ಮಂಗಳವಾರ, 19 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
12/04/2026 - 18/04/2026
ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯ ನಡವಳಿಕೆ ಬೇಸರ ತರಿಸಬಹುದು
Published 18 ಏಪ್ರಿಲ್ 2026, 23:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮ ಆಲೋಚನೆ ಬಹಳಷ್ಟು ದ್ವಂದ್ವದಿಂದ ಕೂಡಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಭೂಮಿಯ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚು. ಧರ್ಮ ವಿದ್ಯೆಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಇರುತ್ತದೆ. ಚರ್ಮ ಕಾಯಿಲೆಗಳು ಇರುವವರು ಎಚ್ಚರ ವಹಿಸಿ. ಸಂಗಾತಿಯ ಸಹಕಾರ ದೊರೆಯುತ್ತದೆ.
ವೃಷಭ
ವಾರದ ಆರಂಭದಲ್ಲೇ ನಿಮ್ಮ ಉತ್ಸಾಹ ಕುಗ್ಗಿದಂತೆ ಕಾಣಿಸುವುದು. ನಿಮ್ಮ ಆದಾಯವು ಖಂಡಿತ ನಿರೀಕ್ಷೆಯಷ್ಟಿರುತ್ತದೆ. ಕೃಷಿ ಭೂಮಿಯನ್ನು ಅಭಿವೃದ್ಧಿ ಮಾಡಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುತ್ತದೆ. ಕೆಲವರಿಗೆ ಗುಪ್ತಾಂಗಗಳಲ್ಲಿ ಸಮಸ್ಯೆ ಕಾಣಿಸಬಹುದು. ಸಂಗಾತಿಗೆ ಆಸ್ತಿ ಸಿಗುವ ಯೋಗವಿದೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಈಗ ಹೆಚ್ಚು ಅಭಿವೃದ್ಧಿ ಇರುತ್ತದೆ.
ಮಿಥುನ
ಆದಾಯವು ಸ್ವಲ್ಪ ಉತ್ತಮ ಸ್ಥಿತಿಯನ್ನು ತಲುಪುತ್ತದೆ. ಆಸ್ತಿ ವಿಚಾರದಲ್ಲಿ ಅತಿಯಾದ ಆತುರ ಬೇಡ. ಮಕ್ಕಳ ಬಗ್ಗೆ ಉತ್ತಮ ವಾರ್ತೆಗಳನ್ನು ಕೇಳಬಹುದು. ಸಂಗಾತಿಯಿಂದ ಆರ್ಥಿಕ ಸಹಕಾರ ಸಿಗುತ್ತದೆ. ವೃತ್ತಿಯ ಜಾಗದಲ್ಲಿ ಹಿತ ಶತ್ರುಗಳ ಕಾಟ ಜಾಸ್ತಿಯಾಗಬಹುದು. ಹಿರಿಯರಿಗೆ ವಿದೇಶಿಯಾನದ ಯೋಗವಿದೆ. ಅಲಂಕಾರಿಕ ವಸ್ತುಗಳನ್ನು ಮಾರುವವರ ಆದಾಯ ಹೆಚ್ಚುತ್ತದೆ.
ಕರ್ಕಾಟಕ
ಆದಾಯವು ಕಡಿಮೆ ಇರುತ್ತದೆ. ಧಾರ್ಮಿಕವಾಗಿ ಮಾತನಾಡುವಾಗ ಎಚ್ಚರವಿರಲಿ. ಕೆಲಸ ಕಾರ್ಯಗಳಿಗೆ ಬಂಧುಗಳ ಸಹಾಯ ಸ್ವಲ್ಪಮಟ್ಟಿಗೆ ಸಿಗಬಹುದು. ಸ್ಥಿರಾಸ್ತಿಯನ್ನು ಕೊಳ್ಳಲು ಮನಸ್ಸುಮಾಡಬಹುದು. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಸ್ವಲ್ಪ ಅಭಿವೃದ್ಧಿ ಇರುತ್ತದೆ. ಕೆಲವರಿಗೆ ದೇಹದಲ್ಲಿ ಪಿತ್ತ ಹೆಚ್ಚಾಗಬಹುದು. ಅನಿರೀಕ್ಷಿತವಾಗಿ ವಿದೇಶಿ ಪ್ರಯಾಣ ಯೋಗವಿದೆ. ವೃತ್ತಿ ಸ್ಥಳದಲ್ಲಿದ್ದ ಕೆಲವು ಗೊಂದಲಗಳು ಕಡಿಮೆಯಾಗುತ್ತವೆ.
ಸಿಂಹ
ಕೆಲಸ ಮಾಡಲು ಮುನ್ನುಗ್ಗುವ ಶಕ್ತಿ ಕಡಿಮೆಯಾದಂತೆ ಭಾಸವಾಗುತ್ತದೆ. ಆದಾಯವು ತಕ್ಕಮಟ್ಟಿಗೆ ಮಾತ್ರ ಇರುತ್ತದೆ. ನಿಮ್ಮ ಕೆಲವು ಕಾರ್ಯಗಳಿಗೆ ಒಡಹುಟ್ಟಿದವರ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅವರ ನಿರೀಕ್ಷೆಗಿಂತ ಹೆಚ್ಚು ಉತ್ತಮ ಫಲಿತಾಂಶ ಬರುತ್ತದೆ. ಕೆಲವರಿಗೆ ಮೂಳೆ ತೊಂದರೆ ಕಾಣಿಸಬಹುದು. ಸಂಗಾತಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಕೃಷಿಯಿಂದ ನಿರೀಕ್ಷೆಮಾಡಿದಷ್ಟು ಲಾಭ ಬರುವುದಿಲ್ಲ.
ಕನ್ಯಾ
ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಆಸ್ತಿ ವ್ಯವಹಾರ ಮಾಡುವವರ ಆದಾಯ ಗಣನೀಯವಾಗಿ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಇರುವುದಿಲ್ಲ. ಶ್ವಾಸಕೋಶದ ತೊಂದರೆಗಳು ಕೆಲವರನ್ನು ಕಾಡಬಹುದು. ಸಂಗಾತಿಯ ನಡವಳಿಕೆ ನಿಮಗೆ ಬೇಸರ ತರಿಸಬಹುದು.
ತುಲಾ
ವೈಯಕ್ತಿಕ ಅಲಂಕಾರಕ್ಕೆ ಹೆಚ್ಚು ಗಮನ ಕೊಡುವಿರಿ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಸಮಾಜದ ಸಹಕಾರ ದೊರೆಯುತ್ತದೆ. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಅಭಿವೃದ್ಧಿ ಇದೆ. ವೈಮಾನಿಕ ಕ್ಷೇತ್ರದಲ್ಲಿ ಓದುತ್ತಿರುವವರಿಗೆ ಈಗ ಹೆಚ್ಚಿನ ಯಶಸ್ಸು ಲಭಿಸುತ್ತದೆ. ಮೂಳೆ, ನರರೋಗ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ಅನುಕೂಲತೆಗಳು ಹೆಚ್ಚುತ್ತವೆ.
ವೃಶ್ಚಿಕ
ಮುನ್ನುಗ್ಗುವ ಹುಮ್ಮಸ್ಸು ನಿಮ್ಮಲ್ಲಿ ತುಂಬಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಆಟೋಮೊಬೈಲ್ ವಿಷಯ ಓದುತ್ತಿರುವವರಿಗೆ ಅನುಕೂಲತೆ ಹೆಚ್ಚು. ಕೆಲವರಿಗೆ ಕಣ್ಣಿನಲ್ಲಿ ದೋಷ ಕಾಣಿಸಬಹುದು. ಸಂಗಾತಿಯ ಆದಾಯ ಇಳಿಕೆಯಾಗುತ್ತದೆ. ಕೆಲವರಿಗೆ ಅನಿರೀಕ್ಷಿತವಾಗಿ ಹಣ ಲಾಭವಾಗುವ ಸಾಧ್ಯತೆಯಿದೆ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಗಣಿಗಾರಿಕೆ ಮಾಡುವವರ ಆದಾಯ ಹೆಚ್ಚುತ್ತದೆ.
ಧನು
ಬಹಳ ಗಂಭೀರವಾದ ವರ್ತನೆ ನಿಮ್ಮಲ್ಲಿರುತ್ತದೆ. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ವಿದ್ಯಾರ್ಥಿಗಳಿಗೆ ಈಗ ಉತ್ತಮ ಫಲಿತಾಂಶ ಪಡೆಯುವ ಅವಕಾಶಗಳಿವೆ. ಫ್ಯಾಷನ್ ಡಿಸೈನಿಂಗ್ ಓದುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಪ್ರಸೂತಿ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ತಾಯಿಯಿಂದ ಸ್ವಲ್ಪ ಸಹಕಾರ ದೊರೆಯುತ್ತದೆ. ವೃತ್ತಿಯಲ್ಲಿ ಇದ್ದ ಕಿರಿಕಿರಿಗಳು ಸ್ವಲ್ಪ ಕಡಿಮೆಯಾಗುತ್ತವೆ.
ಮಕರ
ವೃತ್ತಿ ಧರ್ಮ ನಿಮ್ಮನ್ನು ಕಾಪಾಡುತ್ತದೆ. ಆದಾಯವು ಕಡಿಮೆ ಇರುತ್ತದೆ. ಆದರೆ ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ಮಾತನಾಡುವಾಗ ಎಚ್ಚರಿಕೆ ಇರಲಿ. ಹಿತಶತ್ರುಗಳನ್ನು ನಿಗ್ರಹ ಮಾಡುವುದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗುವಿರಿ. ಸ್ಥಿರಾಸ್ತಿಯನ್ನು ಕೊಳ್ಳುವ ಯೋಗವಿದೆ. ಸಂಸಾರದಲ್ಲಿ ಸಂತೋಷವಿರುತ್ತದೆ. ಉದರ ಸಂಬಂಧಿ ದೋಷಗಳು ಈಗ ಕಾಣಿಸಬಹುದು. ಅನಿರೀಕ್ಷಿತವಾಗಿ ಸಂತರ ದರ್ಶನ ಲಭಿಸುವ ಸಾಧ್ಯತೆಗಳಿವೆ.
ಕುಂಭ
ಯುವಕರಲ್ಲಿ ಅತಿಯಾದ ಉಗ್ರತೆಯನ್ನು ಕಾಣಬಹುದು. ಹಿರಿಯರ ಕಾರ್ಯಗಳಿಗೆ ಸಾಕಷ್ಟು ಸಹಕಾರ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಅವರ ನಿರೀಕ್ಷೆಗಿಂತ ಹೆಚ್ಚಿನ ಫಲಿತಾಂಶ ಪಡೆಯುವ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಹಿರಿಯರು ಮಾಡುವ ಧಾರ್ಮಿಕ ಕಾರ್ಯಗಳಿಗೆ ಎಲ್ಲರಿಂದ ಶ್ಲಾಘನೆ ಸಿಗುತ್ತದೆ. ಅದಿರು ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ.
ಮೀನ
ನಿಮ್ಮ ಬುದ್ಧಿವಂತಿಕೆಯು ಕೆಲಸ ಮಾಡದೆ ಹೆಚ್ಚು ಶ್ರಮ ಪಡಬೇಕಾದೀತು. ಆದಾಯವು ಮಧ್ಯಮಗತಿಗಿಂತ ಹೆಚ್ಚಿರುತ್ತದೆ. ಸ್ವಂತ ಬುದ್ಧಿಯಿಂದ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಭಾಷಣಕಾರರಿಗೆ ಮತ್ತು ಸಂಗೀತಗಾರರಿಗೆ ಉತ್ತಮ ವೇದಿಕೆ ದೊರೆತು, ಆದಾಯವು ಹೆಚ್ಚುತ್ತದೆ. ಉದರ ಸಂಬಂಧಿ ದೋಷಗಳು ಕಾಡಬಹುದು.
ADVERTISEMENT
ADVERTISEMENT