ವಾರ ಭವಿಷ್ಯ: ಈ ರಾಶಿಯವರಿಗೆ ಕೃಷಿಭೂಮಿ ಖರೀದಿ ಯೋಗವಿದೆ..
Published 26 ಏಪ್ರಿಲ್ 2026, 1:05 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಅತಿಯಾದ ಆತ್ಮಗೌರವವಿರುತ್ತದೆ. ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಆಸ್ತಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಕಾಲಿಗೆ ಸಂಬಂಧಿಸಿದ ದೋಷಗಳು ಕೆಲವರನ್ನು ಕಾಡಬಹುದು. ನಿಮ್ಮ ಸಂಗಾತಿಯಿಂದ ಆರ್ಥಿಕ ಸಹಕಾರ ದೊರೆಯುತ್ತದೆ. ಕೃಷಿಯಿಂದ ನಿರೀಕ್ಷಿತ ಆದಾಯ ಇರುವುದಿಲ್ಲ. ವೃತ್ತಿಯಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ವಿದೇಶಿ ವ್ಯವಹಾರ ಮಾಡುವವರ ಆದಾಯ ಸಾಕಷ್ಟು ಹೆಚ್ಚುತ್ತದೆ. ( ಅಶ್ವಿನಿ ಭರಣಿ ಕೃತಿಕ 1)
26 ಏಪ್ರಿಲ್ 2026, 01:05 IST
ವೃಷಭ
ಸುಂದರವಾಗಿ ಕಾಣಿಸಲು ಬಹಳ ಪ್ರಯತ್ನಪಡುವಿರಿ. ಆದಾಯವು ಉತ್ತಮವಾಗಿರುತ್ತದೆ. ಕೃಷಿಭೂಮಿ ಖರೀದಿ ಯೋಗವಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಕಷ್ಟಪಡಬೇಕು. ಕೆಲವರಿಗೆ ಕಾಲಿನ ನೋವು ಅಥವಾ ಹೊಟ್ಟೆ ನೋವು ಕಾಣಿಸಬಹುದು. ಸಂಗಾತಿಯ ಹೆಸರಲ್ಲಿ ಆಸ್ತಿ ಮಾಡಿಕೊಳ್ಳಬಹುದು. ಅನಿರೀಕ್ಷಿತ ಆದಾಯ ಕೆಲವರಿಗೆ ಇರುತ್ತದೆ. ವಿದೇಶದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಕೆಲಸ ದೊರೆಯುತ್ತದೆ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
26 ಏಪ್ರಿಲ್ 2026, 01:05 IST
ಮಿಥುನ
ಉಪನ್ಯಾಸಕಾರರಿಗೆ ಬಹಳ ಗೌರವ ದೊರೆಯುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಚಟುವಟಿಕೆಗಳಿಂದ ಸ್ವಲ್ಪ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಕೃಷಿಭೂಮಿ ವ್ಯವಹಾರ ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಇರುತ್ತದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರದಿಂದಿರಿ. ಸಂಗಾತಿಯ ಸಹಕಾರದಿಂದ ಆದಾಯವನ್ನು ಹೆಚ್ಚುಮಾಡಿಕೊಳ್ಳಬಹುದು. ವೃತ್ತಿಯಲ್ಲಿ ಅನಿರೀಕ್ಷಿತ ಪ್ರಗತಿ ಇರುತ್ತದೆ. ಉದ್ಯೋಗದ ಸ್ಥಳದಲ್ಲಿ ಹಿತಶತ್ರುಗಳು ಸಾಕಷ್ಟು ಹೆಚ್ಚಾಗುವರು.(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
26 ಏಪ್ರಿಲ್ 2026, 01:05 IST
ಕರ್ಕಾಟಕ
ವಾರದ ಆರಂಭದಲ್ಲಿ ಚಿಂತೆ ಹೆಚ್ಚಾಗಿರುತ್ತದೆ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಹತ್ತಿರದ ಫಲಿತಾಂಶ ದೊರೆಯುತ್ತದೆ. ಆಹಾರ ವ್ಯತ್ಯಾಸದಿಂದ ಉದರ ದೋಷಗಳು ಕಾಣಿಸಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ನಿರೀಕ್ಷೆಗೆ ಮೀರಿದ ಲಾಭವಿರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ನಿರೀಕ್ಷೆ ಮಾಡಿದ ಪ್ರಗತಿ ಇರುತ್ತದೆ. ( ಪುನರ್ವಸು 4 ಪುಷ್ಯ ಆಶ್ಲೇಷ)
26 ಏಪ್ರಿಲ್ 2026, 01:05 IST
ಸಿಂಹ
ನಿಮ್ಮ ನಿರ್ಧಾರಗಳಲ್ಲಿ ಬಹಳ ದ್ವಂದ್ವವಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಹಿರಿಯರ ಸಹಕಾರದಿಂದ ಉದ್ಯೋಗದಲ್ಲಿ ಹೆಚ್ಚು ಅನುಕೂಲವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಫಲಿತಾಂಶ ದೊರೆಯುವ ಯೋಗವಿದೆ. ಕಾಲು ನೋವು ಅಥವಾ ಮೂಳೆ ನೋವು ನಿಮ್ಮನ್ನು ಕಾಡಬಹುದು. ಸಂಗಾತಿಯ ಸಹಾಯದಿಂದ ವಿದೇಶಕ್ಕೆ ಹೋಗಬಹುದು. ಗಣಿಗಾರಿಕೆ ಮಾಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
26 ಏಪ್ರಿಲ್ 2026, 01:05 IST
ಕನ್ಯಾ
ವಿಭಿನ್ನ ರೀತಿಯ ಆಲೋಚನೆಗಳು ನಿಮ್ಮಲ್ಲಿ ಇರುತ್ತವೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಸಂಗಾತಿಯ ಕಡೆಯಿಂದ ಆಸ್ತಿ ದೊರೆಯುವ ಸಾಧ್ಯತೆಗಳಿವೆ. ಸ್ಥಿರಾಸ್ತಿಯನ್ನು ಕೊಳ್ಳಲು ಬೇಕಾದ ಹಣಕಾಸಿನ ಮಾರ್ಗ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಈಗ ಸಾಮಾನ್ಯ ಫಲಿತಾಂಶ ಇರುತ್ತದೆ. ಸ್ನಾಯುಗಳ ಸೆಳೆತ ಕೆಲವರನ್ನು ಕಾಡಬಹುದು. ಸರ್ಕಾರಿ ಕೆಲಸ–ಕಾರ್ಯಗಳಲ್ಲಿ ಸ್ವಲ್ಪ ನಿಧಾನಗತಿ ಇರುತ್ತದೆ. ವೃತ್ತಿಯಲ್ಲಿ ನಿರೀಕ್ಷಿತ ವೇತನ ಏರಿಕೆಯನ್ನು ಕಾಣಬಹುದು. (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
26 ಏಪ್ರಿಲ್ 2026, 01:05 IST
ತುಲಾ
ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಬಂಧುಗಳ ಸಹಕಾರ ದೊರೆಯುತ್ತದೆ. ಕೃಷಿಭೂಮಿಯನ್ನು ಅಭಿವೃದ್ಧಿಪಡಿಸುವವರಿಗೆ ಆದಾಯ ಹೆಚ್ಚುತ್ತದೆ. ನರಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಜತೆಗೂಡಿ ಮಾಡಿದ ಸರ್ಕಾರಿ ವ್ಯವಹಾರಗಳಲ್ಲಿ ಲಾಭವಿರುತ್ತದೆ. ನಿಮ್ಮ ಸಂಗಾತಿಯ ಮುನಿಸು ನಿಮಗೆ ಮುಜುಗರ ತರಬಹುದು. ಕುಟುಂಬದ ವ್ಯವಹಾರಗಳಲ್ಲಿ ನಿಮಗೆ ಲಾಭವಿರುತ್ತದೆ. ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
26 ಏಪ್ರಿಲ್ 2026, 01:05 IST
ವೃಶ್ಚಿಕ
ಯಾವುದೇ ಕೆಲಸವನ್ನು ಸಾಧಿಸುವ ಉತ್ಸಾಹ ನಿಮ್ಮಲ್ಲಿ ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳಲ್ಲಿ ಕೆಲವರು ಮಾತ್ರ ನಿಮಗೆ ಸಹಕಾರ ನೀಡುವವರು. ವಿದೇಶದಲ್ಲಿರುವವರಿಗೆ ಸ್ಥಿರಾಸ್ತಿ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. ನೇತ್ರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಸಂತಸಕ್ಕಾಗಿ ಹಣ ಖರ್ಚಾಗುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭವಿರುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಸಹಾಯದಿಂದ ಸಾಕಷ್ಟು ಅನುಕೂಲವಾಗುತ್ತದೆ. ( ವಿಶಾಖಾ 4 ಅನುರಾಧ ಜೇಷ್ಠ)
26 ಏಪ್ರಿಲ್ 2026, 01:05 IST
ಧನು
ನಿಮ್ಮ ಕೆಲಸ ಕಾರ್ಯಗಳಲ್ಲಿ ಸಂಗಾತಿಯ ನೆರಳನ್ನು ಕಾಣಬಹುದು. ಆದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ಬಂಧುಗಳಿಂದ ಸಾಕಷ್ಟು ವಿರೋಧ ಎದುರಾಗುತ್ತದೆ. ಆಡಳಿತಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ನೆರವಿನಿಂದ ಆದಾಯ ಹೆಚ್ಚುವುದು. ಸ್ವಂತ ಬುದ್ಧಿವಂತಿಕೆಯಿಂದ ಉದ್ಯೋಗದಲ್ಲಿ ಅಭಿವೃದ್ಧಿ ಕಾಣಬಹುದು. ರೇಷ್ಮೆ ವ್ಯಾಪಾರಿಗಳಿಗೆ ಆದಾಯ ಕಡಿಮೆ ಇರುತ್ತದೆ. ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
26 ಏಪ್ರಿಲ್ 2026, 01:05 IST
ಮಕರ
ಎಲ್ಲರ ವಿರೋಧದ ನಡುವೆಯೂ ನಿಮ್ಮ ಕೆಲಸಕಾರ್ಯಗಳನ್ನು ಸಾಧಿಸುವಿರಿ. ಆಮದು ಮತ್ತು ರಫ್ತು ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಬಂಧುಗಳಿಂದ ಸ್ವಲ್ಪಮಟ್ಟಿನ ಸಹಕಾರ ದೊರೆಯುತ್ತದೆ. ಫ್ಯಾಷನ್ ಡಿಸೈನಿಂಗ್ ಓದುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಸುಗಂಧ ದ್ರವ್ಯ ತಯಾರಕರಿಗೆ ಬೇಡಿಕೆ ಹೆಚ್ಚುತ್ತದೆ. ಪಿತ್ತವಿಕಾರಗಳು ಕೆಲವರನ್ನು ಕಾಡಬಹುದು. ಸಂಗಾತಿಯು ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆಗಳಿವೆ. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
26 ಏಪ್ರಿಲ್ 2026, 01:05 IST
ಕುಂಭ
ವಿದೇಶಕ್ಕೆ ಹೋಗಬೇಕೆಂದು ಪ್ರಯತ್ನಿಸುತ್ತಿದ್ದವರಿಗೆ ಈಗ ಯೋಗ ಕೂಡಿಬರುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಹಿರಿಯರ ಸಹಕಾರ ದೊರೆಯುತ್ತದೆ. ಹೂವು ಬೆಳೆಯುವವರ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅಪೇಕ್ಷಿತ ವಿಷಯಗಳಲ್ಲಿ ಓದುವ ಅವಕಾಶ ದೊರೆಯುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಅದಿರು ವ್ಯಾಪಾರಮಾಡುವವರ ಆದಾಯ ಹೆಚ್ಚುತ್ತದೆ. (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
26 ಏಪ್ರಿಲ್ 2026, 01:05 IST
ಮೀನ
(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ
ನಿಮ್ಮ ಮನಸ್ಸಿನ ಆಲೋಚನೆಗಳು ಒಂದೇ ರೀತಿ ಇರುವುದಿಲ್ಲ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ಬಂಧುಗಳ ಸಹಕಾರ ಸಕಾಲಕ್ಕೆ ದೊರೆಯುತ್ತದೆ. ಧರ್ಮ ಕಾರ್ಯಗಳನ್ನು ಮಾಡುವವರಿಗೆ ಸಮಾಜದ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಕೃಷಿಕರಿಗೆ ಆದಾಯ ಕಡಿಮೆಯಾಗುವ ಸಾಧ್ಯತೆಗಳಿವೆ. ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರ ಆದಾಯ ಹೆಚ್ಚುತ್ತದೆ. ವೃತ್ತಿಯಲ್ಲಿ ನಿರೀಕ್ಷಿತ ಏಳಿಗೆಯನ್ನು ಕಾಣಬಹುದು.
26 ಏಪ್ರಿಲ್ 2026, 01:05 IST