್ಟದ ಫಲಿತಾಂಶವನ್ನು ಪಡೆಯುವಲ್ಲಿ ಸಫಲರಾಗುವರು. ಚರ್ಮರೋಗ ಕೆಲವರನ್ನು ಬಾಧಿಸಬಹುದು. ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಇರುವುದಿಲ್ಲ. ಸಂಗಾತಿಯಿಂದ ಸಿಗುತ್ತಿದ್ದ ಸಹಕಾರಗಳು ಕಡಿಮೆಯಾಗಬಹುದು.
ADVERTISEMENT
ADVERTISEMENT