ಗುರುವಾರ, 21 ಮೇ 2026
×
ADVERTISEMENT
ಗ್ಯಾರಂಟಿ ನಿರಾತಂಕ, ಅಭಿವೃದ್ಧಿಗೂ ಅಂಕ: ಇದು ಸಿದ್ದರಾಮಯ್ಯ ಅರ್ಥಲೋಕ
ಗ್ಯಾರಂಟಿ ನಿರಾತಂಕ, ಅಭಿವೃದ್ಧಿಗೂ ಅಂಕ: ಇದು ಸಿದ್ದರಾಮಯ್ಯ ಅರ್ಥಲೋಕ
ಫಾಲೋ ಮಾಡಿ
Published 6 ಮಾರ್ಚ್ 2026, 20:10 IST
Last Updated 7 ಮಾರ್ಚ್ 2026, 4:44 IST
Comments
ಮದ್ಯ ದುಬಾರಿ..?
ಮದ್ಯದ ದರ ಏರಿಕೆಯಾಗುವ ಎಲ್ಲ ಸೂಚನೆಗಳೂ ಬಜೆಟ್‌ ವಿವರಗಳಲ್ಲಿ ಇವೆ. ಈಗ ಬಿಯರ್‌, ವೈನ್‌, ವಿಸ್ಕಿ... ಹೀಗೆ ಮದ್ಯದ ಸ್ವರೂಪ ಆಧರಿಸಿ ಭಿನ್ನ ದರದ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಮುಂದೆ ಪ್ರತಿ ಸ್ವರೂಪದ ಮದ್ಯದಲ್ಲಿರುವ ಆಲ್ಕೊಹಾಲ್‌ ಪ್ರಮಾಣ ಆಧರಿಸಿ ಅಬಕಾರಿ ಸುಂಕ ವಿಧಿಸಲಾಗುತ್ತದೆ. 2026–27ನೇ ಸಾಲಿನಲ್ಲಿ ಅಬಕಾರಿ ಸುಂಕ ಮೂಲದ ₹45,000 ಕೋಟಿ ಆದಾಯ ಗುರಿ ಹಾಕಿಕೊಳ್ಳಲಾಗಿದೆ. ಮದ್ಯದ ಬೆಲೆ ಏರಿಕೆಯಾಗಲಿದೆ ಎಂಬುದನ್ನೇ ಇದೂ ಸೂಚಿಸುತ್ತದೆ.
ಕಲೆ: ಸಂತೋಷ್ ಸಸಿಹಿತ್ಲು

ಕಲೆ: ಸಂತೋಷ್ ಸಸಿಹಿತ್ಲು

ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ
16 ವರ್ಷದೊಳಗಿನ ಮಕ್ಕಳಿಗೆ ಜಾಲತಾಣದ ಬಳಕೆಯನ್ನು ನಿಷೇಧಿಸ ಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮ ಗಳನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುವುದು ಎಂದೂ ಉಲ್ಲೇಖಿಸಲಾಗಿದೆ.
32 ಸಾವಿರ ಹುದ್ದೆಗೆ ನೇಮಕ
ವಿವಿಧ ಇಲಾಖೆಗಳ ಗುರಿಗಳನ್ನು ಬಜೆಟ್‌ನಲ್ಲಿ ನಿಗದಿ ಪಡಿಸುವಾಗ 32 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಪ್ರಸ್ತಾಪಿಸಲಾಗಿದೆ. ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳ ಪೈಕಿ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ 30 ದಿನದೊಳಗೆ ಚಾಲನೆ ನೀಡಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳ ಲಾಗಿತ್ತು. ಈಗ ಪ್ರಸ್ತಾಪಿಸಿ ರುವ ನೇಮಕಾತಿಗೆ ಕಾಲಮಿತಿ ನಿಗದಿಪಡಿಸಿಲ್ಲ.
ಆದಾಯದ ಕೊರತೆ, ಹೆಚ್ಚುತ್ತಿರುವ ಸಾಲ, ತಾಳಮೇಳವಿಲ್ಲದ ಅನುದಾನ ಹಂಚಿಕೆ... ಸಿದ್ದರಾಮಯ್ಯ ಅವರ ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್‌ ಪುಸ್ತಕವೇ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟುಮಾಡಿದ್ದಾರೆ. ಈ ಬಜೆಟ್‌ ಕರ್ಣಕಠೋರ ಮತ್ತು ರಾಜ್ಯಕ್ಕೆ ಭಾರ. ಮುಖ್ಯಮಂತ್ರಿ ಅವರು ಕೇಂದ್ರದ ನಿಂದನೆಯನ್ನು ಈಗಲೂ ಮುಂದುವರಿಸಿದ್ದಾರೆ.
– ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಮೇಲೆ ಸಾಲದ ಹೊರೆ ಹೇರಿದ್ದಾರೆ. ಈ ಸರ್ಕಾರವು ಒಟ್ಟು ₹4.39 ಲಕ್ಷ ಕೋಟಿ ಸಾಲ ಮಾಡಿದೆ. ಈ ಹಣಕ್ಕೆ ಬಡ್ಡಿ ಪಾವತಿಸಲೂ ಆಗದ ಪರಿಸ್ಥಿತಿ ಇದೆ. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರವು ಈಗ, ‘ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ’ ಎನ್ನುತ್ತಿದೆ. ಯಾವ ಯೋಜನೆಯೂ ಇಲ್ಲದ ಖಾಲಿ ಚೊಂಬಿನ ಬಜೆಟ್‌ ಇದು.
– ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT