ಮುಂಬೈ: ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಯುದ್ಧ ವಿರಾಮ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಕಂಡಿದೆ. ಇದರ ಬೆನ್ನಲ್ಲೇ, ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಗಮನಾರ್ಹ ಏರಿಕೆ ದಾಖಲಿಸಿವೆ.

30 ಷೇರುಗಳ ಗುಚ್ಚ ಬಿಎಸ್ಇ ಸೆನ್ಸೆಕ್ಸ್ 2,775.73 ಅಂಶ ಅಥವಾ ಶೇ 3.71ರಷ್ಟು ಏರಿಕೆ ಕಂಡು 77,392ರಲ್ಲಿ ವಹಿವಾಟು ಆರಂಭಿಸಿದರೆ, 50 ಷೇರುಗಳ ಎನ್ಎಸ್ಇ ನಿಫ್ಟಿ 815 ಅಂಶ ಅಥವಾ ಶೇ 3.52ರಷ್ಟು ಏರಿಕೆ ಕಂಡು 23,938 ರಲ್ಲಿ ವಹಿವಾಟು ಆರಂಭಿಸಿದೆ.

ಸೆನ್ಸೆಕ್ಸ್ ಕಂಪನಿಗಳ ಪೈಕಿ ಇಂಟರ್ಗ್ಲೋಬ್ ಏವಿಯೇಶನ್ ಷೇರು ಶೇ 10ರಷ್ಟು ಏರಿಕೆ ಕಂಡಿದೆ. ಎಲ್ ಅಂಡ್ ಟಿ, ಬಜಾಜ್ ಫೈನಾನ್ಸ್, ಅದಾನಿ ಪೋರ್ಟ್ಸ್, ಬಜಾಜ್ ಫಿನ್ಸರ್ವ್, ಮಹಿಂದ್ರ ಅಂಡ್ ಮಹೀಂದ್ರ ಅಧಿಕ ಲಾಭ ಗಳಿಸಿದ ಕಂಪನಿಗಳಾಗಿವೆ. ಈ ಪೈಕಿ ಟೆಕ್ ಮಹೀಂದ್ರ ಮಾತ್ರ ನಷ್ಟ ಕಂಡಿದೆ.

ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲ ದರ ಶೇ 13.24ರಷ್ಟು ಕುಸಿದಿದ್ದು, ಪ್ರತಿ ಬ್ಯಾರಲ್ಗೆ 94.80 ಡಾಲರ್ ಆಗಿದೆ.

ಷೇರುಪೇಟೆ ಜಿಗಿತಕ್ಕೆ ಕಾರಣ

‘ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ಎರಡು ವಾರ ತಡೆ, ಹೊರ್ಮುಜ್ ಮೂಲಕ ಹಡಗುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಇರಾನ್ ಸಮ್ಮತಿಯು ಇಂಧನ ಸರಬರಾಜು ಅಡೆತಡೆಯ ಕಳವಳವನ್ನು ತಗ್ಗಿಸಿದೆ. ಇದು ಜಾಗತಿಕ ಮಾರುಕಟ್ಟೆ ಮೇಲೆ ಪ್ರಮುಖ ಪರಿಣಾಮ ಬೀರಿದೆ’ ಎಂದು ಲೈವ್ಲಾಂಗ್ ವೆಲ್ತ್ನ ಸಂಸ್ಥಾಪಕ ಮತ್ತು ಸಂಶೋಧನಾ ವಿಶ್ಲೇಷಕ ಹರಿಪ್ರಸಾದ್ ಕೆ ತಿಳಿಸಿದ್ದಾರೆ.

ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಶಮನವು ಕಚ್ಚಾ ತೈಲ ಬೆಲೆ ಇಳಿಕೆಗೂ ಕಾರಣವಾಗಿದೆ. ಇದು ಭಾರತದಲ್ಲಿ ಹಣದುಬ್ಬರ ಮತ್ತು ಕರೆನ್ಸಿ ಮೌಲ್ಯದ ದೃಷ್ಟಿಯಿಂದಲೂ ಉತ್ತಮವಾಗಿದ ಎಂದು ಅವರು ಹೇಳಿದ್ದಾರೆ.

ಏಷ್ಯಾ ಮಾರುಕಟ್ಟೆಗಳಾದ ಜಪಾನ್ನ ನಿಕ್ಕಿ, ದಕ್ಷಿಣ ಕೊರಿಯಾದ ಕಾಸ್ಪಿ, ಶಾಂಘೈನ ಎಸ್ಎಸ್ಇ ಕಾಂಪೊಸಿಟ್ ಮತ್ತು ಹಾಂಕಾಂಗ್ನ ಹ್ಯಾಂಗ್ಸೆಂಗ್ ಗಮನಾರ್ಹ ಏರಿಕೆ ದಾಖಲಿಸಿವೆ.
.ಸಂಪೂರ್ಣ ಹಾನಿ ಭರಿಸಬೇಕು: ಅಮೆರಿಕ ಎದುರು ಇರಾನ್ ಇಟ್ಟಿರುವ 10 ಷರತ್ತುಗಳಿವು.ಕದನ ವಿರಾಮ: ಕುಸಿದ ತೈಲ ಬೆಲೆ, ಷೇರುಪೇಟೆಗಳಲ್ಲಿ ಗೂಳಿ ಓಟ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.