ನಂಜನಗೂಡು: ನಗರದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿ ಚಾಮರಾಜನಗರ ತಾಲ್ಲೂಕಿನ ಗಾಳಿಪುರ ಗ್ರಾಮದ ಸಯ್ಯದ್ ರಿಯಾಜ್ ಎಂಬುವನನ್ನು ನಗರ ಠಾಣೆಯ ಪೊಲೀಸರು ಬಂಧಿಸಿ, ಕಳವು ಮಾಡಿದ್ದ ಚಿನ್ನ ಹಾಗೂ ನಗದನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಸಯ್ಯದ್ ರಿಯಾಜ್, ನಗರದ ಶ್ರೀಕಂಠಪುರಿ ಬಡಾವಣೆಯಲ್ಲಿ 5 ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ ನಡೆಸಿದ್ದ. ಮಾರ್ಚ್ 1 ರಂದು ನಗರದ ಬಸ್ ನಿಲ್ದಾಣದ ಪಕ್ಕದ ಹಾಸನ ಅಯ್ಯಂಗಾರ್ ಬೇಕರಿಯ ಬೀಗ ಮುರಿದು ಕಳ್ಳತನ ಮಾಡಿದ್ದ. ಆರೋಪಿಯಿಂದ ₹9,700 ನಗದು, 26 ಗ್ರಾಂ ಚಿನ್ನಾಭರಣ, 2 ಬ್ಯಾಟರಿ ಹಾಗೂ ಕಳ್ಳತನಕ್ಕೆ ಬಳಸಿದ್ದ ಬೈಕನ್ನು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿವೈಎಸ್ ಪಿ. ರಘು ತಿಳಿಸಿದ್ದಾರೆ.

ಆರೋಪಿಯ ಬಂಧನಕ್ಕಾಗಿ ಸಿಪಿಐ ರವೀಂದ್ರ ನೇತೃತ್ವದಲ್ಲಿ ಎಎಸ್ಐಗಳಾದ ಶಿವ, ಸತೀಶ್, ಹೆಡ್ ಕಾನ್ಸ್ಟೆಬಲ್ಗಳಾದ ಅಬ್ದುಲ್ ಲತೀಫ್, ಅಶೋಕ, ಭಾಸ್ಕರ್, ಶ್ರೀನಿವಾಸ್, ಶಿವಕುಮಾರ್, ಮಹೇಶ್, ತಿಮ್ಮಯ್ಯ, ಚೇತನ್, ಕೃಷ್ಣ ಸೇರಿ 14 ಮಂದಿತ ತಂಡ ರಚಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಕಾರ್ಜುನ ಬಾಲದಂಡಿ ನಗರ ಪೊಲೀಸರನ್ನು ಅಭಿನಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.