ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
29/09/2024 - 05/10/2024
ವಾರ ಭವಿಷ್ಯ: ಈ ರಾಶಿಯ ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ..
Published 29 ಸೆಪ್ಟೆಂಬರ್ 2024, 0:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ದೇಹ ಸೌಷ್ಠವಕ್ಕಾಗಿ ಸಾಕಷ್ಟು ಪ್ರಯತ್ನ ಪಡುವಿರಿ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಇರುತ್ತದೆ. ಬಂಧುಗಳಿಂದ ಸಹಾಯ ಪಡೆಯಲು ಎಲ್ಲ ಮಾರ್ಗಗಳನ್ನು ಬಳಸುವಿರಿ. ಆಸ್ತಿ ವ್ಯವಹಾರ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ ಕಾಣಬಹುದು. ಸರ್ಕಾರಿ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಇರುವುದಿಲ್ಲ. ನಿಮ್ಮ ಸಂಗಾತಿಯಿಂದ ಆರ್ಥಿಕ ಸಹಕಾರವನ್ನು ನಿರೀಕ್ಷೆ ಮಾಡಬಹುದು. ಹಿರಿಯರ ನೆರವಿನಿಂದ ಸರ್ಕಾರದ ಅನುದಾನಗಳು ಸಿಗಲಿವೆ. ವೃತ್ತಿಯಲ್ಲಿ ಏರಿಳಿತ ಇರುವುದಿಲ್ಲ. ಕಬ್ಬಿಣದ ಮಾರಾಟಗಾರರಿಗೆ ಲಾಭವಿರುತ್ತದೆ. ವಿಹಾರ ಕ್ಕಾಗಿ ವಿದೇಶಕ್ಕೆ ಹೋಗಿ ಬರಬಹುದು. ವೃಷಭರಾಶಿ ( ಅಶ್ವಿನಿ ಭರಣಿ ಕೃತಿಕ 1)
ವೃಷಭ
ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ. ಸಮಾಜದಿಂದ ನಿಮಗೆ ಗೌರವ ಸಿಗುವ ಸಾಧ್ಯತೆಗಳಿವೆ. ಕೃಷಿಯಿಂದ ಆದಾಯವಿರುತ್ತದೆ. ಮಾತನಾಡವಾಗ ಭಾಷೆ ಒರಟಾಗುವ ಸಾಧ್ಯತೆ ಇದ್ದು, ಎಚ್ಚರವಹಿಸಿರಿ. ಕುಟುಂಬದ ಹಿರಿಯರಿಂದ ಈಗ ಸಹಕಾರಗಳು ದೊರೆಯುತ್ತವೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸಿಗುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಸಂಗಾತಿ ಕಡೆಯುವರಿಂದ ನಿಮ್ಮ ಕೃಷಿಗೆ ಸಹಕಾರ ಸಿಗುತ್ತದೆ. ಹಿರಿಯರ ಜೊತೆ ವಾಗ್ವಾದಗಳು ಬೇಡ. ವೃತ್ತಿಯಲ್ಲಿ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ. ಅನಿರೀಕ್ಷಿತ ಖರ್ಚುಗಳು ಬಂಧುಗಳಿಂದ ಎದುರಾಗುತ್ತದೆ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಶಕ್ತಿ ಸಾಮರ್ಥ್ಯಗಳ ಬಗ್ಗೆ ಹೆಚ್ಚು ಗಮನ ಹರಿಸುವಿರಿ. ನಿಮ್ಮ ಮಾತುಕತೆ ಮತ್ತು ನಡವಳಿಕೆಯಿಂದ ಹಣ ಸಂಪಾದನೆ ಮಾಡಲು ಅವಕಾಶ ಮಾಡಿಕೊಳ್ಳುವಿರಿ. ಸರ್ಕಾರದ ಜೊತೆ ಆಸ್ತಿ ವ್ಯವಹಾರ ಮಾಡುವವರಿಗೆ ಆದಾಯವಿರುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಿರುತ್ತದೆ, ಹೆಣ್ಣುಮಕ್ಕಳ ಅಭಿವೃದ್ಧಿ ಬಹಳ ಉತ್ತಮವಾಗಿರುತ್ತದೆ. ಬೆಂಕಿಯೊಡನೆ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದಿರಿ. ಬಂಧುಗಳ ನಡುವೆ ಹಣಕಾಸಿನ ವ್ಯವಹಾರ ಖಂಡಿತ ಬೇಡ. ಸಂಗಾತಿ ಸಂತೋಷಕ್ಕಾಗಿ ಹಣ ಖರ್ಚಾಗಬಹುದು. ಕಚೇರಿಯ ಕೆಲಸದ ಮೇಲೆ ವಿದೇಶಕ್ಕೆ ಅಥವಾ ದೂರದ ಊರಿಗೆ ಹೋಗುವ ಯೋಗವಿದೆ. ಕುಟುಂಬಸ್ಥರೊಡನೆ ತೀರ್ಥಯಾತ್ರೆಗೆ ಹೋಗಿ ಬರಬಹುದು. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ವಾರದ ಆರಂಭ ಬಹಳ ಸಂತೋಷದಾಯಕವಾಗಿರುತ್ತದೆ ಹಾಗೂ ಆದಾಯ ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಸಂಗೀತಗಾರರಿಗೆ ಉತ್ತಮ ಅವಕಾಶಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ನಿಮ್ಮ ಒಳ್ಳೆಯ ಕೆಲಸಗಳಿಗೆ ಬಂಧುಗಳು ಮತ್ತು ಸಮಾಜದವರು ಸಹಕಾರ ನೀಡುವರು. ಸ್ಥಿರಾಸ್ತಿಯನ್ನು ಮಾಡಿಕೊಳ್ಳಲು ಈಗ ಉತ್ತಮ ಕಾಲ ಹಾಗೂ ಅದಕ್ಕೆ ಬೇಕಾದ ಧನ ಒದಗುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಸಾಹಸ ಕಲಾವಿದರುಗಳಿಗೆ ಅವಕಾಶಗಳು ಕಡಿಮೆಯಾಗಬಹುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿಯ ಕೆಲವು ನಡವಳಿಕೆಗಳು ನಿಮಗೆ ಹಿಡಿಸದಿರಬಹುದು. ( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ನಿಮ್ಮ ಕೆಲವು ಮನೋಕಾಮನೆಗಳು ಈಡೇರಿ ಸಂತೋಷವಾಗುತ್ತದೆ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸಹೋದರಿಯ ಸಹಕಾರ ಸಿಗುತ್ತದೆ. ಕೃಷಿ ಭೂಮಿಯ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ಕೃಷಿಯಿಂದ ಈಗ ಹೆಚ್ಚು ಆದಾಯವಿರುತ್ತದೆ. ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇರುತ್ತದೆ. ಸಂಗಾತಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಸಂಗಾತಿಯು ಸಂಸಾರಕ್ಕಾಗಿ ಹೆಚ್ಚು ದುಡಿಯುವರು. ಕುಕ್ಕುಟ ಸಾಕಾಣಿಕೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಸೈನಿಕರಿಗೆ ವೃತ್ತಿಯಲ್ಲಿ ಉತ್ತಮ ಸ್ಥಾನ ಸಿಗುವ ಸಾಧ್ಯತೆ ಇದೆ. ದಿನಸಿ ವ್ಯಾಪಾರಿಗಳಿಗೆ ಲಾಭವಿರುತ್ತದೆ. ವಿದೇಶಿ ವ್ಯವಹಾರಗಳಲ್ಲಿ ಹಿನ್ನಡೆ ಇರುತ್ತದೆ. ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ಆತ್ಮವಿಶ್ವಾಸ ಈಗ ಸ್ವಲ್ಪ ಹೆಚ್ಚಾಗುತ್ತದೆ. ಆದಾಯದಲ್ಲೂ ಸಹ ಸ್ವಲ್ಪ ಏರಿಕೆಯಾಗುತ್ತದೆ. ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ಹೆಸರು ಗಳಿಸಬಹುದು. ಕೆಲವು ಬಂಧುಗಳ ಸಹಕಾರ ನಿಮ್ಮ ಕಾರ್ಯಗಳಿಗೆ ದೊರೆಯುತ್ತದೆ. ಸಂಗಾತಿಗೆ ಹಿರಿಯರ ಆಸ್ತಿ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪಲಿತಾಂಶವಿರುವುದಿಲ್ಲ. ಸಂಗಾತಿಯ ಜೀವನಶೈಲಿಯು ನಿಮಗೆ ಒಪ್ಪಿಗೆ ಆಗುವುದಿಲ್ಲ. ಕೃಷಿ ಉಪನ್ಯಾಸಕರಿಗೆ ಹೆಚ್ಚು ಗೌರವ ದೊರೆಯುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲಾಗುವುದಿಲ್ಲ. ಕೃಷಿ ಸಂಶೋಧನೆ ಮಾಡುವವರಿಗೆ ಉತ್ತಮ ಗೌರವವಿರುತ್ತದೆ. ವೃತ್ತಿಯಲ್ಲಿ ಹಿತ ಶತ್ರುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ಬಹಳ ಬುದ್ಧಿವಂತಿರಂತೆ ವರ್ತಿಸಲು ಆರಂಭಿಸುವಿರಿ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಕೆಲವು ಹಿರಿಯರು ಹಾಗೂ ನಿಮ್ಮ ಸಮಾಜದ ಮುಖಂಡರುಗಳು ನೀವು ಮಾಡಿದ ಕೆಲಸ ಕಾರ್ಯಗಳಲ್ಲಿನ ಲೋಪ ದೋಷಗಳನ್ನು ಎತ್ತಿ ತೋರಿಸುವರು. ಸಂಸಾರದಲ್ಲಿ ಸಂತೋಷದಷ್ಟೇ ಕೋಪವೂ ಇರುತ್ತದೆ. ವಿದ್ಯಾರ್ಥಿಗಳಿಗೆ ಫಲಿತಾಂಶದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ಸಂಗಾತಿಯಿಂದ ನಿಮಗೆ ಸ್ವಲ್ಪ ಅನುಕೂಲವಾಗುತ್ತದೆ. ಸಂಗಾತಿ ಕಡೆಯವರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿರುವವರಿಗೆ ಉದ್ಯೋಗ ಸ್ಥಳದಲ್ಲಿ ಹಿತಶತ್ರುಗಳ ಜೊತೆ ಹೊಂದಿಕೊಳ್ಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿಇರುತ್ತದೆ. ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ನಿಮ್ಮ ಶಕ್ತಿ ಸಾಮರ್ಥ್ಯಗಳು ಕಡಿಮೆ ಯಾದಂತೆ ಕಂಡರೂ ಬುದ್ಧಿ ಬಹಳ ಚುರುಕಾಗಿ ಕೆಲಸ ಮಾಡುತ್ತದೆ. ಆದಾಯವು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿದ್ದರೂ ತೊಂದರೆ ಇರುವುದಿಲ್ಲ. ಶತ್ರುಗಳನ್ನು ಹೆಮ್ಮೆಟ್ಟಿಸುವ ನಿಮ್ಮ ಕಲೆಗೆ ಶತ್ರುಗಳೇ ಬೆಚ್ಚುತ್ತಾರೆ. ಕೃಷಿ ಮಾಡಲು ಹೆಚ್ಚು ಉತ್ಸುಕತೆಯನ್ನು ತೋರುವಿರಿ. ವಿದೇಶದಲ್ಲಿ ಓದುವವರಿಗೆ ಹೆಚ್ಚು ಅನುಕೂಲಗಳು ದೊರೆಯುವುದರ ಜೊತೆಗೆ ಸಂಪಾದನೆಗೂ ಅವಕಾಶ ದೊರೆಯುತ್ತದೆ. ಶಸ್ತ್ರಚಿಕಿತ್ಸೆಯಾಗಬೇಕೆಂದಿದ್ದವರಿಗೆ ಔಷಧೋಪಚಾರದಲ್ಲಿ ಗುಣವನ್ನು ಕಾಣಬಹುದು. ಸಂಗಾತಿಯಿಂದ ಧನಸಹಾಯವನ್ನು ನಿರೀಕ್ಷೆ ಮಾಡಬಹುದು. ವಿದೇಶದಲ್ಲಿರುವವರ ಸಹಕಾರದಿಂದ ಅಲ್ಲಿಯೇ ವ್ಯಾಪಾರ ಮಾಡಬಹುದು. ( ವಿಶಾಖಾ 4 ಅನುರಾಧ ಜೇಷ್ಠ)
ಧನು
ಕೆಲವೊಂದು ದೃಢ ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯವಾಗಿರುತ್ತದೆ. ಆದಾಯ ಕಡಿಮೆ ಇರುತ್ತದೆ ಆದರೂ ಯಾವುದೇ ತೊಂದರೆ ಇರುವುದಿಲ್ಲ. ಶತ್ರುಗಳು ನಿಮ್ಮ ತಂಟೆಗೆ ಬರಲು ಭಯಪಡುವರು. ವಿದೇಶದಲ್ಲಿರುವವರು ಅಲ್ಲಿ ಸ್ಥಿರಾಸ್ತಿಯನ್ನು ಮಾಡಿಕೊಳ್ಳಲು ಸೂಕ್ತ ಕಾಲ. ಮಕ್ಕಳ ಅಭಿವೃದ್ಧಿ ಉತ್ತಮವಾಗಿರುತ್ತದೆ. ಹೊಟ್ಟೆಯಲ್ಲಿ ತೊಂದರೆಗಳು ಕಂಡರೂ ಅಂತಹ ವ್ಯತ್ಯಾಸವಿರುವುದಿಲ್ಲ. ಸಂಬಂಧಿಕರ ಸಹಾಯಗಳು ಸರಾಗವಾಗಿ ದೊರೆಯುತ್ತವೆ. ಸಂಗಾತಿ ಯಿಂದ ನಿಮಗೆ ಸೂಕ್ತ ಸಹಕಾರ ಸಿಗುತ್ತದೆ. ಪಾಲುದಾರರ ಸಹಾಯದಿಂದ ಗಣಿಗಾರಿಕೆಯನ್ನು ಮಾಡಬಹುದು. ವಿದೇಶದಲ್ಲಿರುವವರ ಸಹಕಾರದಿಂದ ಅಲ್ಲಿ ವ್ಯಾಪಾರಮಾಡಬಹುದು. ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ಶ್ರಮ ಪಟ್ಟು ಕೆಲಸ ಮಾಡಿ ಶ್ರಮದಿಂದ ಆದಾಯ ಪಡೆಯುವಿರಿ. ಆದಾಯ ಕಡಿಮೆ ಇದ್ದರೂ ಸಹ ಸರಿಯಾಗಿ ನಿಭಾಯಿಸುವಿರಿ. ಬಂಧುಗಳು ನಿಮ್ಮ ವಿರುದ್ಧ ಇದ್ದರೂ ಅವರನ್ನು ಮೀರಿ ನಿಮ್ಮ ಕೆಲಸಗಳನ್ನು ಸಾಧಿಸುವಿರಿ. ಕೃಷಿಯಿಂದ ಉತ್ತಮ ಆದಾಯ ಪಡೆಯುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಇದ್ದೇ ಇರುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಅಭಿವೃದ್ಧಿ ಇರುತ್ತದೆ. ಸಾಹಸ ಕಲಾವಿದರಿಗೆ ಹೆಚ್ಚು ಅವಕಾಶಗಳು ದೊರೆಯುತ್ತದೆ. ನಿಮ್ಮ ತಾಯಿ ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು. ಸಿರಾಸ್ತಿಯ ವ್ಯವಹಾರ ಮಾಡುವವರಿಗೆ ಈಗ ಆದಾಯ ಹೆಚ್ಚುತ್ತದೆ. ಧಾರ್ಮಿಕ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಹಿರಿಯರು ಈ ಹಿಂದೆ ಮಾಡಿದ ಒಳ್ಳೆಯ ಕೆಲಸಗಳಿಗೆ ಉತ್ತಮ ಫಲಿತಾಂಶ ಪಡೆಯುವರು. ಯುವಕರು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು, ಅವರ ಮಾತೆ ಅವರಿಗೆ ಮುಳುವಾಗಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಧರ್ಮ ಕಾರ್ಯ ಮಾಡುವವರಿಗೆ ಸಮಾಜದ ಸಹಾಯಗಳು ಹೆಚ್ಚಾಗಿ ದೊರೆಯುತ್ತವೆ. ಭೂಮಿಯ ವ್ಯವಹಾರ ಮಾಡುವವರಿಗೆ ಲಾಭ ಇರುತ್ತದೆ. ಕ್ರೀಡಾಪಟುಗಳಿಗೆ ಅವರ ಅಪೇಕ್ಷಿತ ಸೌಲಭ್ಯ ಗಳು ದೊರೆಯುತ್ತವೆ. ಕೆಲವು ಕ್ರೀಡಾಪಟುಗ ಳಿಗೆ ಉತ್ತಮ ಸಾಧನೆಯನ್ನು ತೋರುವ ಅವಕಾಶ ದೊರೆಯುತ್ತದೆ. ಸಂಗಾತಿ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ನಿಮ್ಮ ನಿರ್ಧಾರಗಳಲ್ಲೇ ಸಾಕಷ್ಟು ದ್ವಂದ್ವಗಳಿರುತ್ತವೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಗುರು ಹಿರಿಯರನ್ನು ಈಗ ಸಾಕಷ್ಟು ಓಲೈಕೆ ಮಾಡಿ, ಅವರ ಕೃಪೆಗೆ ಪಾತ್ರರಾಗಲು ಪ್ರಯತ್ನ ಪಡುವಿರಿ. ಕೃಷಿಯಿಂದ ಆದಾಯ ಹೆಚ್ಚಿರುತ್ತದೆ. ಭೂಮಿಯ ವ್ಯವಹಾ ಗಳನ್ನು ಮಾಡುವವರಿಗೆ ಮತ್ತು ಭೂಮಿ ಅಭಿವೃದ್ಧಿಪಡಿ ಸುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶದಲ್ಲಿ ವ್ಯತ್ಯಾಸಗಳಾಗಬಹುದು. ಸಂಗಾತಿಯು ನಿಮ್ಮೆಲ್ಲಾ ಕೆಲಸಗಳಿಗೆ ಸಹಕಾರ ನೀಡದಿದ್ದರೂ ಅವರ ಕೃಪೆ ನಿಮ್ಮ ಮೇಲಿರುತ್ತದೆ. ವೃತ್ತಿಯಲ್ಲಿ ಹಿರಿಯರ ಸಹಕಾರ ದೊರೆಯುತ್ತದೆ. ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವವರಿಗೆ ಹಿನ್ನಡೆಯಾಗುತ್ತದೆ. ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ADVERTISEMENT
ADVERTISEMENT