ವಾರ ಭವಿಷ್ಯ: ಈ ರಾಶಿಯವರ ಎಲ್ಲ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗುತ್ತದೆ
Published 2 ಮೇ 2026, 20:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಬಹಳ ಬುದ್ಧಿವಂತಿಕೆಯಿಂದ ನಿಮ್ಮ ಕಾರ್ಯ ಸಾಧನೆ ಮಾಡುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ಕೆಲಸಗಳಿಗೆ ಗುರುಹಿರಿಯರ ಬೆಂಬಲ ದೊರಕುತ್ತದೆ. ಭೂಮಿ ಖರೀದಿ ವಿಚಾರದಲ್ಲಿ ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಪಾದಗಳಲ್ಲಿ ನೋವು ಕಾಣಿಸಬಹುದು.
ವೃಷಭ
ನಿಮ್ಮ ದೇಹಾಲಂಕಾರಕ್ಕೆ ಹೆಚ್ಚು ಪ್ರಾಮುಖ್ಯ ನೀಡುವಿರಿ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಕೃಷಿಭೂಮಿಯನ್ನು ಕೊಳ್ಳಬಹುದು ಅಥವಾ ಅಭಿವೃದ್ಧಿಪಡಿಸಬಹುದು. ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶ ಸಿಗುವುದು ಕಷ್ಟ. ಮೂತ್ರ ಸಂಬಂಧಿ ದೋಷಗಳು ಕೆಲವರಿಗೆ ಕಾಣಿಸಬಹುದು. ಪ್ರೀತಿ, ಪ್ರೇಮದಲ್ಲಿರುವವರಿಗೆ ಹಿರಿಯರ ಒಪ್ಪಿಗೆ ಸಿಗುತ್ತದೆ. ಅನಿರೀಕ್ಷಿತ ಆದಾಯ ಲಭಿಸುತ್ತದೆ.
ಮಿಥುನ
ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ಖರ್ಚು ಹೆಚ್ಚಾಗುವ ಸಂದರ್ಭವಿದೆ. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ, ಎಚ್ಚರವಾಗಿರಿ. ಈಗ ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶ ಇರುತ್ತದೆ. ಶೀತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ನಿಮ್ಮೆಲ್ಲ ಕೆಲಸಗಳಿಗೆ ನಿಮ್ಮ ಸಂಗಾತಿಯ ಸಹಕಾರ ಸಿಗುತ್ತದೆ. ವಿದೇಶಿ ವ್ಯವಹಾರಗಳಲ್ಲಿ ಪಾಲು ದೊರೆಯುತ್ತದೆ.
ಕರ್ಕಾಟಕ
ಮನಸ್ಸಿನಲ್ಲಿ ಧೈರ್ಯವಿದ್ದು, ಎಲ್ಲಾ ಕಾರ್ಯಗಳಲ್ಲಿ ಉತ್ಸಾಹ ತೋರುವಿರಿ. ಆದಾಯವು ಕಡಿಮೆ ಇರುತ್ತದೆ. ಧರ್ಮ ಕಾರ್ಯಗಳನ್ನು ಮಾಡಿಸುವವರ ಆದಾಯ ಹೆಚ್ಚುತ್ತದೆ. ಬಂಧುಗಳ ನಡುವಿನ ಅಂತರ ಹೆಚ್ಚಾಗುತ್ತದೆ. ಕಟ್ಟಡ ಕಾರ್ಮಿಕರ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಪಡೆಯುವ ಯೋಗವಿದೆ. ವಾಯು ಪ್ರಕೋಪ ಕೆಲವರನ್ನು ಕಾಡಬಹುದು. ಸರ್ಕಾರಿ ವ್ಯವಹಾರಗಳಲ್ಲಿ ಲಾಭವಿರುತ್ತದೆ.
ಸಿಂಹ
ವಾರದ ಆರಂಭದಲ್ಲಿ ವಿಪರೀತ ಆಲಸ್ಯ ಇರುತ್ತದೆ. ಆದಾಯವು ಕಡಿಮೆ ಇದ್ದು, ಅದರಲ್ಲೇ ನಿಭಾಯಿಸಬೇಕಾಗಿರುತ್ತದೆ. ಹಿರಿಯ ಮಹಿಳಾ ಅಧಿಕಾರಿ ಸಹಾಯದಿಂದ ವೃತ್ತಿಯಲ್ಲಿ ಮೇಲೆ ಬರಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಫಲಿತಾಂಶ ದೊರೆಯುತ್ತದೆ. ಉಷ್ಣಸ್ಥಾವರಗಳಲ್ಲಿ ಕೆಲಸ ಮಾಡುವವರು ಈಗ ಎಚ್ಚರಿಕೆಯಿಂದ ಮಾಡಿರಿ. ವಿದೇಶಿ ಸಂಗಾತಿಯನ್ನು ಬಯಸುತ್ತಿರುವವರಿಗೆ ಸಂಬಂಧಗಳು ಕೂಡಿಬರುತ್ತವೆ.
ಕನ್ಯಾ
ಕೆಲಸ ಮಾಡುವ ಉತ್ಸಾಹ ಕಡಿಮೆಯಾಗಿರುತ್ತದೆ. ಆದಾಯವು ಕಡಿಮೆಯಿದ್ದು, ಹಿರಿಯರ ಸಹಕಾರದಿಂದ ಆದಾಯ ಹೆಚ್ಚಿಸಿಕೊಳ್ಳಬಹುದು. ತಾಯಿಯ ಸಹಕಾರ ಈಗ ಸಂಪೂರ್ಣವಾಗಿ ಸಿಗುತ್ತದೆ. ಸಂಗಾತಿಯ ಕೆಲವು ಮಾತು ನಿಮಗೆ ಇಷ್ಟವಾಗುವುದಿಲ್ಲ. ಸರ್ಕಾರಿ ಗುತ್ತಿಗೆ ವ್ಯವಹಾರಗಳಲ್ಲಿ ನಿಧಾನಗತಿ ಇರುತ್ತದೆ.
ತುಲಾ
ಸ್ವಗೌರವ ಹೆಚ್ಚಿಸಿಕೊಳ್ಳಲು ಪ್ರಯತ್ನಪಡುವಿರಿ. ಆದಾಯ ನಿಮ್ಮ ಖರ್ಚನ್ನು ಸರಿದೂಗಿಸುವಷ್ಟು ಇರುತ್ತದೆ. ವಿದೇಶದಲ್ಲಿ ಓದಬೇಕೆನ್ನುವವರ ಆಸೆ ಈಡೇರುತ್ತದೆ. ಕೆಲವರಿಗೆ ಕಾಲುಗಳಲ್ಲಿ ಗಾಯವಾಗಬಹುದು ಎಚ್ಚರವಾಗಿರಿ. ಸಂಗಾತಿ ಜತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಆಭರಣ ತಯಾರಕರಿಗೆ ಹೆಚ್ಚು ಲಾಭ ದೊರೆಯುವ ಸಾಧ್ಯತೆಗಳಿವೆ. ನಿಮ್ಮ ಹಿರಿಯರಿಂದ ನಿರೀಕ್ಷಿಸಿದ ಆರ್ಥಿಕ ಸಹಕಾರ ದೊರೆಯುತ್ತದೆ.
ವೃಶ್ಚಿಕ
ವಾರದ ಆರಂಭದಲ್ಲಿ ಬಹಳ ಆನಂದ ಇರುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ನಿಮ್ಮ ತಂತ್ರಗಳಿಂದ ಶತ್ರುಗಳನ್ನು ದಿಕ್ಕು ತಪ್ಪಿಸಬಹುದು. ವಿದೇಶದಲ್ಲಿ ಭೂಮಿಯ ವ್ಯವಹಾರ ಮಾಡುವವರ ಆದಾಯವು ಹೆಚ್ಚುತ್ತದೆ. ಕೆಲವರಿಗೆ ತಲೆನೋವು ಹೆಚ್ಚು ಕಾಡಬಹುದು. ಸಂಗಾತಿಯು ಪ್ರಾಮಾಣಿಕವಾಗಿ ನಿಮಗೆ ಸಹಕಾರ ನೀಡುತ್ತಾರೆ. ಹಣಕಾಸಿನ ವ್ಯವಹಾರಗಳು ಅಷ್ಟು ಒಳಿತಲ್ಲ. ವೃತ್ತಿ ಸ್ಥಳದಲ್ಲಿ ಉತ್ತಮ ಹೆಸರನ್ನು ಪಡೆಯುವ ಯೋಗವಿದೆ.
ಧನು
ಮನಸ್ಸಿನಲ್ಲಿ ಧೈರ್ಯ ಹೆಚ್ಚಿರುತ್ತದೆ. ಆದಾಯವು ಕಡಿಮೆ ಇದ್ದರೂ, ತೊಂದರೆ ಇರುವುದಿಲ್ಲ. ಬಂಧುಗಳು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಲು ಪ್ರಯತ್ನಪಡುವರು. ಹಿರಿಯರ ಆಸ್ತಿಯಲ್ಲಿ ತಗಾದೆ ಹೆಚ್ಚಾಗಬಹುದು. ಅಲಂಕಾರಿಕ ವಸ್ತುಗಳನ್ನು ಮಾರುವವರಿಗೆ ಬೇಡಿಕೆ ಕಡಿಮೆಯಾಗಬಹುದು. ಸಂಗಾತಿಯಿಂದ ನಿರೀಕ್ಷೆ ಮಾಡಿದ್ದಷ್ಟು ಆರ್ಥಿಕ ಸಹಾಯ ದೊರೆಯುತ್ತದೆ. ಹಾಲಿನ ಉತ್ಪನ್ನ ಮಾರಾಟಗಾರರ ಆದಾಯ ಕಡಿಮೆಯಾಗಬಹುದು.
ಮಕರ
ಬಹಳ ಉತ್ಸಾಹಿಗಳಾಗಿ ಕೆಲಸ ಕಾರ್ಯಗಳನ್ನು ಮಾಡುವಿರಿ. ವಿದೇಶಿ ವ್ಯವಹಾರ ಮಾಡುವವರ ಆದಾಯ ನಿರೀಕ್ಷೆ ಮೀರಿ ಹೆಚ್ಚುತ್ತದೆ. ಹಿತಶತ್ರುಗಳನ್ನು ಸರಿಯಾಗಿ ಎದುರಿಸುವಿರಿ. ಸರ್ಕಾರಿ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಕೇಶಾಲಂಕಾರ ಮತ್ತು ವಸ್ತ್ರಾಲಂಕಾರ ಮಾಡುವವರ ಆದಾಯ ಹೆಚ್ಚುತ್ತದೆ. ಸಂಗಾತಿಯ ಸಹಕಾರದಿಂದ ನಿಮ್ಮ ಮನೋಸ್ಥೈರ್ಯ ಹೆಚ್ಚುತ್ತದೆ.
ಕುಂಭ
ವಿದೇಶಿ ಭಾಷೆಗಳನ್ನು ಕಲಿಯಲು ಆಸಕ್ತಿ ಹೆಚ್ಚಾಗುತ್ತದೆ. ಆದಾಯ ಕಡಿಮೆ ಇದ್ದು, ಅದರಲ್ಲೇ ನಿಭಾಯಿಸಬೇಕಾದ ಪರಿಸ್ಥಿತಿ ಇದೆ. ಹಿರಿಯರಿಗೆ ಸಮಾಜದಿಂದ ಹೆಚ್ಚು ಸಹಕಾರ ದೊರೆಯುತ್ತದೆ. ರೇಷ್ಮೆ ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ದೊರೆಯುತ್ತದೆ. ಉದ್ಯೋಗಸ್ಥರಿಗೆ ಉದ್ಯೋಗ ಸ್ಥಳದಲ್ಲಿ ಕಿರುಕುಳ ಹೆಚ್ಚಾಗಬಹುದು. ಹಾಲಿನ ಉತ್ಪನ್ನಗಳನ್ನು ಮಾರುವವರ ಆದಾಯ ಹೆಚ್ಚುತ್ತದೆ.
ಮೀನ
ಮನಸ್ಸಿನಲ್ಲಿ ಸಾಕಷ್ಟು ದ್ವಂದ್ವವಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಆಸ್ತಿ ಕೊಳ್ಳುವ ಆಲೋಚನೆಗೆ ಪುಷ್ಟಿ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಹೃದಯಕ್ಕೆ ಸಂಬಂಧಿಸಿದ ದೋಷಗಳು ಕೆಲವರನ್ನು ಕಾಡಬಹುದು. ಕಸೂತಿ ಕೆಲಸ ಮಾಡುವವರ ಆದಾಯ ಹೆಚ್ಚುತ್ತದೆ.