ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮೇ 21 ಭಾನುವಾರ 2023
Published 20 ಮೇ 2023, 20:03 IST
ಪ್ರಜಾವಾಣಿ ವಿಶೇಷ
author
ಮೇಷ
ಮಗಳ ಮದುವೆಯ ಮಾತುಕತೆಯಲ್ಲಿ ಮಾತನಾಡುವಾಗ ಬುದ್ಧಿವಂತಿಕೆಯಿAದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ನಿಮ್ಮಿಷ್ಟದ ಸಿಹಿ ಖಾದ್ಯಗಳನ್ನು ಸೇವಿಸುವ ಯೋಗ ಇದೆ. ಕುಶಲಕರ್ಮಿಗಳಿಗೆ ಉತ್ತಮವಾದ ದಿನ.
ವೃಷಭ
ಮೃತ ವ್ಯಕ್ತಿಗಳ ಆಸ್ತಿಯನ್ನು ಸೇರಬೇಕಾದವರಿಗೆಲ್ಲರಿಗು ಸೇರಿಸುವಂತಹ ಕೆಲಸವನ್ನು ಮಾಡಬೇಕಾದೀತು. ಹೂವು ಹಣ್ಣು ವ್ಯಾಪಾರವನ್ನು ಮಾಡುವವರಿಗೆ ಲಾಭ ಹಾಗು ನಷ್ಟಗಳೆರೆಡರ ಮಿಶ್ರಫಲವು ಅನುಭವಕ್ಕೆ ಬರುವುದು.
ಮಿಥುನ
ಮುತುವರ್ಜಿವಹಿಸಿ ಮಾಡಿದ ಕೆಲಸವು ಸಣ್ಣ ಮಕ್ಕಳಿಂದಾಗಿ ಹಾಳಾಗುವುದು. ನಿಮ್ಮ ಕೋಪವನ್ನು ಶಮನ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗುವುದು. ನಿಮ್ಮ ಒಳ ಮನಸ್ಸಿಗೆ ಗೋಚರಿಸಿದ ಅವಘಡವು ನಿಜವಾಗುವ ಸಂಭವವಿದೆ.
ಕರ್ಕಾಟಕ
ಸರಿಯಾದ ರೀತಿಯಲ್ಲಿ ರೂಪುರೇಷೆಯನ್ನು ಹಾಕಿಕೊಳ್ಳದೆ ಶುರು ಮಾಡಿದ ಕೆಲಸವು ಶುರುವಿನಲ್ಲಿಯೇ ಹಲವಾರು ವಿಘ್ನಗಳನ್ನು ಎದುರಿಸುವುದು. ಉದ್ಯಮಿಗಳು ಕೆಲಸಗಾರರ ಕಾರ್ಯದ ಗುಣಮಟ್ಟವನ್ನು ಪರೀಕ್ಷೆ ಮಾಡುವಿರಿ.
ಸಿಂಹ
ಭಾಗವತ ಅಥವಾ ಮಹಾಭಾರತದಂತಹ ಧಾರ್ಮಿಕ ಉಪನ್ಯಾಸಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುವ ಸಾಧ್ಯತೆ ಇದೆ. ಹಿಂದೊAದು ದಿನ ಬದುಕಿನಲ್ಲಿ ನಡೆದ ಅತ್ಯಂತ ಮುಖ್ಯಘಟ್ಟವನ್ನು ಸ್ಮರಣೆ ಮಾಡುವಿರಿ.
ಕನ್ಯಾ
ನಾಟಕ ಅಥವ ಸಿನಿಮಾದಲ್ಲಿ ನಟನೆ ಮಾಡುವಂತವರಿಗೆ ಉತ್ತಮ ಅವಕಾಶಗಳ ಜೊತೆ ಹೆಸರು ಸಹ ಬರಲಿದೆ. ಮನೆಯಲ್ಲಿ ಮಳೆಗಾಲಕ್ಕೆ ಸಹಾಯವಾಗುವಂತಹ ಸಣ್ಣ ಪುಟ್ಟ ಮಾರ್ಪಾಡಿನ ಕಾರ್ಯಗಳನ್ನು ನಡೆಸುವಿರಿ.
ತುಲಾ
ನಿಯತಕಾಲಿಕ ಚಿಕಿತ್ಸೆಗಳನ್ನು ತಪ್ಪಿಸದೆ ತೆಗೆದುಕೊಳ್ಳಿರಿ. ಭವಿಷ್ಯದ ನಿಮ್ಮ ಜೀವನದ ಬಗ್ಗೆ ಅತ್ಯಂತ ಗಂಭೀರವಾಗಿ ಯೋಚಿಸುವಿರಿ. ಸೂಕ್ತ ಸಮಯದಲ್ಲಿ ಕೆಲಸಗಳನ್ನು ಮಾಡಿಕೊಳ್ಳದೆ ಕಡೇಯ ಘಳಿಗೆಯಲ್ಲಿ ಕಷ್ಟಪಡುವಿರಿ.
ವೃಶ್ಚಿಕ
ಲಕ್ಶ÷್ಯಗೊಟ್ಟು ಕೇಳಿದ ವಿಷಯಗಳು ಕ್ಲಿಪ್ತವಾದ ಸಮಯದಲ್ಲಿ ಪ್ರಯೋಜನಕ್ಕೆ ಬರಲಿದೆ. ಶುಭ್ರವಾದ ಉಡುಗೆ ತೊಡುಗೆಗಳು ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತದೆ. ವಾಹನ ಖರೀದಿಗೆ ಸ್ವಲ್ಪಕಾಲ ಕಾಯುವುದು ಒಳ್ಳೆಯದು.
ಧನು
ಕೃತಕವಾಗಿ ಮನೆಯಿಂದ ಹೊರಗೆ ಸಂತೋಷವನ್ನು ಹುಡುಕುವ ಬದಲು ಮನೆಯವರಲ್ಲೇ ಖುಷಿಯಾಗಿ ಇರುವ ಪ್ರಯತ್ನ ನಡೆಸಿ. ನಿಜವೆಂದು ತೋರುವ ಕೆಲವು ವಿಷಯಗಳು ಪರಾಮರ್ಶೆಯ ನಂತರ ಹುಸಿ ಎಂದು ತಿಳಿಯುವುದು.
ಮಕರ
ಪತ್ತೇದಾರಿ ಕೆಲಸದಲ್ಲಿರುವವರಿಗೆ ನಿಮ್ಮ ಗುರುತು ಹಿಡಿದು ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುವರು. ಕಷ್ಟವಾದ ಕೆಲಸಗಳನ್ನು ಸರಳೀಕರಿಸಿಕೊಳ್ಳುವ ಸರ್ವಪ್ರಯತ್ನಗಳನ್ನು ಸಹ ನಡೆಸುವಿರಿ. ನೃತ್ಯಗಾರರು ಹೆಚ್ಚಿನ ಸಾಧನೆ ಮಾಡುವಿರಿ.
ಕುಂಭ
ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕ ಯಶಸ್ಸು ಕಾಣುವಿರಿ. ಸಂಬAಧಿಕರೊಬ್ಬರ ಆಸ್ತಿಯನ್ನು ಕೊಳ್ಳುವ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕೆಲಸವು ಭಿನ್ನಾಭಿಪ್ರಾಯವನ್ನು ಮೂಡಿಸಲಿದೆ. ದಿನದ ಆರಂಭದಲ್ಲಿ ಕೆಲಸಗಳು ನಿರೀಕ್ಷಿತ ಹಾದಿಯಲ್ಲಿ ಸಾಗುವುದು.
ಮೀನ
ಇಂಧನ ಮಾರಾಟಗಾರರಿಗೆ ಇಂದಿನ ದಿನ ಅನುಕೂಲಕರವಾಗಿರುವುದು. ನಿಮ್ಮ ಸ್ಪರ್ಧಾತ್ಮಕ ಮನೋಭಾವ ಹೊಸ ಸಾಹಸಕ್ಕೆ ಕೈ ಹಾಕಲು ಪ್ರೇರೇಪಿಸುವುದು. ಇನ್ನೊಬ್ಬರ ಜೀವನದಲ್ಲಿ ನಿಮ್ಮ ಪಾತ್ರ ಮಹತ್ವದ್ದು ಎಂದು ತಿಳಿದು ಬಹಳ ಸಂತೋಷವಾಗುವುದು.