ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
01/09/2024 - 07/09/2024
ವಾರ ಭವಿಷ್ಯ: ಈ ರಾಶಿಯವರಿಗೆ ಸರ್ಕಾರದಿಂದ ಬರಬೇಕಾಗಿದ್ದ ಧನ ಸಹಾಯಗಳು ಬರುತ್ತದೆ
Published 7 ಸೆಪ್ಟೆಂಬರ್ 2024, 18:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವಾರದ ಆರಂಭ ಆನಂದದಾಯಕವಾಗಿರುತ್ತದೆ. ಸಂಗಾತಿಯು ನಿಮ್ಮ ನೆರಳಾಗಿ ನಿಂತು ಎಲ್ಲ ಸಹಕಾರಗಳನ್ನು ನೀಡುವರು. ಆದಾಯವು ಉತ್ತಮವಾಗಿರುತ್ತದೆ. ಬಂಧುಗಳ ಸಹಕಾರ ನಿಮ್ಮ ಕೆಲಸಕಾರ್ಯಗಳಿಗೆ ದೊರೆಯುತ್ತದೆ. ಸಂಸಾರದಲ್ಲಿ ಸುಖವಿರುತ್ತದೆ. ತಾಯಿಯಿಂದ ಹೆಚ್ಚಿನ ಅನುಕೂಲಗಳಾಗುತ್ತವೆ. ಈಗ ವಿದ್ಯಾರ್ಥಿಗಳಿಗೆ ಅತ್ಯಂತ ಯಶಸ್ಸಿನ ಕಾಲ. ಉದರ ಸಂಬಂಧಿ ದೋಷಗಳು ಅಥವಾ ಹಳೆಯ ಕಾಯಿಲೆಗಳು ಮರುಕಳಿಸಬಹುದು. ಸಂಸಾರ ಸುಖಕ್ಕಾಗಿ ಹೆಚ್ಚಿನ ಹಣ ಖರ್ಚಾಗುವುದು. ಕಬ್ಬಿಣ ವಸ್ತುಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಹೆಚ್ಚು ಲಾಭವಿರುತ್ತದೆ. ಹೆಚ್ಚಿನ ಒಳಿತಿಗಾಗಿ ದುರ್ಗಾ ಸುಬ್ರಹ್ಮಣ್ಯರನ್ನು ಧ್ಯಾನ ಮಾಡಿರಿ.
ವೃಷಭ
ಬಹಳ ಗಂಭೀರ ನಡವಳಿಕೆಯನ್ನು ಪ್ರದರ್ಶನ ಮಾಡುವಿರಿ. ಆದಾಯ ಕಡಿಮೆ ಇದ್ದರೂ ಸಹ ಕೃಷಿಯಿಂದ ಸ್ವಲ್ಪ ಆದಾಯ ಬರುತ್ತದೆ. ಸೋದರಿಯರು ಅವರಿಗೆ ಲಾಭವಾಗುವಂತಹ ಪ್ರಸಂಗಗಳಲ್ಲಿ ಮಾತ್ರ ಸಹಕಾರ ನೀಡುವರು. ಭೂಮಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಗಣಿತ ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಧರ್ಮವಿದ್ಯೆ ಕಲಿಯುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿಯ ವ್ಯವಹಾರಗಳಲ್ಲಿ ಹಣ ಹೂಡುವಿರಿ. ತಂದೆಯಿಂದ ವೃತ್ತಿಯಲ್ಲಿ ಸಲ್ಪ ಸಹಾಯವಾಗುತ್ತದೆ. ಹೆಚ್ಚಿನ ಒಳಿತಿಗಾಗಿ ಲಕ್ಷ್ಮಿ ಸುಬ್ರಹ್ಮಣ್ಯರನ್ನು ಆರಾಧನೆ ಮಾಡಿರಿ.
ಮಿಥುನ
ದೇಹ ಧಾರ್ಢ್ಯತೆಯ ಕಡೆಗೆ ಸಾಕಷ್ಟು ಗಮನ ಕೊಡುವಿರಿ. ಸಂಗೀತಗಾರರಿಗೆ ಇಂಪಾದ ಧ್ವನಿ ಒದಗಿಬರುತ್ತದೆ. ಬಂಧುಗಳಿಂದ ವ್ಯಾವಹಾರಿಕ ರೀತಿಯ ಸಹಕಾರ ದೊರೆಯುತ್ತದೆ. ಭೂಮಿಯ ವ್ಯವಹಾರ ಮಾಡುವವರಿಗೆ ಅಲ್ಪ ಮಟ್ಟಿನ ಆದಾಯ ಬರಬಹುದು. ಅಧ್ಯಯನ ಮಾಡುತ್ತಿರುವವರಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಆರೋಗ್ಯದಲ್ಲಿ ಆಗಿದ್ದ ವ್ಯತ್ಯಾಸಗಳು ಸರಿಯಾಗಬಹುದು. ಸಂಗಾತಿಯ ಸೌಕರ್ಯಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಕೃಷಿಯಿಂದ ಅಲ್ಪ ಆದಾಯವಿರುತ್ತದೆ. ದ್ರವರೂಪದ ವಸ್ತುಗಳನ್ನು ಮಾರುವವರಿಗೆ ಆದಾಯ ಹೆಚ್ಚುತ್ತದೆ. ಕೃಷಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಹೆಚ್ಚಿನ ಒಳಿತಿಗಾಗಿ ಪರಮೇಶ್ವರನ ಧ್ಯಾನ ಮಾಡಿರಿ.
ಕರ್ಕಾಟಕ
ನೀವು ಈ ವಾರ ವ್ಯವಹಾರಿಕ ಚತುರರಾಗಿರುವಿರಿ. ಆದಾಯವು ಉತ್ತಮವಾಗಿರುತ್ತದೆ. ಅದರಲ್ಲೂ ಸರ್ಕಾರದಿಂದ ಬರಬೇಕಾಗಿದ್ದ ಎಲ್ಲ ರೀತಿಯ ಧನ ಸಹಾಯಗಳು ಈಗ ಬರುತ್ತದೆ. ಕೆಲವು ಕೆಲಸ ಕಾರ್ಯಗಳಿಗೆ ಸ್ತ್ರೀಯರಿಂದ ಅಥವಾ ಸೋದರಿಯರಿಂದ ತಡೆ ಬರಬಹುದು. ಸಂಗಾತಿಯಿಂದ ಒರಟುತನವನ್ನುನಿರೀಕ್ಷೆ ಮಾಡಬಹುದು. ಖರೀದಿಯ ವಿಚಾರದಲ್ಲಿ ಎಚ್ಚರವಾಗಿರಿ, ಹಣ ಮುಳುಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶದಲ್ಲಿ ಕಡಿಮೆಯಾಗಬಹುದು. ನಿಮ್ಮ ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಸ್ವಲ್ಪ ಕಾಣಬಹುದು. ಸಂಗಾತಿಯು ನಿಮ್ಮ ಮೇಲೆ ಸಿಟ್ಟಾಗುವ ಸಾಧ್ಯತೆಗಳಿವೆ. ಹೆಚ್ಚಿನ ಒಳಿತಿದ್ದಾಗೆ ಪರಮೇಶ್ವರ ಹಾಗೂ ಶನೇಶ್ಚರ ಧ್ಯಾನ ಮಾಡಿರಿ.
ಸಿಂಹ
ಸಮಾಜದಿಂದ ಹೆಚ್ಚು ಗೌರವ ನಿರೀಕ್ಷಣೆ ಮಾಡುವಿರಿ. ಆದಾಯ ಸಲ್ಪ ಕಡಿಮೆ ಇದ್ದರೂ ಸಹ ಸಂಗಾತಿಯ ಸಹಾಯದಿಂದ ಮುನ್ನಡೆಯುತ್ತದೆ. ಸೋದರಿಯರಿಂದ ಬ್ರಾತೃ ಧರ್ಮ ಧರ್ಮ ಉಲ್ಲಂಘನೆ ಆಗಬಹುದು. ಇಂತಹ ಸಂದರ್ಭದಲ್ಲಿ ತಾಯಿಯಿಂದ ನಿಮಗೆ ಸಹಕಾರ ದೊರೆಯುತ್ತದೆ. ಎಲೆಕ್ಟ್ರಾನಿಕ್ಸ್ ಉದ್ದಿಮೆದಾರಿಗೆ ಹೆಚ್ಚು ಲಾಭವಿರುತ್ತದೆ. ಧಾರ್ಮಿಕ ವಿದ್ಯೆಗಳನ್ನು ಕಲಿಯುತ್ತಿರುವವರಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತದೆ. ಮೂಳೆಯ ತೊಂದರೆಗಳು ಇರುವವರು ಎಚ್ಚರವಾಗಿರಿ. ಸಂಗಾತಿಯು ಸಾಕಷ್ಟು ಶ್ರಮ ವಹಿಸಿ ಸಂಸಾರಕ್ಕಾಗಿ ದುಡಿಯುವವರು. ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರನ ಧ್ಯಾನಮಾಡಿರಿ.
ಕನ್ಯಾ
ನಿಮ್ಮ ನಡವಳಿಕೆಯಲ್ಲಿ ದ್ವಿಮುಖ ವ್ಯಕ್ತಿತ್ವವಿರುತ್ತದೆ. ಆದಾಯವು ಸಾಮಾನ್ಯವಾಗಿ ಇರುತ್ತದೆ. ಸಂಗೀತಗಾರರಿಗೆ ಹೆಚ್ಚಿನ ಅನುಕೂಲಗಳು ದೊರೆಯುತ್ತವೆ. ಬಂಧುಗಳಿಂದ ವೃತ್ತಿಯಲ್ಲಿ ಅನುಕೂಲವಾಗುತ್ತದೆ. ಆಸ್ತಿ ಖರೀದಿಯ ವಿಚಾರದಲ್ಲಿ ಮುನ್ನಡೆ ಇಡಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರ ಇರುತ್ತದೆ. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು ಸಂಗಾತಿಗೆ ವಿದೇಶಿ ಕಂಪನಿಗಳಿಂದ ಸಹಾಯ ದೊರೆಯುತ್ತದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ಲಾಭವಿರುತ್ತದೆ. ಆಭರಣ ತಯಾರಕರಿಗೆ ಮಾರಾಟಗಾರರಿಗೆ ಲಾಭವಿರುತ್ತದೆ. ಹೆಚ್ಚಿನ ಒಳಿತಿಗಾಗಿ ದುರ್ಗಾ ಲಕ್ಷ್ಮಿಯರನ್ನು ಧ್ಯಾನ ಮಾಡಿರಿ.
ತುಲಾ
ಮನಸ್ಸಿನಲ್ಲಿ ಸಾಕಷ್ಟು ಆನಂದವಿರುತ್ತದೆ. ಯಾವುದೇ ಕೆಲಸ ಮಾಡಲು ದೃಢ ನಿರ್ಧಾರಗಳಿರುವುದಿಲ್ಲ. ಆದಾಯ ಮಧ್ಯಮ ಗತಿಯಲ್ಲಿರುತ್ತದೆ. ಸಮಾಜದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಆಕ್ಷೇಪಣೆ ಕೇಳಿ ಬರಬಹುದು. ಆಸ್ತಿ ವ್ಯವಹಾರದಲ್ಲಿ ಆತುರತೆ ಬೇಡ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪಲಿತಾಂಶ ಕಷ್ಟ. ಮಕ್ಕಳಿಂದ ಸೂಕ್ತ ಗೌರವ ದೊರೆಯುವುದಿಲ್ಲ. ಕೀಲು ನೋವುಗಳು ಕೆಲವರನ್ನು ಕಾಡಬಹುದು. ಸಂಗಾತಿಗೆ ಆಸ್ತಿ ಬರುವ ಯೋಗವಿದೆ. ಗಣಿಗಾರಿಕೆ ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಹಿರಿಯರಿಂದ ದೊರೆಯುತ್ತಿದ್ದ ಸಹಾಯ ನಿಲ್ಲುವ ಸಾಧ್ಯತೆ ಇದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಮತ್ತು ದುರ್ಗೆಯರನ್ನು ಧ್ಯಾನ ಮಾಡಿರಿ.
ವೃಶ್ಚಿಕ
ಹಿರಿಯರಿಗೆ ಗೌರವ ದೊರೆಯುತ್ತದೆ ಮತ್ತು ನಿಮ್ಮ ಕೆಲಸ ಕಾರ್ಯಗಳಿಗೆ ಅವರ ಸಹಕಾರ ದೊರೆಯುತ್ತದೆ. ಆದಾಯವು ನಿಮ್ಮ ನಿರೀಕ್ಷಿತ ಮಟ್ಟದಲ್ಲಿರುತ್ತದೆ. ಶತ್ರುಗಳಿಗೆ ಮುಂಚೆ ಅವರ ಮೇಲೆ ಎರಗಿ ಸುಮ್ಮನೆ ಆಗಿಸುವಿರಿ . ಸಾಂಪ್ರದಾಯಿಕ ಹಳೆ ತಳಿಗಳ ಬೀಜಗಳನ್ನು ಉತ್ಪಾದನೆ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ವಿದೇಶಿ ಭಾಷಾ ಬೋಧನೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಮಾಂಸಖಂಡಗಳಲ್ಲಿನ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯಿಂದ ನಿಮಗೆ ಧನ ಸಹಾಯ ದೊರೆಯುತ್ತದೆ. ಸಂಗಾತಿ ಕಡೆಯವರಿಂದ ಸರ್ಕಾರಿ ಕಚೇರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಸುಬ್ರಹ್ಮಣ್ಯರನ್ನು ಧ್ಯಾನ ಮಾಡಿರಿ.
ಧನು
ಸ್ವಲ್ಪ ಬಳಲಿದಂತೆ ಕಂಡರೂ ಸಹ ತಕ್ಷಣ ಜಾಗ್ರತರಾಗುವಿರಿ. ಆದಾಯ ಕಡಿಮೆ ಇದ್ದರೂ ಅದನ್ನು ನಿರ್ವಹಣೆ ಮಾಡುವಿರಿ. ಶತ್ರುಗಳ ತಂತ್ರಗಳನ್ನು ಅವರಿಗೆ ತಿರುಗುಬಾಣವಾಗಿ ಮಾಡುವಿರಿ. ವಿದೇಶಿ ಕಂಪನಿಗಳಿಗೆ ಭೂಮಿ ಒದಗಿಸುತ್ತಿರುವವರಿಗೆ ಲಾಭವಿದೆ. ಯೋಗಪಟುಗಳಿಗೆ ಉತ್ತಮ ಅವಕಾಶ ಸಿಗುತ್ತದೆ. ಸಾಹಸ ಕಲಾವಿದರಗಳಿಗೆ ಉತ್ತಮ ಅವಕಾಶ ದೊರೆತು ಸಂಪಾದನೆ ಹೆಚ್ಚುತ್ತದೆ. ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂಗಾತಿಯ ಸಂಬಂಧಿಕರಿಂದ ನಿಮಗೆ ಹೆಚ್ಚು ಸಹಾಯ ದೊರೆಯುತ್ತದೆ. ತಾಯಿ ನಿಮ್ಮ ಮೇಲೆ ಸ್ವಲ್ಪ ಮುನಿಸಿಕೊಳ್ಳುವರು. ಸಂಗಾತಿ ವ್ಯವಹಾರಗಳಲ್ಲಿ ಸ್ವಲ್ಪ ಏರುಪೇರಾಗಬಹುದು. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಮತ್ತು ದುರ್ಗೆಯರನ್ನು ಧ್ಯಾನ ಮಾಡಿರಿ.
ಮಕರ
ಬಹಳ ಶ್ರಮ ಪಟ್ಟು ಕೆಲಸ ಮಾಡುವಿರಿ. ನಿಮ್ಮ ಶ್ರಮದಿಂದ ಹೆಚ್ಚು ಸಂಪಾದನೆ ಮಾಡಬಹುದು. ನಿಮ್ಮ ಕೆಲವು ಬಂಧುಗಳು ನಿಮ್ಮ ಬೆಳವಣಿಗೆ ನೋಡಿ ವಿರೋಧಿಸುವರು. ಭೂಮಿ ವ್ಯವಹಾರದಲ್ಲಿ ಅಂತಹ ಲಾಭವಿರುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರದಿಂದಿರಿ. ಬೆಂಕಿಯೊಡನೆ ಕೆಲಸ ಮಾಡುವರು ಸಹ ಎಚ್ಚರದಿಂದಿರಿ. ಅವಿವಾಹಿತರಿಗೆ ಪ್ರೀತಿ ಪ್ರೇಮಗಳು ಒದಗುವ ಸಾಧ್ಯತೆ ಇದೆ. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಮಧ್ಯಮ ಗತಿಯ ವ್ಯಾಪಾರವಿರುತ್ತದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಮತ್ತು ನಾರಾಯಣನ ಧ್ಯಾನವನ್ನು ಮಾಡಿರಿ.
ಕುಂಭ
ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗ ತೊಡಗುತ್ತದೆ. ವಿದೇಶಿ ಭಾಷೆಯನ್ನು ಕಲಿತಿರುವವರಿಗೆ ಅದು ಒಂದು ಸಂಪಾದನೆಯ ಮಾರ್ಗವಾಗುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳು ದೊರೆತು ಉತ್ತಮ ಪ್ರದರ್ಶನ ನೀಡಬಹುದು. ಗುರುಕುಲಗಳನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ಕೃಷಿ ಪಂಡಿತರಿಗೆ ಉತ್ತಮ ಗೌರವ ದೊರೆಯುತ್ತದೆ. ನರ ದೌರ್ಬಲ್ಯಗಳು ಮತ್ತು ಶೀತಗಳಿರುವವರು ಹೆಚ್ಚು ಎಚ್ಚರ ವಹಿಸಿರಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಚೇತರಿಕೆ ಕಾಣಬಹುದು. ಕೃಷಿಕರಿಗೆ ಲಾಭವಿರುತ್ತದೆ. ಧರ್ಮ ಶ್ರದ್ಧೆ ಹೆಚ್ಚಾಗುತ್ತದೆ. ಹೆಚ್ಚಿನ ಒಳಿತಿಗಾಗಿ ದುರ್ಗಾ ಧ್ಯಾನ ಮಾಡಿರಿ.
ಮೀನ
ಬಹಳ ಅಸಹನೆ ನಿಮ್ಮಲ್ಲಿ ತುಂಬಿರುತ್ತದೆ. ಆದಾಯವು ಸಾಮಾನ್ಯವಾಗಿರುತ್ತದೆ. ನಿಮ್ಮ ಹಿರಿಯರ ಸಹಕಾರವನ್ನು ನೀವು ಬಯಸುವಿರಿ. ಕೃಷಿಯಿಂದ ಹೆಚ್ಚಿನ ಆದಾಯಗಳು ಬರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಪಡೆಯುವ ಅವಕಾಶವಿದೆ. ಹಿರಿಯರಿಗೆ ನರದೌರ್ಬಲ್ಯ ಕಾಡಬಹುದು. ಕೃಷಿ ಭೂಮಿಯನ್ನು ಹೊಂದುವ ಯೋಗವಿದೆ. ಸಂಗಾತಿಯ ಧನ ಸಹಕಾರ ಸ್ವಲ್ಪ ಕಡಿಮೆಯಾಗುತ್ತದೆ. ರಾಜಕಾರಣಿಗಳಿಗೆ ಒಂದು ಕಡೆಯಿಂದ ಜನರ ಬೆಂಬಲ ದೊರೆತರೆ ಮತ್ತೊಂದು ಕಡೆಯಿಂದ ಕಡಿಮೆಯಾಗುತ್ತದೆ. ಮಹಿಳೆಯರು ನಡೆಸುವ ವ್ಯವಹಾರಗಳಲ್ಲಿ ಪ್ರಗತಿ ಇರುವುದಿಲ್ಲ. ಹೆಚ್ಚಿನ ಒಳಿತಿಗಾಗಿ ದುರ್ಗಾ ಮತ್ತು ಶನೇಶ್ಚರ ಧ್ಯಾನ ಮಾಡಿರಿ.
ADVERTISEMENT
ADVERTISEMENT