ಕಲಬುರಗಿ: ಮಗುವನ್ನು ನೋಡಲು ಬಂದ ಗಂಡನನ್ನೇ ಹೆಂಡತಿ ಹಾಗೂ ಆಕೆಯ ಮನೆಯವರು ಕೈಕಾಲು ಕಟ್ಟಿಹಾಕಿ ಕೊಲೆ ಮಾಡಿದ ಘಟನೆ ಇಲ್ಲಿನ ರಾಘವೇಂದ್ರ ನಗರದ ಹೆಂಡತಿ ಮನೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ವೃತ್ತಿಯಲ್ಲಿ ಚಾಲಕನಾಗಿರುವ, ಕನಕನಗರದ ಈಶ್ವರ್ (26) ಕೊಲೆಯಾದ ವ್ಯಕ್ತಿ. ಆತನ ಪತ್ನಿ ರಂಜಿತಾ ಕೊಲೆ ಮಾಡಿದ ಆರೋಪಿ.
ನಾಲ್ಕೈದು ವರ್ಷಗಳ ಹಿಂದೆ ಈಶ್ವರ್-ರಂಜಿತಾ ಮದುವೆಯಾಗಿತ್ತು. ದಂಪತಿಯ ಮಧ್ಯೆ ಜಗಳವಾಗಿದ್ದರಿಂದ ರಂಜಿತಾ ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದಳು. ಮಗುವನ್ನು ನೋಡಲು ಬಂದಾಗ ಮಾತಿಗೆ ಮಾತು ಬೆಳೆದು ಈಶ್ವರ್ ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.