ಚಿಕ್ಕಮಗಳೂರು: ನಕಲಿ ಸಾಗುವಳಿ ಚೀಟಿ, ಮ್ಯುಟೇಷನ್ ಸೃಷ್ಟಿಸಿ ರೆಕಾರ್ಡ್ ರೂಂ ಕಡತದಲ್ಲಿ ಸೇರ್ಪಡೆ ಮಾಡುವ ಮೂಲಕ 450 ಎಕರೆ ಸರ್ಕಾರಿ ಭೂಮಿ ಕಬಳಿಸಿರುವುದು ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

1996ರಿಂದ 2001ರ ಅವಧಿಯಲ್ಲಿ 10 ಗುಂಟೆಯಿಂದ ಗರಿಷ್ಠ 4 ಎಕರೆ ತನಕ 147 ಜನರಿಗೆ ಭೂಮಂಜೂರಾತಿ ಆಗಿದೆ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಅಲ್ಲದೇ ಅಷ್ಟೂ ಮ್ಯುಟೇಷನ್ ಮತ್ತು ಕೈ ಬರಹದ ಪಹಣಿಗಳನ್ನು ತರೀಕೆರೆಯ ಸರ್ಕಾರಿ ಅಭಿಲೇಖಾಲಯದ ಪಟ್ಟಿಗೆ ಅನಧಿಕೃತವಾಗಿ ಸೇರ್ಪಡೆ ಮಾಡಲಾಗಿದೆ. ಒಟ್ಟಾರೆ 450 ಎಕರೆ 23 ಗುಂಟೆ ಕಬಳಿಸಲಾಗಿದೆ ಎಂದು ತಹಶೀಲ್ದಾರ್ ನೇತೃತ್ವದ ತನಿಖಾ ತಂಡ ವರದಿ ಮಾಡಿದೆ.

ಸಾಗುವಳಿ ಚೀಟಿಯೊಂದಿಗೆ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯಕ್ಕೆ ದಾಖಲೆ ಒದಗಿಸಲು ತರೀಕೆರೆ ರೆಕಾರ್ಡ್ ರೂಂನಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಆ ಸಂಖ್ಯೆಯ ದಾಖಲೆಗಳು ಪತ್ತೆಯಾಗಿಲ್ಲ. ನ್ಯಾಯಲಯಕ್ಕೆ ಸಲ್ಲಿಕೆಯಾಗಿರುವ ಸಾಗುವಳಿ ಚೀಟಿಗಳಲ್ಲಿ ನಮೂದಾಗಿರುವ ಸಂಖ್ಯೆಯನ್ನು ಗಮನಿಸಿದರೆ ಅದು ಬೇರೆ ಊರಿನಲ್ಲಿ ನೀಡಿರುವ ಸಾಗುವಳಿ ಚೀಟಿಯಾಗಿದೆ. ಮನಸ್ಸಿಗೆ ಬಂದಂತೆ ಸಾಗುವಳಿ ಚೀಟಿ ಸಂಖ್ಯೆ ನೀಡಿ ನಕಲಿಯಾಗಿ ಸೃಷ್ಟಿಸಿ ಹಂಚಿಕೆ ಮಾಡಲಾಗಿದೆ ಎಂದು ದೂರಲಾಗಿತ್ತು.

ಈ ಜಾಡು ಹಿಡಿದು ಅಷ್ಟೂ ದಾಖಲೆಗಳನ್ನು ತಹಶೀಲ್ದಾರ್ ವಿನಾಯಕ ಸಾಗರ್ ನೇತೃತ್ವದ ತನಿಖಾ ತಂಡ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ 147 ಪ್ರಕರಣಗಳಲ್ಲಿ ಮ್ಯುಟೇಷನ್ಗಳು ಮತ್ತು ಕೈಬರಹದ ಪಹಣಿಗಳನ್ನು ರೆಕಾರ್ಡ್ ರೂಂ ಕಡತಗಳಲ್ಲಿ ಸೇರ್ಪಡೆ ಮಾಡಿರುವುದು ಗೊತ್ತಾಗಿದೆ. ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ತಹಶೀಲ್ದಾರ್, ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಸಹಿಗಳು ಬೇರೆ ಬೇರೆ ಕಡತಗಳಲ್ಲಿ ಹುಡುಕಿ ತಾಳೆ ಹಾಕಲಾಗಿದೆ. ಆದರೆ, ಸಹಿಗಳು ತಾಳೆಯಾಗುತ್ತಿಲ್ಲ.

ತರೀಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಸಿದ್ದರಹಳ್ಳಿ, ದೋರನಾಳು, ಹುರುಳಿಹಳ್ಳಿ, ಯರೇಬೈಲು, ಮಳಲಿಚನ್ನೇನಹಳ್ಳಿ, ಜೋಡಿಕೋಡಿಹಳ್ಳಿ, ಎಚ್.ತಿಮ್ಮಾಪುರ, ಯಲುಗೆರೆ, ಎಚ್.ರಂಗಾಪುರ, ಹಿರೇಕಾತೂರು, ಲಿಂಗದಹಳ್ಳಿ ಹೋಬಳಿಯ ಹೊಸಹಳ್ಳಿ, ಅಮೃತಾಪುರ ಹೋಬಳಿಯ ಮುಂಡ್ರೆ, ಲಕ್ಕವಳ್ಳಿ ಹೋಬಳಿಯ ಗುರುಪುರ, ಶಾಂತಿಪುರ, ಗುಡ್ಡದಬೀರನಹಳ್ಳಿ, ಕರಕುಚ್ಚಿ, ಹಿರಿಗಾಪುರ, ವಡ್ಡರದಿಬ್ಬ, ಗೋಪಾಲ ಗ್ರಾಮಗಳ ಸರ್ಕಾರಿ ಜಮೀನಿಗೆ ಸಂಬಂಧಿಸಿದ ಅಕ್ರಮ ಮ್ಯುಟೇಷನ್ಗಳು ಸೃಷ್ಟಿಯಾಗಿವೆ ಎಂಬುದನ್ನು ತನಿಖಾ ತಂಡ ಪಟ್ಟಿ ಮಾಡಿದೆ.

ಎಚ್.ತಿಮ್ಮಾಪುರ, ಶಾಂತಿಪುರ ಮತ್ತು ಗುಡ್ಡದಬೀರನಹಳ್ಳಿ ಗ್ರಾಮಗಳ ಸರ್ವೆ ನಂಬರ್ಗಳಲ್ಲೇ ಹೆಚ್ಚು ಅಕ್ರಮ ಮ್ಯುಟೇಷನ್ಗಳು ಸೃಷ್ಟಿಯಾಗಿವೆ ಎಂಬುದನ್ನು ತನಿಖಾ ವರದಿ ಅಂಕಿ–ಅಂಶಗಳು ಹೇಳುತ್ತವೆ.

ಮ್ಯುಟೇಷನ್ ಪುಸ್ತಕವೇ ಇಲ್ಲ

ನಾಗೇನಹಳ್ಳಿ, ಸಂತೇದಿಬ್ಬದ ಕಾವಲು, ಶಿವಪುರ, ಕೆ.ಚಟ್ನಹಳ್ಳಿ, ನೇರಲೆಕೆರೆ, ಮುಂಡನಹಳ್ಲಿ, ಎ.ಗೊಲ್ಲರಹಳ್ಳಿ, ಸಾವೆ ಮರಡಿಕಾವಲು, ಗುಂಡೇನಹಳ್ಳಿ, ಅರಸೀಕೆರೆ ಗ್ರಾಮಗಳಿಗೆ ಸಂಬಂಧಿಸಿದ ಮ್ಯೂಟೇಷನ್ ಪುಸ್ತಕಗಳೇ ಕಚೇರಿಯಲ್ಲಿ ಲಭ್ಯ ಇಲ್ಲದಿರುವುದನ್ನೂ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪುಸ್ತಕ ಲಭ್ಯವಿಲ್ಲದಿರುವುದರಿಂದ ಆ ಗ್ರಾಮಗಳ ಸಾಗುವಳಿ ಚೀಟಿಗಳ ನೈಜತೆ ಪರಿಶೀಲನೆ ಸಾಧ್ಯವಾಗಿಲ್ಲ. 147 ಪ್ರಕರಣಗಳಲ್ಲಿ ಕೇವಲ ಕೈ ಬರಹದ ಮ್ಯುಟೇಷನ್ಗಳಾಗಿದ್ದು, ನಂತರದಲ್ಲಿ ಡಿಜಿಟಲ್ ಆರ್ಟಿಸಿಯಲ್ಲಿ ನಮೂದಾಗಿಲ್ಲ. 26 ವರ್ಷಗಳ ನಂತರವೂ ಇಷ್ಟು ಮ್ಯುಟೇಷನ್ಗಳು ಡಿಜಿಟಲ್ ಆರ್ಟಿಸಿಯಲ್ಲಿ ನಮೂದಾಗದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರಿ ಜಾಗ ಕಬಳಿಸಲು ಅನಧಿಕೃತವಾಗಿ ಸೃಷ್ಟಿಸಿ ಕಚೇರಿಯ ರೆಕಾರ್ಡ್ ರೂಂ ಕಡತಗಳಲ್ಲಿ ಸೇರಿಸಲಾಗಿದೆ ಎಂದು ತಂಡ ಶಂಕಿಸಿದೆ. ನಕಲಿ ದಾಖಲೆಗಳನ್ನು ಕಡತಗಳಲ್ಲಿ ಸೇರಿಸುವಲ್ಲಿ ಕಚೇರಿಯ ಸಿಬ್ಬಂದಿ ಮತ್ತಿತರರ ಕೈವಾಡವಿರುವ ಶಂಕೆ ಇದೆ. ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತರೀಕೆರೆ ಠಾಣೆಗೆ ತಹಶೀಲ್ದಾರ್ ದೂರು ನೀಡದ್ದು, ಬುಧವಾರ ಎಫ್ಐಆರ್ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.