ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯಿಂದ ಆರ್ಥಿಕ ಬೆಂಬಲ ಸಿಗಲಿದೆ
Published 7 ಮಾರ್ಚ್ 2026, 22:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಹಿಡಿದ ಕೆಲಸ ಪೂರ್ತಿಗೊಂಡು ಮನಸ್ಸಿಗೆ ಸಂತೋಷವಾಗುತ್ತದೆ. ಕುಟುಂಬಕ್ಕಾಗಿ ಹಣ ಖರ್ಚು ಮಾಡಬೇಕಾಗಬಹುದು. ಹಿರಿಯರ ಸಲಹೆಗಳು ನಿಮಗೆ ಬಹಳ ಉಪಯುಕ್ತವಾಗಿರುತ್ತವೆ. ಸಂಗಾತಿಯ ಸಹಕಾರದಿಂದ ಕುಟುಂಬದಲ್ಲಿ ಸಂತೋಷ ಹೆಚ್ಚುತ್ತದೆ. ಆಸ್ತಿ ಮಾಡಲು ಬೇಕಾದ ಆರ್ಥಿಕ ಮೂಲಗಳು ತಿಳಿಯುತ್ತವೆ. ನರರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಪ್ರೀತಿ, ಪ್ರೇಮಗಳು ಸಫಲವಾಗುತ್ತವೆ. ಕೃಷಿಯಿಂದ ಅನಿರೀಕ್ಷಿತ ಲಾಭವನ್ನು ನಿರೀಕ್ಷೆ ಮಾಡಬಹುದು.
07 ಮಾರ್ಚ್ 2026, 22:30 IST
ವೃಷಭ
ವೈಭವದ ಜೀವನವನ್ನು ನಡೆಸುವತ್ತ ಆಸಕ್ತಿ ತೋರುವಿರಿ. ಆದಾಯವು ಉತ್ತಮವಾಗಿರುತ್ತದೆ. ಹಿರಿಯ ಮಹಿಳೆಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಹುದು. ವೃತ್ತಿಗೆ ಸಂಬಂಧಿತ ಪರೀಕ್ಷೆಗಳನ್ನು ತೆಗೆದುಕೊಂಡವರಿಗೆ ಯಶಸ್ಸು ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸು ಅಲ್ಪವಿರುತ್ತದೆ. ಶೀತ ಸಂಬಂಧಿತ ದೋಷಗಳು ಕೆಲವರನ್ನು ಕಾಡಬಹುದು. ನಿಮ್ಮ ಸಂಗಾತಿಯ ಸಹಾಯದಿಂದ ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
07 ಮಾರ್ಚ್ 2026, 22:30 IST
ಮಿಥುನ
ಆದಾಯವು ಸುಧಾರಿಸುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿರುತ್ತದೆ. ಉಷ್ಣ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಗೆ ನಿಮ್ಮಿಂದ ಆರ್ಥಿಕ ಸಹಾಯ ಲಭಿಸುತ್ತದೆ. ವೃತ್ತಿಯಲ್ಲಿ ವೇತನ ಹೆಚ್ಚಾಗುವ ಸಂದರ್ಭವಿದೆ. ವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿಗಳು ಆಗಬಹುದು. ಹಿರಿಯರ ವ್ಯವಹಾರಗಳಲ್ಲಿ ನಿಮಗೆ ಅವಕಾಶಗಳು ದೊರೆತು ಹೆಚ್ಚು ಲಾಭವಾಗುವ ಸಂದರ್ಭವಿದೆ.
07 ಮಾರ್ಚ್ 2026, 22:30 IST
ಕರ್ಕಾಟಕ
ಚುರುಕಾದ ನಡವಳಿಕೆಯನ್ನು ನೀವು ಹೊಂದಿರುವಿರಿ. ಆದಾಯವು ಕಡಿಮೆ ಇದ್ದರೂ ಕೂಡ ಅದರಲ್ಲಿ ತೂಗಿಸುವಿರಿ. ಹೈನುಗಾರಿಕೆಯಿಂದ ಹೆಚ್ಚು ಆದಾಯವಿರುತ್ತದೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಕೃಷಿ ವಿಜ್ಞಾನವನ್ನು ಓದುತ್ತಿರುವವರಿಗೆ ಬಹಳ ಅಭಿವೃದ್ಧಿ ಇರುತ್ತದೆ. ಪಿತ್ತದ ಸಮಸ್ಯೆ ಕೆಲವರನ್ನು ಕಾಡಬಹುದು. ಸಂಗಾತಿಯ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
07 ಮಾರ್ಚ್ 2026, 22:30 IST
ಸಿಂಹ
ಅತಿಯಾದ ಉದಾಸೀನತೆ ನಿಮ್ಮಲ್ಲಿ ಇರುತ್ತದೆ. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಸಂಗಾತಿಗೆ ಸ್ಥಿರಾಸ್ತಿ ದೊರೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ದೊರೆಯುವ ಕಾಲ. ಗುಪ್ತ ರೋಗಗಳು ಕೆಲವರನ್ನು ಬಾಧಿಸಬಹುದು. ಸಂಗಾತಿಯ ಸಹಕಾರದಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಿರುತ್ತದೆ. ಆಭರಣ ವ್ಯಾಪಾರಸ್ಥರಿಗೆ ವ್ಯಾಪಾರ ಮಂದಗತಿಯಲ್ಲಿದ್ದು, ಆದಾಯ ಕಡಿಮೆ ಇರುತ್ತದೆ.
07 ಮಾರ್ಚ್ 2026, 22:30 IST
ಕನ್ಯಾ
ವಾರದ ಆರಂಭದಲ್ಲಿ ಬಹಳ ಒತ್ತಡ ಇರುತ್ತದೆ. ಆದಾಯವು ಸ್ವಲ್ಪ ಮಟ್ಟಿಗೆ ಚೇತರಿಕೆಯನ್ನು ಕಾಣುತ್ತದೆ. ಬಂಧುಗಳಿಂದ ನಿಮಗೆ ಆರ್ಥಿಕ ನಷ್ಟವಾಗಬಹುದು. ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಕಡಿಮೆ. ವಾಯುಯಾನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಮೂಳೆಗಳ ತೊಂದರೆ ಅಥವಾ ಶ್ವಾಸಕೋಶದ ತೊಂದರೆ ಕೆಲವರನ್ನು ಕಾಡಬಹುದು. ಸಂಗಾತಿಯ ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ವೃತ್ತಿಯಲ್ಲಿದ್ದ ಗೊಂದಲಗಳು ದೂರವಾಗುತ್ತವೆ.
07 ಮಾರ್ಚ್ 2026, 22:30 IST
ತುಲಾ
ವಾರದ ಆರಂಭದಲ್ಲಿ ಬಹಳ ಆನಂದ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಹಿರಿಯರಿಂದ ನಿಮಗೆ ಆರ್ಥಿಕ ಸಹಾಯ ಸಿಗಬಹುದು. ಆಸ್ತಿ ಕೊಳ್ಳುವಾಗ ಎಚ್ಚರ, ಮೋಸ ಹೋಗುವ ಸಾಧ್ಯತೆಗಳಿವೆ. ಆಟೋಮೊಬೈಲ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ದೊರೆಯುತ್ತದೆ. ತೆರಿಗೆ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಮೂಳೆಯ ತೊಂದರೆ ಕೆಲವರನ್ನು ಕಾಡಬಹುದು.
07 ಮಾರ್ಚ್ 2026, 22:30 IST
ವೃಶ್ಚಿಕ
ವಾರದ ಆರಂಭದಲ್ಲಿ ಸಂಸಾರದಲ್ಲಿ ಸಂತೋಷವಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಜಮೀನು ಒದಗಿಸುವ ಕೆಲಸ ಮಾಡುವವರ ಆದಾಯ ಹೆಚ್ಚುತ್ತದೆ. ಫ್ಯಾಷನ್ ಡಿಸೈನ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿರುತ್ತದೆ. ಹರಿತವಾದ ಆಯುಧಗಳ ಜೊತೆ ಕೆಲಸ ಮಾಡುವಾಗ ಎಚ್ಚರವಿರಲಿ. ಪುಸ್ತಕ ವ್ಯಾಪಾರಿಗಳಿಗೆ ವ್ಯಾಪಾರ ಕಡಿಮೆ ಇರುತ್ತದೆ.
07 ಮಾರ್ಚ್ 2026, 22:30 IST
ಧನು
ನಿರೀಕ್ಷೆ ಮಾಡದೆ ಗೌರವ ದೊರೆಯುವ ಸಾಧ್ಯತೆ ಇದೆ. ಆದಾಯವು ಕಡಿಮೆ ಇದ್ದರೂ ಬೇರೆ ಮೂಲಗಳಿಂದ ಆದಾಯ ಹೊಂದಾಣಿಕೆ ಮಾಡಿಕೊಳ್ಳುವಿರಿ. ಸಂಸಾರದಲ್ಲಿ ಒತ್ತಡಗಳಿದ್ದರೂ ಕೂಡ, ಅದನ್ನು ಮೀರಿ ಸಂತೋಷವಿರುತ್ತದೆ. ಶಸ್ತ್ರಚಿಕಿತ್ಸೆ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ. ಅನಾರೋಗ್ಯ ಪೀಡಿತರ ಆರೋಗ್ಯ ಸುಧಾರಿಸುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ.
07 ಮಾರ್ಚ್ 2026, 22:30 IST
ಮಕರ
ವೃತ್ತಿ ಶ್ರದ್ಧೆ ನಿಮ್ಮಲ್ಲಿ ಬಹಳ ಹೆಚ್ಚಾಗಿ ಇರುತ್ತದೆ. ಆದಾಯವು ಸಾಕಷ್ಟು ಸುಧಾರಿಸುತ್ತದೆ. ಹಿತ ಶತ್ರುಗಳನ್ನು ಗುರುತಿಸಿ ಸರಿಯಾದ ಉತ್ತರ ನೀಡುವಿರಿ. ಕೃಷಿಯಿಂದ ಆದಾಯವನ್ನು ನಿರೀಕ್ಷೆ ಮಾಡಬಹುದು. ಹೆಚ್ಚು ಶ್ರಮಪಟ್ಟಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯುವ ಯೋಗ ವಿದ್ಯಾರ್ಥಿಗಳಿಗೆ ಇರುತ್ತದೆ. ಲೇವಾದೇವಿ ವ್ಯವಹಾರಗಳು ಬೇಡ. ದೇಹದಲ್ಲಿ ಪಿತ್ತ ಹೆಚ್ಚಾಗಬಹುದು. ಸಂಗಾತಿಯ ಸಹಾಯದಿಂದ ನಿಮ್ಮ ವೃತ್ತಿಯಲ್ಲಿ ಹೆಚ್ಚಿನ ಸ್ಥಾನ ಪಡೆಯಬಹುದು.
07 ಮಾರ್ಚ್ 2026, 22:30 IST
ಕುಂಭ
ಆದಾಯವು ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ. ಚುರುಕಾಗಿ ಕೆಲಸ ಮಾಡುವುದು ನಿಮಗೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಅವರ ಅಪೇಕ್ಷೆಗೆ ಮೀರಿದ ಫಲಿತಾಂಶ ದೊರೆಯುತ್ತದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಪ್ರೀತಿ ಪ್ರೇಮದಲ್ಲಿರುವವರಿಗೆ ಯಶಸ್ಸು ದೊರೆಯುವುದು ಕಡಿಮೆ. ಗಣಿಗಾರಿಕೆ ಮಾಡುವವರ ಆದಾಯ ಹೆಚ್ಚುತ್ತದೆ.
07 ಮಾರ್ಚ್ 2026, 22:30 IST
ಮೀನ
ಆದಾಯವು ಕಡಿಮೆ ಇರುತ್ತದೆ. ಸ್ತ್ರೀಯರ ಸಹಕಾರ ಸಾಕಷ್ಟು ದೊರೆಯುತ್ತದೆ. ಆಸ್ತಿಯನ್ನು ಕೊಳ್ಳಲು ಬೇಕಾದ ಹಣ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶ ಇರುವುದಿಲ್ಲ. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಅತಿ ವ್ಯಾವಹಾರಿಕತೆ ನಿಮಗೆ ಬೇಸರ ತರಿಸಬಹುದು. ವೃತ್ತಿಯಲ್ಲಿ ಸ್ವಲ್ಪಮಟ್ಟಿನ ಅಭಿವೃದ್ಧಿಯನ್ನು ಕಾಣಬಹುದು.
07 ಮಾರ್ಚ್ 2026, 22:30 IST