ವಾರ ಭವಿಷ್ಯ | 15-03-2026ರಿಂದ 21-03-2026 ರವರೆಗೆ: ಹಿತಶತ್ರುಗಳ ಕಾಟ ಇರಲಿದೆ
Published 14 ಮಾರ್ಚ್ 2026, 23:42 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಈಗ ಬಹಳ ಆಶಾದಾಯಕರಾಗಿರುವಿರಿ. ಆದಾಯವು ಕಡಿಮೆ ಇರುತ್ತದೆ. ಹಿರಿಯರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಪಶುಸಂಗೋಪನೆ ಮಾಡುವವರಿಗೆ ಬಹಳಷ್ಟು ಅಭಿವೃದ್ಧಿ ಇದೆ. ಕೃಷಿ ಭೂಮಿಯನ್ನು ಮಾರಾಟ ಮಾಡುವವರ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಇರುವುದಿಲ್ಲ. ನರರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂಗಾತಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.
14 ಮಾರ್ಚ್ 2026, 23:42 IST
ವೃಷಭ
ವ್ಯವಹಾರದ ಬುದ್ಧಿ ಜಾಗೃತವಾಗಿ ಲಾಭ ಮಾಡುವ ಕಡೆಗೆ ಹೆಚ್ಚು ಗಮನ ಕೊಡುವಿರಿ. ಆದಾಯವು ನಿಮ್ಮ ನಿರೀಕ್ಷೆಗೆ ಮೀರಿ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಅನುಕೂಲ ಇರುತ್ತದೆ. ನೇತ್ರದೋಷ ಇರುವವರು ಎಚ್ಚರಿಕೆ ವಹಿಸಿ. ಪರಿಚಿತರಿಂದ ವೃತ್ತಿಯಲ್ಲಿ ಅಭಿವೃದ್ಧಿ ಆಗುತ್ತದೆ. ಸಂಗಾತಿಯ ಜೊತೆ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಸರ್ಕಾರಿ ಕೆಲಸಗಳಿಂದ ಲಾಭವಿದೆ.
14 ಮಾರ್ಚ್ 2026, 23:42 IST
ಮಿಥುನ
ನೀವು ಬಯಸದೇ ಸಾಮಾಜಿಕ ಗೌರವಗಳು ಒದಗಿ ಬರುತ್ತವೆ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಬಂಧುಗಳು ಧಾರ್ಮಿಕ ಕೆಲಸಗಳಿಗೆ ಮಾತ್ರ ಸಹಕಾರ ನೀಡುವರು. ಹಿರಿಯರ ಸಹಾಯದಿಂದ ಆಸ್ತಿ ಕೊಳ್ಳಬಹುದು. ವೃತ್ತಿ ಸಂಬಂಧಿತ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯುತ್ತದೆ. ಸಂಗಾತಿಯಿಂದ ಆರ್ಥಿಕ ಸಹಕಾರ ನಿರೀಕ್ಷೆ ಮಾಡಬಹುದು. ತಾಯಿಯ ಜತೆ ಮುಸುಕಿನ ಗುದ್ದಾಟವಿರುತ್ತದೆ. ಹೈನುಗಾರಿಕೆ ಮಾಡುವವರಿಗೆ ಸ್ವಲ್ಪಹಿನ್ನಡೆ ಇರುತ್ತದೆ.
14 ಮಾರ್ಚ್ 2026, 23:42 IST
ಕರ್ಕಾಟಕ
ವಾರದ ಆರಂಭದಲ್ಲಿ ಬಹಳ ಸಂತೋಷವಿರುತ್ತದೆ. ಆದಾಯವು ಬಹಳ ಕಡಿಮೆ ಇರುತ್ತದೆ. ಕೃಷಿ ವಿಜ್ಞಾನವನ್ನು ಓದುತ್ತಿರುವವರಿಗೆ ಅಭಿವೃದ್ಧಿ ಇದೆ. ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ. ಪ್ರೀತಿ, ಪ್ರೇಮಗಳು ಸಫಲವಾಗುತ್ತವೆ. ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುವ ಸಂದರ್ಭವಿದೆ. ಕೆಲವರಿಗೆ ಹಿರಿಯರ ಆಭರಣಗಳು ದೊರೆಯಬಹುದು. ವೃತ್ತಿ ಸ್ಥಳದಲ್ಲಿ ಹಿತಶತ್ರುಗಳ ಕಾಟ ಇರುತ್ತದೆ.
14 ಮಾರ್ಚ್ 2026, 23:42 IST
ಸಿಂಹ
ಆದಾಯವೂ ತಕ್ಕ ಮಟ್ಟಿಗೆ ಇದ್ದು, ಖರ್ಚುಗಳನ್ನು ಕಡಿಮೆಮಾಡಿಕೊಳ್ಳಬೇಕು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಶೀತ ಸಂಬಂಧಿ ದೋಷಗಳು ಅಥವಾ ಮೂಳೆ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿ ಕಡೆಯವರಿಂದ ನಿಮಗೆ ಹೆಚ್ಚು ಅನುಕೂಲಗಳಾಗುತ್ತವೆ.
14 ಮಾರ್ಚ್ 2026, 23:42 IST
ಕನ್ಯಾ
ವಾರದ ಆರಂಭದಲ್ಲೇ ಸಾಲದ ಚಿಂತೆ ಕಾಡುತ್ತದೆ. ಸಂಗಾತಿಯ ಕಡೆಯಿಂದ ಸ್ವಲ್ಪ ಆರ್ಥಿಕ ಸಹಕಾರವನ್ನು ನಿರೀಕ್ಷೆ ಮಾಡಬಹುದು. ಕಸೂತಿ ಮಾಡುವವರ ಆದಾಯ ಹೆಚ್ಚುತ್ತದೆ. ನಿಮ್ಮ ನಡವಳಿಕೆಯಿಂದ ಬಂಧುಗಳ ವಿರೋಧವನ್ನು ಕಟ್ಟಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವನ್ನು ಪಡೆಯುವ ಯೋಗವಿದೆ. ಮೂಳೆ ಸಂಬಂಧಿತ ದೋಷಗಳು ನಿಮ್ಮನ್ನು ಕಾಡಬಹುದು. ವೃತ್ತಿಯಲ್ಲಿ ಅನುಕೂಲಗಳು ಹೆಚ್ಚುತ್ತವೆ.
14 ಮಾರ್ಚ್ 2026, 23:42 IST
ತುಲಾ
ಆದಾಯವು ಕಡಿಮೆ ಇರುತ್ತದೆ. ಹಿರಿಯರ ಸಹಕಾರ ಸ್ವಲ್ಪಮಟ್ಟಿಗೆ ದೊರೆಯುತ್ತದೆ. ಹೈನುಗಾರಿಕೆ ಮಾಡುವವರ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು ಇರುತ್ತದೆ. ಲೇವಾದೇವಿ ಮಾಡುವವರ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತದೆ. ಸಂಗಾತಿ ಮಾಡುವ ಕೃಷಿಯಲ್ಲಿ ಹೆಚ್ಚು ಲಾಭವಿರುತ್ತದೆ. ಸಂಗಾತಿಯ ಮಾತುಗಳು ಬೇಸರ ತರಿಸಬಹುದು. ಸ್ತ್ರೀಯರು ಮಾಡು ವವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಇರುವುದಿಲ್ಲ.
14 ಮಾರ್ಚ್ 2026, 23:42 IST
ವೃಶ್ಚಿಕ
ಧೈರ್ಯವಾಗಿ ಮುನ್ನುಗ್ಗುವಿರಿ. ಯಾವುದೇ ಕೆಲಸ ಮಾಡಲು ಉತ್ಸಾಹವಿರುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಪ್ರಮಾಣದ ಯಶಸ್ಸು ಇರುತ್ತದೆ. ಮಹಿಳೆಯರಿಗೆ ಕೊಟ್ಟಿದ್ದ ಸಾಲ ವಾಪಸು ಬರಬಹುದು. ಸಂಗಾತಿಯು ಸರ್ಕಾರದ ಜೊತೆ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಶಾಲಾ-ಕಾಲೇಜು ನಡೆಸುವವರಿಗೆ ಸ್ವಲ್ಪ ಅಡ್ಡಿ ಆತಂಕಗಳು ಬರಬಹುದು. ಹರಕೆಗಳನ್ನು ತೀರಿಸಲು ಮುಂದಾಗುವಿರಿ.
14 ಮಾರ್ಚ್ 2026, 23:42 IST
ಧನು
ಮನಸ್ಸಿನಲ್ಲಿ ಹೊಸ ಉತ್ಸಾಹ ಮೂಡುತ್ತದೆ. ಆದಾಯವು ನಿರೀಕ್ಷೆಯ ಹಂತಕ್ಕೆ ತಲುಪುತ್ತದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ಗಣಿತ ತಜ್ಞರಿಗೆ ಹೆಚ್ಚಿನ ಅವಕಾಶಗಳು ದೊರೆತು ಆದಾಯ ಹೆಚ್ಚುತ್ತದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಈಗ ನಿಮ್ಮ ಸಂಗಾತಿಯಿಂದ ಹೆಚ್ಚಿನ ಆರ್ಥಿಕ ಸಹಕಾರ ಸಿಗುತ್ತದೆ. ಪಶುಸಂಗೋಪನೆ ಮಾಡುವವರ ಆದಾಯ ಹೆಚ್ಚುತ್ತದೆ.
14 ಮಾರ್ಚ್ 2026, 23:42 IST
ಮಕರ
ಮನಸಿನಲ್ಲಿ ಏನೋ ಸಾಧಿಸಿದ ಆನಂದವಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಕೃಷಿಯಿಂದ ಆದಾಯವನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳ ಶ್ರದ್ಧೆಯಿಂದ ಉತ್ತಮ ಫಲಿತಾಂಶ ಲಭಿಸಬಹುದು. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡುತ್ತವೆ. ಸಂಗಾತಿಯ ನೈತಿಕ ಸಹಕಾರ ನಿಮಗೆ ಬಲ ಕೊಡುತ್ತದೆ. ಧರ್ಮ ಕಾರ್ಯ ಮಾಡುವವರಿಗೆ ಅನಿರೀಕ್ಷಿತವಾಗಿ ಆರ್ಥಿಕ ಸಹಕಾರ ಸಿಗುತ್ತದೆ. ವೃತ್ತಿಯ ಸ್ಥಳದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
14 ಮಾರ್ಚ್ 2026, 23:42 IST
ಕುಂಭ
ಯುವಕರಲ್ಲಿ ದ್ವಂದ್ವ ನಿರ್ಧಾರಗಳು ಇರುತ್ತವೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಕುಟುಂಬದಲ್ಲಿ ಸಂತೋಷವಿರುತ್ತದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಫಲಿತಾಂಶವನ್ನು ಪಡೆಯುವ ಯೋಗವಿದೆ. ಶೀತ ಬಾಧೆ ಕೆಲವರನ್ನು ಕಾಡುತ್ತದೆ. ಸಂಗಾತಿಯ ಧಾರ್ಮಿಕ ಕಾರ್ಯಗಳು ಬಲವನ್ನು ಕೊಡುತ್ತವೆ. ಗಣಿಗಾರಿಕೆ ಮಾಡುವವರ ವ್ಯವಹಾರದಲ್ಲಿ ಲಾಭ ಹೆಚ್ಚುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಲಾಭ ನಿರೀಕ್ಷೆಗೆ ಮೀರಿರುತ್ತದೆ.
14 ಮಾರ್ಚ್ 2026, 23:42 IST
ಮೀನ
ನಿಮ್ಮ ನಿರ್ಧಾರಗಳು ಅತ್ಯಂತ ಜಟಿಲ ಮತ್ತು ದ್ವಂದ್ವದಿಂದ ಕೂಡಿರುತ್ತವೆ. ಆದಾಯವು ಕಡಿಮೆ ಇರುತ್ತದೆ. ನಿಮಗೆ ಹಿರಿಯ ಮಹಿಳೆಯರ ಸಹಕಾರ ದೊರೆಯುತ್ತದೆ. ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ವಿವಾದಗಳಾಗಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಫಲಿತಾಂಶ ಪಡೆಯುವ ಯೋಗವಿದೆ. ಕೆಲವರಿಗೆ ಉದರ ಸಂಬಂಧಿ ದೋಷಗಳು ಅಥವಾ ಹೊಟ್ಟೆಯಲ್ಲಿ ಗಡ್ಡೆಗಳು ಕಾಣಿಸಬಹುದು. ಸಂಗಾತಿಯಿಂದ ನಿರೀಕ್ಷಿತ ಸಹಕಾರ ಸಿಗುವುದಿಲ್ಲ.
14 ಮಾರ್ಚ್ 2026, 23:42 IST