ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28ರಂದು ನಡೆಯಲಿರುವ ಐಪಿಎಲ್ ಟಿ–20 ಕ್ರಿಕೆಟ್ ಪಂದ್ಯದ ಟಿಕೆಟ್ ಇರುವವರು ‘ನಮ್ಮ ಮೆಟ್ರೊ’ದಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಎರಡೂ ಕಡೆಯ ಪ್ರಯಾಣಕ್ಕೆ ಐಪಿಎಲ್ ಪಂದ್ಯದ ಟಿಕೆಟ್ಗಳಲ್ಲಿ ‘ನಮ್ಮ ಮೆಟ್ರೊ’ ಕ್ಯೂಆರ್ ಕೋಡ್ ಮುದ್ರಿತವಾಗಿರುತ್ತದೆ. ಡಿಜಿಟಲ್ ಐಪಿಎಲ್ ಟಿಕೆಟ್ಗಳಲ್ಲಿಯೂ ಲಭ್ಯವಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಅವಧಿ ವಿಸ್ತರಣೆ: ಏ.28ರಂದು ವಿವಿಧ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೊ ಸಂಚಾರವನ್ನು ವಿಸ್ತರಣೆ ಮಾಡಲಾಗಿದೆ. ವೈಟ್ಫೀಲ್ಡ್ನಿಂದ (ಕಾಡುಗೋಡಿ) ರಾತ್ರಿ 12.30ಕ್ಕೆ, ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಹಾಗೂ ಮಾದಾವರ ಟರ್ಮಿನಲ್ಗಳಿಂದ ರಾತ್ರಿ 12.45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 1ಕ್ಕೆ, ಆರ್.ವಿ. ರಸ್ತೆ ಯಿಂದ ರಾತ್ರಿ 2ಕ್ಕೆ ಕೊನೆ ರೈಲು ಸಂಚರಿಸಲಿದೆ.

ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ.

ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ /ನಿರ್ಗಮನ ಗೇಟ್ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣವನ್ನು ಬಳಸುವಂತೆ ಹಾಗೂ ಲಿಂಕ್ ರಸ್ತೆ ಭಾಗದಿಂದ ಪ್ರವೇಶ, ನಿರ್ಗಮನ ಗೇಟ್ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೊ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.

ಕೇಂದ್ರ ವ್ಯವಹಾರ ಪ್ರದೇಶ (ಸಿಬಿಡಿ) ಹಾಗೂ ಸ್ಟೇಡಿಯಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೊದಲ್ಲಿ ಪ್ರಯಾಣಿಸುವುದು ಉತ್ತಮವಾಗಿದೆ. ಪೊಲೀಸ್, ಸ್ಟೇಡಿಯಂ ನಿರ್ವಹಣೆ ಮತ್ತು ಬಿಎಂಆರ್ಸಿಎಲ್ ಸಿಬ್ಬಂದಿಯ ನಿರ್ದೇಶನಗಳನ್ನು ಪ್ರಯಾಣಿಕರು ಅನುಸರಿಸಬೇಕು ಎಂದು ವಿನಂತಿಸಲಾಗಿದೆ.

ಯಾವುದೇ ಅನಾಹುತಗಳು ಅಥವಾ ಅಹಿತಕರ ಘಟನೆಗಳನ್ನು ತಡೆಗಟ್ಟುವ ಹಿತದೃಷ್ಟಿಯಿಂದ, ಅಗತ್ಯವಿದ್ದಲ್ಲಿ ಮೆಟ್ರೊ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು ಬಿಎಂಆರ್ಸಿಎಲ್ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.